ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ: ವಿಶ್ವಹಿಂದು ಪರಿಷತ್ ಭಜರಂಗದಳದ ವತಿಯಿಂದ ನಗರದಲ್ಲಿ ಪ್ರತಿಷ್ಟಾಪಿಸಲಾಗಿರುವ ಹಿಂದೂ ಮಹಾಗಣಪತಿಯ ಬೃಹತ್ ಶೋಭಾಯಾತ್ರೆ ಅಂಗವಾಗಿ ಸಮಸ್ತ ಹಿಂದೂ ಬಾಂಧವರನ್ನು ಜಾಗೃತಿಗೊಳಿಸುವುದಕ್ಕಾಗಿ ಸೆ.15 ರಂದು ನಗರದಲ್ಲಿ ಬೈಕ್‍ರ್ಯಾಲಿ ಸಂಚರಿಸಲಿದೆ ಎಂದು ಭಜರಂಗದಳ ಶಿವಮೊಗ್ಗ ವಿಭಾಗದ ಸಂಚಾಲಕ ಪ್ರಭಂಜನ್ ಎಸ್.ಆರ್.ತಿಳಿಸಿದರು.
ನಗರದ ಪಂಚಾಚಾರ್ಯ ಕಲ್ಯಾಣ ಮಂಟಪ ಪಕ್ಕದಲ್ಲಿ ಹಿಂದೂ ಮಹಾಗಣಪತಿಯನ್ನು ಪ್ರತಿಷ್ಠಾಪಿಸಿರುವ ಜೈನ್‍ಧಾಮದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಹೊಳಲ್ಕೆರೆ ರಸ್ತೆಯಲ್ಲಿರುವ ಕನಕ ವೃತ್ತದಿಂದ ಬೈಕ್‍ರ್ಯಾಲಿ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಮುಕ್ತಾಯಗೊಳ್ಳಲಿದೆ. ಹದಿನೇಳರಂದು ಹಿಂದೂ ಮಹಾಗಣಪತಿಯ ಬೃಹತ್ ಶೋಭಾಯಾತ್ರೆಯಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ. ವಿವಿಧ ಕಲಾ ತಂಡಗಳು ಯಾತ್ರೆಯಲ್ಲಿ ಭಾಗವಹಿಸಲಿವೆ. ಚಂಡೆ ಮೃದಂಗ, ಯಕ್ಷಗಾನ ಕೂಡ ಯಾತ್ರೆಗೆ ಆಗಮಿಸಲಿದೆ ಎಂದು ಹೇಳಿದರು.
ವಿಶ್ವಹಿಂದು ಪರಿಷತ್ ಅಖಿಲ ಭಾರತೀಯ ಸಹ ಕಾರ್ಯದರ್ಶಿ ಅಂಬರೀಶ್ ಸಿಂಗ್ ಶೋಭಾಯಾತ್ರೆ ಉದ್ಘಾಟಿಸಲಿದ್ದಾರೆ. ಹದಿಮೂರರಂದು ಬೆಳಿಗ್ಗೆ 9 ಗಂಟೆಗೆ ನವದುರ್ಗೆಯರು ಸಿಹಿ ನೀರು ಹೊಂಡದಿಂದ ಗಂಗೆ ಪೂಜೆಯೊಂದಿಗೆ ಹೊರಟು ಹಿಂದೂ ಮಹಾಗಣಪತಿ ಬಳಿ ಬರುತ್ತಾರೆ. ಗಣಹೋಮ, ನವಗ್ರಹ ಹೋಮ, ಸುದರ್ಶನ ಹೋಮವಿರುತ್ತದೆ ಎಂದರು.
ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಭದ್ರಿನಾಥ್ ಮಾತನಾಡಿ ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣಕ್ಕಾಗಿ ಹಿಂದೂ ಮಹಾಗಣಪತಿಯ ಶೋಭಾಯಾತ್ರೆ ಸರಳವಾಗಿತ್ತು. ಆದರೆ ಈ ಬಾರಿಯ ಬೃಹತ್ ಶೋಭಾಯಾತ್ರೆ ವರ್ಣರಂಜಿತವಾಗಿ ನಡೆಯಲಿದೆ. ಲಕ್ಷಾಂತರ ಭಕ್ತರು ಯಾತ್ರೆಯಲ್ಲಿ ಭಾಗವಹಿಸುತ್ತಿರುವುದರಿಂದ ಅನೇಕ ಕಲಾ ತಂಡಗಳು ಯಾತ್ರೆಯಲ್ಲಿ ಭಕ್ತರನ್ನು ರಂಜಿಸಲಿವೆ. ಯಾತ್ರೆಗೆ ಎರಡು ದಿನದ ಮುನ್ನ ಸೆ.15 ರಂದು ಚಿತ್ರದುರ್ಗದಲ್ಲಿ ಬೃಹತ್ ಬೈಕ್‍ರ್ಯಾಲಿ ನಡೆಸಿ ಸಮಸ್ತ ಹಿಂದೂಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಲಾಗುವುದು ಎಂದು ಹೇಳಿದರು.
ಹದಿಮೂರರಂದು ಗ್ರಾಮದೇವತೆಗಳಾದ ನವದುರ್ಗೆಯರು ಹಿಂದೂ ಮಹಾಗಣಪತಿ ಬಳಿ ಬರಲಿದ್ದಾರೆ. ಹಾಗಾಗಿ ಅಂದು ಹೋಮ ನೆರವೇರಲಿದೆ ಎಂದು ಬೃಹತ್ ಶೋಭಾಯಾತ್ರೆ ಕುರಿತು ಮಾಹಿತಿ ನೀಡಿದರು.
ಭಾರತೀಯ ಜೈನ್ ಸಂಘಟನ್ ಅಧ್ಯಕ್ಷ ಹಾಗೂ ವಿಫುಲ್ ಟೆಕ್ಸ್‍ಟೈಲ್ಸ್‍ನ ವಿಪುಲ್‍ಜೈನ್, ವಿಶ್ವಹಿಂದು ಪರಿಷತ್ ಶಿವಮೊಗ್ಗ ವಿಭಾಗ ಕಾರ್ಯದರ್ಶಿ ಷಡಾಕ್ಷರಪ್ಪ ಡಿ.
ಭಜರಂಗದಳದ ಜಿಲ್ಲಾ ಸಂಚಾಲಕ ಪಿ.ಸಂದೀಪ್, ಶರಣ್‍ಕುಮಾರ್, ರುದ್ರೇಶ್, ರೋಹಿತ್‍ಗಾಯಕ್‍ವಾಡ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.