ದಾವಣಗೆರೆ: ದಾವಣಗೆರೆಯಲ್ಲಿ ಬೆಳಗ್ಗೆ 4ರ ಸುಮಾರಿನಲ್ಲಿ ಪಿಎಫ್ಐ ಮಾಜಿ ಜಿಲ್ಲಾಧ್ಯಕ್ಷ ಇಮಾದುದ್ದೀನ್ ಮನೆ ಮೇಲೆ ಎನ್ಐಎ ನ 14 ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬಳಿಕ ಎನ್ಐಎ ಅಧಿಕಾರಿಗಳು ಪಿಎಫ್ಐ ಮುಖಂಡನನ್ನು ಬಂಧನ ಮಾಡಿದ್ದಾರೆ. ಇಮಾನುದ್ದೀನ್ ಬಂಧನಕ್ಕೊಳಗಾದ ಪಿಎಫ್ಐ ಮುಖಂಡ. ಬೆಳಗ್ಗೆಯೇ ಇಮಾನುದ್ದೀನ್ ಮನೆಗೆ ಆಗಮಿಸಿದ್ದ ಎನ್ ಐ ಎ ಅಧಿಕಾರಿಗಳು, ಕೆಲ ಕಾಲ ಮನೆಯಲ್ಲಿಯೇ ವಿಚಾರಣೆ ನಡೆಸಿದ್ದಾರೆ. ಸಾಕಷ್ಟು ವರ್ಷಗಳಿಂದ ಪಿಎಫ್ಐ ನಲ್ಲಿ ಇಮಾನುದ್ದೀನ್ ಸಕ್ರಿಯವಾಗಿದ್ದ.
ಬೆಳಿಗ್ಗೆ 3 ಗಂಟೆಗೆ ಇಮಾದುದ್ದೀನ್ ವಶಕ್ಕೆ ಪಡೆದಿದ್ದಾರೆ. ಅಜ್ಞಾತ ಸ್ಥಳದಲ್ಲಿಟ್ಟು ವಿಚಾರಣೆ ನಡೆಸಲಾಗುತ್ತಿದೆ. ಅಧಿಕಾರಿಗಳ ದಾಳಿ ಬಗ್ಗೆ ಇಮಾದುದ್ದೀನ್ ಸಹೋದರ ಮಹಮ್ಮದ್ ಸಾದ್ ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮಣ್ಣನನ್ನು ಯಾವುದೇ ಕಾರಣ ನೀಡದೆ ಕರೆದುಕೊಂಡು ಹೋಗಿದ್ದಾರೆ. ಪಿಎಫ್ಐನವರನ್ನು ಭಯೋತ್ಪಾದಕರಂತೆ ನೋಡುತ್ತಾರೆ. ಏಕಾಏಕಿ ಮನೆಗೆ ನುಗ್ಗಿ ಸಾಮಾನುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿದ್ದಾರೆ. ಯಾರು ಅಂತ ಕೇಳಿದರೂ ಹೇಳದೆ ಮನೆಗೆ ನುಗ್ಗಿದ್ದಾರೆ.
ಮನೆಯಲ್ಲಿನ ಒಂದು ರೂಮ್ ನ್ನ ಬಿಡದೆ ಚೆಲ್ಲಾಪಿಲಿ ಮಾಡಿದ್ದಾರೆ. ಅಧಿಕಾರಿಗಳು ನಮ್ಮ ಬ್ಯಾಂಕ್ ಪಾಸ್ ಬುಕ್ ಮತ್ತು ದಾಖಲೆಗಳನ್ನ ಪರಿಶೀಲಿಸಿದರು. ಬಳಿಕ ಟೀ ಕುಡಿದು ಮಾತಾಡೋಣ ಅಂತ ಇಮಾದುದ್ದೀನ್ ನನ್ನ ಕರೆದುಕೊಂಡು ಹೋದರು. ಅಧಿಕಾರಿಗಳು ಹಿಂದಿನಿಂದಲೂ ತುಂಬಾ ಸರಿ ಈ ರೀತಿ ಮಾಡುತ್ತಿದ್ದಾರೆ. ಪಿಎಫ್ಐ ಕಾರ್ಯಕ್ರಮ ನಡೆದಾಗ ಹೀಗೆ ದಾಳಿ ಮಾಡುತ್ತಾರೆ. ಹೀಗೆ ಹಲವಾರಿ ಬಾರಿ ದಾಳಿಯನ್ನ ಮಾಡಿದ್ದಾರೆ.
ನಮ್ಮನ್ನ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಂಡವನು. ಇದು ರಾಜಕೀಯ ಪ್ರೇರಿತ ದಾಳಿ. ನಿಜವಾದ ಭಯೋತ್ಪಾದಕರು ಮತ್ತು ಅಪರಾಧಿಗಳನ್ನ ಹಿಡಿಯಲು ಇವರಿಗೆ ದಮ್ ಇಲ್ಲ. ಯಾರದ್ದೊ ಸರ್ಕಾರದ ಮಾತು ಕೇಳಿ ಈ ರೀತಿ ಮಾಡುತ್ತಿದ್ದಾರೆ. ಇದರ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ ಎಂದು ಇಮಾದುದ್ದೀನ್ ಸಹೋದರ ಮಹಮ್ಮದ್ ಸಾದ್ ಹೇಳಿದ್ದಾರೆ.