ನವದೆಹಲಿ: ಆಫ್ರಿಕನ್ ಚಿರತೆಗಳನ್ನು ಈ ಭಾರತಕ್ಕೆ ಕರೆತರಲಾಗುತ್ತಿದೆ. ಸುಮಾರು 70 ವರ್ಷದ ಬಳಿಕ ಎಂಟು ಚಿರತೆಗಳನ್ನು ಭಾರತಕ್ಕೆ ಕರೆತರಲಾಗುತ್ತಿದೆ. ಅದರಲ್ಲಿ ಐದು ಹೆಣ್ಣು ಮೂರು ಗಂಡು ಚಿರತೆಗಳಾಗಿವೆ. ಭಾರತದಲ್ಲಿ ಸದ್ಯ ಚಿರತೆಗಳ ಕೊರತೆಯಿದೆ. ಅದನ್ನು ನೀಗಿಸಲು ಪ್ರತಿವರ್ಷ 4-5 ಚಿರತೆಗಳನ್ನು ತರಲು ಯೋಜನೆ ರೂಪಿಸಲಾಗಿದೆ.
ಇನ್ನು ಈ ಚಿರತೆಗಳನ್ನು ಸೆಪ್ಟೆಂಬರ್17 ರಂದು ಪ್ರಧಾನಿ ಮೋದಿ 72ನೇ ವರ್ಷದ ಹುಟ್ಟುಹಬ್ಬಕ್ಕೆ ಕಾಲಿಡುತ್ತಿದ್ದಾರೆ. ಅವರ ಸಮ್ಮುಖದಲ್ಲಿ ಮಧ್ಯಪ್ರದೇಶದ ಕುನೋ ಫಲ್ ಪುರ್ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗುತ್ತದೆ. ಸೆಪ್ಟೆಂಬರ್ 16ರಂದು ಈ ಚಿರತೆಗಳನ್ನು ನಮೀಬಿಯಾದಿಂದ ವಿಶೇಷ ವಿಮಾನದ ಮೂಲಕ ಭಾರತಕ್ಕೆ ಕರೆತರಲಾಗುತ್ತದೆ.
ನಮೀಬಿಯಾದ ಚಿರತೆಗಳನ್ನು ತರಲು ಸುಪ್ರೀಂ ಕೋರ್ಟ್ 2020ರಲ್ಲಿ ಅನುಮತಿ ನೀಡಿತ್ತು. ಈಗಾಗಲೇ ನ್ಯಾಷನಲ್ ಪಾರ್ಕ್ ನಲ್ಲಿ ಎಲ್ಲಾ ವ್ಯವಸ್ಥೆಯಾಗಿದೆ. ಆಫ್ರಿಕನ್ ತಂಡವೂ ಭಾರತಕ್ಕೆ ಬಂದು, ಇಲ್ಲಿನ ಸಿದ್ಧತೆ, ಚಿರತೆಗಳಿಗೆ ಬೇಕಾದ ವಾತಾವರಣ ಎಲ್ಲದನ್ನು ಪರೀಕ್ಷಿಸಿ ಹೋಗಿದ್ದಾರೆ. ಎಲ್ಲವೂ ಸರಿಯಾಗಿದ್ದು ಆಫ್ರಿಕನ್ ಚಿರತೆಗಳು ಭಾರತಕ್ಕೆ ಎಂಟ್ರಿ ಕೊಡಲಿವೆ.