ಬೆಂಗಳೂರು: ಬಿಬಿಎಂಪಿ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿರುವಂತ ಜಾಗವನ್ನು ತೆರವು ಮಾಡಲು ಆರಂಭಿಸಿದೆ. ಆದರೆ ದೊಡ್ಡದೊಡ್ಡವರು ಒತ್ತುವರಿ ಮಾಡಿಕೊಂಡಿದ್ದರು ಅದನ್ನು ತೆರವು ಮಾಡಲು ಮುಂದಾಗುತ್ತಿಲ್ಲ. ಸಾಮಾನ್ಯ ಜನರ ಒತ್ತುವರಿ ಮಾಡಿಕೊಂಡಿರುವುದಕ್ಕೆ ತೆರವು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಇದರ ನಡುವೆ ಸಚಿವ ಆರ್ ಅಶೋಕ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಯಾವುದೇ ಕಾರಣಕ್ಕೂ ಕಾರ್ಯಾಚರಣೆ ನಿಲ್ಲ. ಯಾರೇ ಒತ್ತುವರಿ ಮಾಡಿದ್ರು ಅದನ್ನು ತೆರವು ಮಾಡುತ್ತೇವೆ. ಹಿಂದಿನ ಸರ್ಕಾರಗಳು ಡೆಮಾಲಿಶ್ ನಾಟಕವಾಡುತ್ತಿದ್ದರು. ಆದರೆ ಮಳೆ ನಿಂತ ಬಳಿಕ ಡೆಮಾಲಿಶ್ ಕಾರ್ಯವೂ ನಿಲ್ಲುತ್ತಿತ್ತು. ನಾವೂ ಎಲ್ಲಾ ಅಧಿಕಾರಿಗಳು ಸೂಚನೆ ನೀಡಿದ್ದೇವೆ. ದಾಖಲೆ ಪರಿಶೀಲಿ. ದೊಡ್ಡವರು, ಚಿಕ್ಕವರು ಎಂಬುದೆಲ್ಲಾ ಬೇಡ. 30ಕ್ಕೂ ಹೆಚ್ಚು ಐಟಿ ಕಂಪನಿಗಳು ರಾಜಕಾಲುವೆಯನ್ನು ಒತ್ತುವರಿ ಮಾಡಿದ್ದಾರೆ. ಅವರೇ ದೊಡ್ಡದಾಗಿ ಏನೋ ಮಾತನಾಡುತ್ತಿದ್ದರು..
ಈ ಒತ್ತುವರಿಯಲ್ಲಿ ಯಾವ ತಾರತಮ್ಯ ನೋಡಲ್ಲ. ಬಡವರು ಮಾಡಿಕೊಂಡಿದ್ದಾರೆ. ಶ್ರೀಮಂತರು ಮಾಡಿಕೊಂಡಿದ್ದಾರೆ. ಆದರೆ ಯಾವುದೇ ತಾರತಮ್ಯವಿಲ್ಲದೆ ತೆರವು ಮಾಡಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದೀವಿ ಎಂದಿದ್ದಾರೆ.