ಬೆಳಗಾವಿ : ಉತ್ತರ ಕರ್ನಾಟಕದ ಕಡೆ ಮಳೆಯ ಪ್ರಮಾಣ ನಿಂತಿಲ್ಲ. ಮಳೆಯಿಂದಾಗಿ ಹಲವು ಕಡೆ ಪ್ರವಾಹದ ಭೀತಿ ಎದುರಾಗಿದೆ. ಕೋಟಬಾಗಿ ಬಳಿ ದುರ್ಗಾದೇವಿ ದೇವಸ್ಥಾನ ಜಲಾವೃತಗೊಂಡಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿರುವ ದೇವಸ್ಥಾನ. ಈ ದೇವಸ್ಥಾನದ ಗರ್ಭಗುಡಿಗೆ ನೀರು ನುಗ್ಗಿದ ಹಿನ್ನೆಲೆ, ಅರ್ಚಕರು ದೇವಸ್ಥಾನಕ್ಕೆ ಬೀಗ ಹಾಕಿ ಬಂದ್ ಮಾಡಲಾಗಿದೆ.
ಇನ್ನು ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರ ಪರಿಣಾಮ ಗದಗ ಜಿಲ್ಲೆಯ ನರಗುಂದ ತಲೂಕಿನ ಲಖನಾಪುರ ಗ್ರಾಮಕ್ಕೆ ಪ್ರವಾಹದ ಭೀತಿ ಎದುರಾಗಿದೆ. ಗ್ರಾಮಕ್ಕೆ ತಹಶೀಲ್ದಾರ್ ಅಮರವಾದಗಿ ಹಾಗೂ ಸಿಪಿಐ ಮಲ್ಲಯ್ಯ, ಇಓ ಮಂಜುಳಾ ಭೇಟಿ ನೀಡಿದ್ದಾರೆ.
ಪ್ರವಾಹದ ಭೀತಿ ಇರುವ ಕಾರಣ ಕಾಳಜಿ ಕೇಂದ್ರಕ್ಕೆ ಶಿಫ್ಟ್ ಆಗುವಂತೆ ಜನರಿಗೆ ಮನವಿ ಮಾಡಲಾಗಿದೆ. ಬೆಳ್ಳೇರಿಯಲ್ಲಿ ಕಾಳಜಿ ಕೇಂದ್ರ ನಿರ್ಮಾಣ ಮಾಡಿದ್ದು, ಅಲ್ಲಿಗೆ ಶಿಫ್ಟ್ ಆಗುವಂತೆ ಮನವಿ ಮಾಡಿದ್ದಾರೆ. ಆದರೆ ಅಧಿಕಾರಗಳ ಮಾತು ಕೇಳದ ಜನ ನಮಗೆ ಅಪಾಯವಿಲ್ಲ ನಾವೂ ಹೋಗಲ್ಲ ಎನ್ನುತ್ತಿದ್ದಾರೆ. ಅಧಿಕಾರಿಗಳೆಲ್ಲಾ ಸೇರಿ ಗ್ರಾಮದ ದೇವಸ್ಥಾನದಲ್ಲಿಯೇ ಸಭೆ ನಡೆಸಿದ್ದಾರೆ.