ವರದಿ ಮತ್ತು ಫೋಟೋ : ಸುರೇಶ್ ಪಟ್ಟಣ್, ಮೊ : 87220 22817
ಚಿತ್ರದುರ್ಗ,(ಸೆ.22) : ಉಚಿತ ವಿದ್ಯುತ್, ಶಿಕ್ಷಣ, ಆರೋಗ್ಯ ನೀಡುವುದು ನಮ್ಮ ಪಾರ್ಟಿಯ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ ಈ ಬಾರಿ ಕರ್ನಾಟಕದಲ್ಲಿ ಆಮ್ ಆದ್ಮಿ ಪಾರ್ಟಿಯನ್ನು ಆಧಿಕಾರಕ್ಕೆ ತರಲು ಎಲ್ಲರು ಶ್ರಮಿಸಬೇಕಿದೆ ಎಂದು ಎಎಪಿಯ ಜಿಲ್ಲಾಧ್ಯಕ್ಷರಾದ ಜಗದೀಶ್ ಕರೆ ನೀಡಿದರು.
ಚಿತ್ರದುರ್ಗ ನಗರದ ಅಂಬೇಡ್ಕರ್ ವೃತ್ತದ ಬಳಿ ಪಾರ್ಟಿಯ ಸದಸ್ಯತ್ವ ನೊಂದಾಣಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಹಲಿಯಲ್ಲಿ ಮುಖ್ಯಮಂತ್ರಿ ಕ್ರೇಜಿವಾಲ್‍ರವರು ಜನತೆಗೆ ಉಚಿತವಾಗಿ ಇವುಗಳನ್ನು ನೀಡುವುದರ ಮೂಲಕ ಸಾಧಿಸಿ ತೋರಿಸಿದ್ದಾರೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಸಹಾ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಕರ್ನಾಟಕದ ಎಲ್ಲಾ ಮತದಾರರ ಸಹಕಾರ ಅಗತ್ಯವಾಗಿದೆ ಎಂದರು.
ಕರ್ನಾಟಕದಲ್ಲಿ ಅಧಿಕಾರವನ್ನು ನಡೆಸುತ್ತಿರುವ ಸರ್ಕಾರದಲ್ಲಿ ಭ್ರಷ್ಠಾಚಾರ ಹೆಚ್ಚಾಗಿದೆ ಇದರಿಂದ ಜನತೆ ರೊಸಿದ್ದಾರೆ. ಇದನ್ನು ಕೊನೆಗಾಣಿಸಲು ಮತದಾರರ ಮುಂದಾಗಿದ್ದಾರೆ ಈವರೆವಿಗೂ ಮತದಾರರು ಎಲ್ಲಾ ಪಕ್ಷಗಳ ಸರ್ಕಾರವನ್ನು ನೋಡಿದ್ದಾರೆ ಎಲ್ಲಾ ಸರ್ಕಾರಗಳಲ್ಲೂ ಸಹಾ ಭ್ರಷ್ಠಚಾರ ಎನ್ನುವುದು ಇದೇ ಇದೆ. ಇದನ್ನು ಬಿಟ್ಟಿಲ್ಲ, ಆದರೆ ನಮ್ಮ ಪಾರ್ಟಿ ಭ್ರಷ್ಠಚಾರ ಮುಕ್ತವಾದ ಆಡಳಿತವನ್ನು ನೀಡಲು ಸಿದ್ದವಿದೆ. ಇದಕ್ಕೆ ಮತದಾರರು ಆರ್ಶಿವಾದವನ್ನು ಮಾಡಬೇಕಿದೆ ಎಂದು ಜಗದೀಶ್ ಮನವಿ ಮಾಡಿದರು.
ಕರ್ನಾಟಕದಲ್ಲಿ ಶಿಕ್ಷಣ, ಆರೋಗ್ಯ ಮತ್ತು ವಿದ್ಯುತ್ ಪಡೆಯಲು ಹಣವನ್ನು ನೀಡಬೇಕಿದೆ. ಆದರೆ ನಮ್ಮ ಪಾರ್ಟಿ ಅಧಿಕಾರಕ್ಕೆ ಬಂದಾಗ ಈ ಎಲ್ಲವನ್ನು ಉಚಿತವಾಗಿ ನೀಡಲಾಗುತ್ತದೆ. ಈಗಾಗಲೇ ಕ್ರೇಜಿವಾಲರವರು ದೆಹಲಿಯಲ್ಲಿ ನೀಡುತ್ತಿದ್ದಾರೆ. ಕರ್ನಾಟಕದಲ್ಲೂ ಜಾರಿಯಾಗಬೇಕಿದೆ. ಇದರ ಬಗ್ಗೆ ಮತದಾರರಿಗೆ ಮನವರಿಕೆ ಮಾಡಬೇಕಿದೆ. ಈ ಹಿನ್ನಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲೂ ಸಹಾ ಮತದಾರರಿಗೆ ತಿಳಿಸುವ ಕಾರ್ಯವನ್ನು ಮಾಡಲಾಗುವುದು ಎಂದರು.
ಬರುವ ಜನವರಿ ಅಥವಾ ಫೆಬ್ರವರಿಯಲ್ಲಿ ಚಿತ್ರದುರ್ಗದಲ್ಲಿ ಎಎಪಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು ಇದರಲ್ಲಿ ಭಾಗವಹಿಸಲು ದೆಹಲಿ ಮುಖ್ಯಮಂತ್ರಿಗಳಾದ ಕ್ರೇಜಿವಾಲರವರು ಚಿತ್ರದುರ್ಗಕ್ಕೆ ಭೇಟಿ ನೀಡಲಿದ್ದಾರೆ. ಕರ್ನಾಟಕದಲ್ಲಿ ಪಾರ್ಟಿ ನೂತನವಾಗಿ ಕಾಲಿರಿಸಿದ್ದು, ಈ ಹಿನ್ನಲೆಯಲ್ಲಿ ಸದಸ್ಯತ್ವ ನೊಂದಾಣಿಯನ್ನು ಪ್ರಾರಂಭಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲೂ ಸಹಾ ಸದಸ್ಯತ್ವ ಅಭೀಯಾನವನ್ನು ಹಮ್ಮಿಕೊಳ್ಳಲಾಗುವುದು. ಚಿತ್ರದುರ್ಗ ನಗರದಲ್ಲಿ 25,000, ಜಿಲ್ಲೆಯಲ್ಲಿ 1.50 ಲಕ್ಷ ಸದಸ್ಯತ್ವವನ್ನು ಮಾಡಿಸುವ ಗುರಿಯನ್ನು ಹೊಂದಲಾಗಿದೆ ಮುಂದಿನ 2 ತಿಂಗಳವರೆಗೂ ಸದಸತ್ವ ಅಭೀಯಾನ ನಡೆಯಲಿದೆ ನಮ್ಮ ಜಿಲ್ಲಾ ಪಕ್ಷದ ಕಚೇರಿಯಲ್ಲೂ ಸಹಾ ಸದಸ್ಯತ್ವ ನೊಂದಾಣಿಯನ್ನು ಮಾಡಲಾಗುವುದು ಎಂದು ಜಗದೀಶ್ ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಫಾರೂಕ್ ಅಬ್ದುಲ್, ಲಕ್ಷ್ಮೀನಾರಾಯಣ, ಪ್ರಧಾನ ಕಾರ್ಯದರ್ಶಿ ಜಿ.ಮನೋಹರ್,ಜಿಲ್ಲಾ ಸಂಘಟನಾ ಕಾರ್ಯದರ್ಶೀ ಶಶಿಧರ್, ನವೀನ್, ನವಾಜ್, ರಾಜಣ್ಣ, ಇಬ್ರಾಹಿಂ, ವೇದಮೂರ್ತಿ, ಬಸ್ಸುರ್ ಅಹಮ್ಮದ್,ಗುರುಮೂರ್ತಿ ಸೇರಿದಂತೆ ಇತರರು ಭಾಗವಹಿಸಿದ್ದರು. ಇದಕ್ಕೂ ಮುನ್ನಾ ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ಮಾಲಾರ್ಪಣೆಯನ್ನು ಮಾಡಲಾಯಿತು.