ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸಮ್ಮುಖದಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ ಕಾರ್ಯಕರ್ತರು

1 Min Read

 

 

ಚಿತ್ರದುರ್ಗ, (ಸೆ.24) : ನಗರಸಭೆ ಮಾಜಿ ಸದಸ್ಯ, ಜೆಡಿಎಸ್ ಮುಖಂಡ, ರಾಯಲ್ ಸ್ಪೋರ್ಟ್ಸ್ ಕಬ್ಲ್ ಅಧ್ಯಕ್ಷ ಎಚ್‌.ಎನ್.ಲೋಕೇಶ್ ಕುಮಾರ್ ನೂರಾರು ಕಾರ್ಯಕರ್ತರು, ಅಭಿಮಾನಿಗಳ ಜೊತೆ ಜೆಡಿಎಸ್ ತೊರೆದು ಹಿರಿಯ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರ ನಿವಾಸದಲ್ಲಿ ಶನಿವಾರ ಬೆಳಗ್ಗೆ ಎಚ್.ಎನ್.ಲೋಕೇಶ್ ಅವರು ಧ್ವಜ ಹಿಡಿದು ಬಿಜೆಪಿ ಸೇರ್ಪಡೆಯಾದರು.

ಎಚ್.ಎನ್ ಲೋಕೇಶ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಲೋಕೇಶ್ ನಮ್ಮ ಹುಡುಗ. ನಗರಸಭೆ ಮಾಜಿ ಸದಸ್ಯ, ಅವರು ಇಂದು ಬಿಜೆಪಿ ಸೇರ್ಪಡೆಯಾಗುತ್ತಿರುವುದು ಸಂತಸ ತಂದಿದೆ.‌ ಜಿಲ್ಲೆಯಲ್ಲಿ ಬಿಜೆಪಿ ಪ್ರಬಲವಾಗಿದೆ. ಯುವ ಸಮೂಹ ಬೇರೆ ಬೇರೆ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಇದಕ್ಕೆ ನಮ್ಮ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಭಿವೃದ್ಧಿ, ಜನಪರ ಕಾರ್ಯಕ್ರಮಗಳೇ ಕಾರಣ ಎಂದರು.‌

ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಕಮಲ ಅರಳಲು ಯುವ ಸಮೂಹ ಒಂದಾಗುತ್ತಿದೆ. ರಾಷ್ಟ್ರದ ಶಕ್ತಿ ಅನಾವರಣಗೊಳಿಸಲು ಯುವಕರ ಪಾತ್ರ ದೊಡ್ಡು ಎಂದರು.
ಬಿಜೆಪಿ ಸೇರ್ಪಡೆಯಾದ ಎಚ್.ಎನ್ ಲೋಕೇಶ್ ಮಾತನಾಡಿ, ಹಿರಿಯರ ರಾಜಕೀಯ ಮುತ್ಸದ್ದಿ, ಅನುಭವಿ ರಾಜಕಾರಣಿ, ನಗರದ ಅಭಿವೃದ್ಧಿಯ ಹರಿಕಾರ ಜಿ.ಎಚ್.ತಿಪ್ಪಾರೆಡ್ಡಿ ಅವರ ಅಭಿವೃದ್ಧಿ ಕೆಲಸ ಮೆಚ್ಚಿಕೊಂಡು ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದೇನೆ ಎಂದರು.

ನಗರದಲ್ಲಿ ಅಭಿವೃದ್ಧಿ ಕೆಲಸಗಳು ಭರದಿಂದ ಸಾಗುತ್ತಿವೆ.‌ ಅವರ ದೂರದೃಷ್ಟಿಯ ಆಲೋಚನೆಗಳು ನಮ್ಮ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿವೆ. ಮುಂದಿನ ಚುನಾವಣೆಯಲ್ಲೂ ಜಿ.ಎಚ್.ತಿಪ್ಪಾರೆಡ್ಡಿ ಅವರು ಅಭೂತಪೂರ್ವ ಜಯಗಳಿಸಲು ನಾವು ಅವರ ಜೊತೆ ನಿಲ್ಲುತ್ತೇವೆ. ಹಾಗಾಗಿ ನಗರದ 9 ಮತ್ತು 10ನೇ ವಾರ್ಡ್ ನ ನೂರಾರು ಕಾರ್ಯಕರ್ತರ ಜೊತೆ ನಾನು ಬಿಜೆಪಿ ಸೇರ್ಪಡೆಯಾಗಿದ್ದೇನೆ ಎಂದರು.‌

ಈ ವೇಳೆ ಮುಖಂಡರಾದ ಶಂಕರಮೂರ್ತಿ (ಪಾಪು), ಕ್ರೀಡಾಪಟು ರಮೇಶ್, ದವಳಗಿರಿ ಬಡಾವಣೆ, ಸಿಹಿನೀರು ಹೊಂಡ, ಬಿವಿಕೆಎಸ್ ಲೇಔಟ್, ತಿಪ್ಪಾರೆಡ್ಡಿ ನಗರದ ಮುಖಂಡರು, ರಾಯಲ್ ಸ್ಪೋರ್ಟ್ಸ್ ಕ್ಲಬ್ ಸದಸ್ಯರು ಜೊತೆಯಲ್ಲಿದ್ದರು‌.

 

Share This Article
Leave a Comment

Leave a Reply

Your email address will not be published. Required fields are marked *