Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸೋನಿಯಾಗೆ ಶಾಕ್ ನೀಡಿದ ಕಾಂಗ್ರೆಸ್ ಸಂಸದರು…!

Facebook
Twitter
Telegram
WhatsApp

 

 

ನವದೆಹಲಿ : ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಸಂಕಷ್ಟದ ಕಾಲವನ್ನು ಎದುರಿಸುತ್ತಿದೆ. ಇತ್ತೀಚೆಗೆ ಹಿರಿಯ ನಾಯಕರು ಒಬ್ಬೊಬ್ಬರಾಗಿ ಕಾಂಗ್ರೆಸ್ ಪಕ್ಷವನ್ನು ತೊರೆಯುತ್ತಿದ್ದಾರೆ. ಇತ್ತೀಚೆಗೆ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಕೂಡ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಈ ಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ನಾಯಕತ್ವದ ಧೋರಣೆ ಟೀಕೆಗೆ ಗುರಿಯಾಗಿದೆ.ಈ ಎಲ್ಲಾ ಬೆಳವಣಿಗೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಆಯ್ಕೆ ಅಕ್ಟೋಬರ್ 17ರಂದು ನಡೆಯಲಿದ್ದು ಭಾರೀ ಕುತೂಹಲ ಕೆರಳಿಸಿದೆ. ಐವರು ಕಾಂಗ್ರೆಸ್ ಸಂಸದರು ಎಐಸಿಸಿ ಚುನಾವಣಾ ಮುಖ್ಯಸ್ಥ ಮಧುಸೂಧನ್ ಮಿಸ್ತ್ರಿ ಅವರಿಗೆ ಪತ್ರ ಬರೆದಿರುವುದು ರಾಜಕೀಯವಾಗಿ ಬಾರಿ ಚರ್ಚೆಗೆ ಗ್ರಾಸವಾಗಿದೆ. ಆದರೆ, ಕಾಂಗ್ರೆಸ್ ಪಕ್ಷದ ಲೋಕಸಭಾ ಸಂಸದರಾದ ಶಶಿತರೂರ್, ಮನೀಶ್ ತಿವಾರಿ, ಕಾರ್ತಿ ಚಿದಂಬರಂ, ಪ್ರದ್ಯುತ್ ಬೋರ್ದೊಲೈ, ಅಬ್ದುಲ್ ಖಾಲಿಕ್ ಅವರು ಪಕ್ಷದ ಅಧ್ಯಕ್ಷರ ಆಯ್ಕೆಯನ್ನು ಪಾರದರ್ಶಕವಾಗಿ ನಡೆಸುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಚುನಾವಣಾ ವಿಷಯವಾಗಿ ತಪ್ಪು ಮಾಹಿತಿ ನೀಡುತ್ತಿರುವುದು ದುರದೃಷ್ಟಕರ ಎಂದು ಸಂಸದರು ಪತ್ರದಲ್ಲಿ ತಿಳಿಸಿದ್ದಾರೆ. ಪಕ್ಷದ ಅಧ್ಯಕ್ಷರ ಆಯ್ಕೆಯಲ್ಲಿ ಭಾಗವಹಿಸುವ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರತಿನಿಧಿಗಳನ್ನು ಒಳಗೊಂಡಿರುವ ಚುನಾವಣಾ ಸಂಹಿತೆ ಬಿಡುಗಡೆ ಮಾಡುವಂತೆ ಸಂಸದರು ತಮ್ಮ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಅವರದೇ ಪಕ್ಷದ ನಾಯಕರೇ ಇಂತಹ ಪತ್ರ ಬರೆದಿರುವ ಕಾರಣ ಕಾಂಗ್ರೆಸ್ ನಾಯಕಿ ಸೋನಿಯಾ ಮತ್ತೊಮ್ಮೆ ಶಾಕ್ ನೀಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ. ಶುಕ್ರವಾರ- ರಾಶಿ ಭವಿಷ್ಯ ಮೇ-17,2024 ಸೂರ್ಯೋದಯ: 05:47, ಸೂರ್ಯಾಸ್ತ : 06:37 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ

ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ಪ್ರಕರಣ | ಕೊನೆಗೂ ಸಿಕ್ತು ಸಾವಿನ ಸುಳಿವು: ಎಸ್.ಪಿ. ಮಾಹಿತಿ…!

ಸುದ್ದಿಒನ್, ಚಿತ್ರದುರ್ಗ, ಮೇ. 16 : 2023ರ ಡಿಸೆಂಬರ್ ನಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಅದು. ನಗರದ ಬೆಂಗಳೂರು ರಸ್ತೆಯಲ್ಲಿರುವ ಪಾಳು ಬಿದ್ದ ಮನೆಯಲ್ಲಿ ಐವರ ಮೃತದೇಹ ಪತ್ತೆಯಾಗಿತ್ತು. ಅದು ಅವರೆಲ್ಲಾ ಸಾವನ್ನಪ್ಪಿ

ನೈರುತ್ಯ ಪದವೀಧರ ಚುನಾವಣೆ : ಬಿಜೆಪಿ ವಿರುದ್ಧ ರಘುಪತಿ ಭಟ್ ಬಂಡಾಯ, ಪಕ್ಷೇತರ ಸ್ಪರ್ಧೆ

ಮೈಸೂರು: ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಳಬರಿಗೆ, ಒಂದಷ್ಡು ವಿವಾದಗಳಿದ್ದವರಿಗೆ ಟಿಕೆಟ್ ನಿರಾಕರಣೆ ಮಾಡಿತ್ತು. ಹೊಸ ಮುಖಗಳಿಗೆ ಮಣೆ ಹಾಕಲು ಹೋಗಿ, ಹಿರಿಯ ತಲೆಗಳು ಬಂಡಾಯವೆದ್ದಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್

error: Content is protected !!