Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕೇಂದ್ರ ಸರ್ಕಾರದ ಹಿಂದಿ ದಿವಸ್ ಆಚರಣೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ

Facebook
Twitter
Telegram
WhatsApp

ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್

ಮೊ : 78998 64552

ಚಿತ್ರದುರ್ಗ : ಪ್ರತಿ ವರ್ಷವೂ ಸೆ.14 ನ್ನು ಹಿಂದಿ ದಿವಸ್ ಆಗಿ ಆಚರಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ.ನಾರಾಯಣಗೌಡರ ಬಣದ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕನ್ನಡ ಭಾವುಟ ಮತ್ತು ಪಕ್ಷದ ಭಾವುಟ ಹಿಡಿದು ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಕಾರರು ಕೇಂದ್ರ ಸರ್ಕಾರ ಕನ್ನಡದ ಮೇಲೆ ಬಲವಂತವಾಗಿ ಹಿಂದಿ ಭಾಷೆಯನ್ನು ಹೇರುವ ಮೂಲಕ 2500 ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಅವಮಾನಿಸುತ್ತಿದೆ. ಕೇವಲ ಹಿಂದಿ ದಿವಸ್ ಆಚರಿಸಿ  ದೇಶದ ಬೇರೆ ಭಾಷೆಗಳನ್ನು ಕಡೆಗಣಿಸುತ್ತಿದೆ. 1950 ರಲ್ಲಿ ಜಾರಿಗೊಳಿಸಲಾದ ಸಂವಿಧಾನದ ಭಾಗ 17 ರಲ್ಲಿ 343-351 ನೇ ವಿಧಿಗಳಲ್ಲಿ ಭಾರತದ ಭಾಷಾ ನೀತಿಯನ್ನು ಬರೆಯಲಾಗಿದೆ. ಕೇಂದ್ರ ಸರ್ಕಾರ ಹಿಂದಿ ಮತ್ತು ಇಂಗ್ಲೀಷ್ ಭಾಷೆಯನ್ನೆಷ್ಟೆ ಮೆರೆಸುತ್ತಿದೆ. ಇದರಿಂದ ದೇಶದ ಇತರೆ ಭಾಷಿಕರಿಗೆ ಕಲಿಕೆ, ಪ್ರವೇಶ ಪರೀಕ್ಷೆಗಳು, ಉದ್ಯೋಗ, ನೇಮಕಾತಿ, ಸಾರ್ವಜನಿಕ ಸೇವೆಗಳಲ್ಲಿ ಅನ್ಯಾಯವಾಗುತ್ತಿದೆ. ಬ್ಯಾಂಕ್ ಹಾಗೂ ಇತರೆ ಒಕ್ಕೂಟ ಸರ್ಕಾರದ ಇಲಾಖೆಗಳ ನೇಮಕಾತಿಯಲ್ಲಿ ಕನ್ನಡಿಗರು ಉದ್ಯೋಗದಿಂದ ವಂಚನೆಗೊಳಗಾಗುತ್ತಿದ್ದಾರೆ. ಬ್ಯಾಂಕ್ ಮತ್ತು ಕೇಂದ್ರ ಸರ್ಕಾರದ ಅನೇಕ ಇಲಾಖೆಗಳಲ್ಲಿ ಕನ್ನಡ ಬಾರದ ಸಿಬ್ಬಂದಿಗಳಿರುವುದರಿಂದ ಕನ್ನಡಿಗರು ಅತೀವ ಸಮಸ್ಯೆಯನ್ನೆದುರಿಸುವಂತಾಗಿದೆ ಎಂದು ಪ್ರತಿಭಟನಾಕಾರರು ಆಪಾದಿಸಿದರು.

ಭಾರತ್ಕಕೆ ಯಾವುದೇ ಒಂದು ರಾಷ್ಟ್ರಭಾಷೆಯಿರುವುದಿಲ್ಲ. ಸಂವಿಧಾನದ ಎಂಟನೆ ಪರಿಚ್ಚೇದದಲ್ಲಿರುವ ಎಲ್ಲಾ 22 ಭಾಷೆಗಳು ದೇಶದ ರಾಷ್ಟ್ರೀಯ ಭಾಷೆಗಳೆ. ಆದರೆ ಅಧಿಕೃತ ಭಾಷಾ ಕಾಯ್ದೆಯ ಹೆಸರಿನಲ್ಲಿ ಕನ್ನಡಿಗರ ಮೇಲೆ ಬಲವಂತವಾಗಿ ಹಿಂದಿಯನ್ನು ಹೇರುತ್ತಿರುವುದು ಸಂವಿಧಾನ ವಿರೋಧಿಯಾಗಿದೆ. ಮುಂದಿನ ದಿನಗಳಲ್ಲಾದರೂ ಕೇಂದ್ರ ಸರ್ಕಾರ ಎಲ್ಲಾ ಭಾಷೆಗಳಿಗೂ ಸಮಾನ ಮಾನ್ಯತೆ ನೀಡಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.

ಹಿಂದಿ ದಿವಸ್, ಹಿಂದಿ ಸಪ್ತಾಹ, ಹಿಂದಿ ಪಕ್ವಾಡಾದಂತ ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ಕೂಡಲೆ ನಿಲ್ಲಿಸಬೇಕು. ಪ್ರತಿ ವರ್ಷ ಸೆ.14 ರ ಹಿಂದಿ ದಿನಾಚರಣೆ ಕೊನೆಗೊಳ್ಳಬೇಕು. ಯಾವ ಭಾಷೆಗೂ ಹೆಚ್ಚಿನ ಮಾನ್ಯತೆ ನೀಡಬಾರದು. ಎಲ್ಲಾ ಭಾಷೆಯನ್ನು ಸಮಾನವಾಗಿ ಗೌರವಿಸಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ರಮೇಶ್, ತಾಲ್ಲೂಕು ಅಧ್ಯಕ್ಷ ರಾಜಪ್ಪ ಜಿ. ನಗರಾಧ್ಯಕ್ಷ ಪಿ.ರಮೆಶ್, ಜಿಲ್ಲಾ ಪ್ರಧಾನ ಸಂಚಾಲಕ ಎಸ್.ಬಿ.ಗಣೇಶ್, ಜಿಲ್ಲಾ ಉಪಾಧ್ಯಕ್ಷರುಗಳಾದ ಟಿ.ಕೆ.ಶಿವಮೂರ್ತಿ, ಬಿ.ವೆಂಕಟೇಶ್, ಆರ್.ಜಿ.ಲಕ್ಷ್ಮಣ, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಎಂ.ಕೆ.ಹಟ್ಟಿ ರಮೇಶ್, ವಸಂತ, ಮಲ್ಲ ಪ್ರಸಾದ್, ಬಾಬು ಹಳಿಯೂರ್, ಅಶ್ವಥ್, ವೆಂಕಟೇಶ್, ಸ್ವಪ್ನ, ಉದಯಶಂಕರ್, ಗೋ.ಬಸವರಾಜು, ದಾದಾಪೀರ್, ಜಾಕೀರ್, ಮನು, ನೀಲಕಂಠ, ದ್ರಾಕ್ಷಾಯಿಣಿ, ಮಂಜುಳ, ಎಂ.ಕೆ.ಹಟ್ಟಿ ಮಾರುತಿ, ರುದ್ರೇಶ್, ಕಾರ್ತಿಕ್, ರವಿ, ಲಕ್ಷ್ಮಣ ಹಾಗೂ ಕರವೇ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗದಲ್ಲಿ ಅಕ್ಕ-ತಂಗಿಯರ ಸಂಭ್ರಮದ ಭೇಟಿ, ಸಂಭ್ರಮಿಸಿದ ಜನತೆ : ತಿಪ್ಪಿನಘಟ್ಟಮ್ಮ, ಬರಗೇರಮ್ಮ ದೇವಿಯ ಭೇಟಿಗೆ ಕಾತರದಿಂದ ಕಾದ ಭಕ್ತರು

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಮೇ. 07 :  ನಗರ ದೇವತೆಗಳಾದ ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ ಮತ್ತು ಬರಗೇರಮ್ಮ ದೇವಿ ಭೇಟಿ ಉತ್ಸವ

ಸಂಜೆ ವೇಳೆಗೆ ಹಿರಿಯೂರಿನಾದ್ಯಂತ ಗುಡುಗು ಸಹಿತ ಬಾರಿ ಮಳೆ..!

ಹಿರಿಯೂರು: ಮಳೆಯಿಲ್ಲದೆ ಕಂಗಲಾಗಿದ್ದ ಹಿರಿಯೂರಿನ ಮಂದಿಗೆ ವರುಣಾರಾಯ ತಂಪೆರೆದಿದ್ದಾನೆ. ಸಂಜೆ ವೇಳೆ ಜೋರು ಮಳೆ ಬಂದಿದ್ದು, ಜನ ಫುಲ್ ಖುಷಿಯಾಗಿದ್ದಾರೆ. ಕಳೆದ ಬಾರಿ ಹಿಂಗಾರು-ಮುಂಗಾರು ಮಳೆಯಿಲ್ಲದೆ ಬಿಸಿ ಗಾಳಿಯನ್ನು ಅನುಭವಿಸಿ ಅನುಭವಿಸು ಜನ ಸುಸ್ತಾಗಿ

ಅಣು ಬೋಧನೆ ಬಿ.ಇ.ಡಿ. ಪ್ರಶಿಕ್ಷಣಾರ್ಥಿಗಳಿಗೆ ಸೂಕ್ಷ್ಮವಾಗಿ ಪಾಠ ಮಾಡುವ ಒಂದು ವಿಧಾನ :  ಉಪನ್ಯಾಸಕಿ ಅರ್ಚನ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,    ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 07 : ಅಣು ಬೋಧನೆ ಎನ್ನುವುದು ಬಿ.ಇ.ಡಿ. ಪ್ರಶಿಕ್ಷಣಾರ್ಥಿಗಳಿಗೆ ಸೂಕ್ಷ್ಮವಾಗಿ ಪಾಠ ಮಾಡುವ ಒಂದು

error: Content is protected !!