ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ 40% ಕಮಿಷನ್ ಕುರಿತು ಆಂದೋಲನ ನಡೆಯುತ್ತಿದೆ. ಹಾಗಾಗಿ ನಗರದಲ್ಲಿ ಪೇ ಸಿಎಂ ಪೋಸ್ಟರ್ ಅಂಟಿಸಲಾಗಿದೆ. ಇದು ಇಡೀ ಪಕ್ಷದಿಂದ ಮಾಡಿರುವಂತ ಆಂದೋಲನ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲಿ ತಿಳಿಸಿದ್ದಾರೆ.
ಇವರು ಕೂಡ ನಮ್ಮ ಬಗ್ಗೆ ಏನೇನೋ ಮಾಡುತ್ತಿದ್ದಾರೆ. ನಾಳೆಯಿಂದ ನಾವೇ ಪೋಸ್ಟರ್ ಅಂಟಿಸುವ ಕೆಲಸ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಸರ್ಕಾರದ 40% ಕಮೀಷನ್ ಆರೋಪದ ಬಗ್ಗೆ ಸದನದಲ್ಲಿಯೂ ಚರ್ಚೆಗೆ ಕಾಂಗ್ರೆಸ್ ಸಿದ್ಧತೆ ನಡೆಸಿಕೊಂಡಿದೆ. ಆ ಬಗ್ಗೆ ಕಲಾಪದಲ್ಲಿಯೇ ಚರ್ಚೆ ಮಾಡಲಿದೆ. ಅದಕ್ಕೂ ಮುನ್ನ ಪೇ ಸಿಎಂ ಅಭಿಯಾನ ಶುರು ಮಾಡಿದ್ದು, ಊರ ತುಂಬೆಲ್ಲಾ ಪೋಸ್ಟರ್ ಹರಿದಾಡುತ್ತಿದೆ. ಆ ಪೋಸ್ಟರ್ ನಲ್ಲಿರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ಬಿಜೆಪಿಯ ಹಗರಣಗಳ ಪಟ್ಟಿಯೇ ಬರುತ್ತಿದೆ.