ಬೆಂಗಳೂರು: ಜುಲೈ 1 ರಿಂದ ಸೆಪ್ಟೆಂಬರ್ 3ರವರೆಗೆ ವಾಡಿಕೆಗಿಂತ ಡಬ್ಬಲ್ ಮಳೆಯಾಗಿದೆ. ಅದರಲ್ಲೂ ನಿನ್ನೆ ರಾತ್ರಿ ಸುರಿದ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ಈಗಾಗಲೇ ಜಿಲ್ಲೆ ಜಿಲ್ಲೆಯಲ್ಲೂ ಕೋಡಿ ಬಿದ್ದಿದೆ. ರಾತ್ರಿ ಸುರಿದ ಮಳೆಗಂತು ಮನೆಗಳಿಗೆಲ್ಲಾ ನೀರು ನುಗ್ಗಿದೆ.
ಬೆಂಗಳೂರಿನ ನಗರದಲ್ಲಿ ರಾತ್ರಿ ಸುರಿದ ಮಳೆಯಿದಾಗಿ ಬಾರೀ ಅವಾಂತರ ಸೃಷ್ಟಿಯಾಗಿದೆ. ಮನೆಗಳಿಗೆಲ್ಲಾ ನೀರು ನುಗ್ಗಿ, ಜೀವನ ಮಾಡುವುದಕ್ಕೂ ಕಷ್ಟವಾಗಿರುವಂತ ಸ್ಥಿತಿ ನಿರ್ಮಾಣವಾಗಿದೆ. ರಾಜಧಾನಿಯಲ್ಲಿ ಮುಂದಿನ ಒಂದು ವಾರ ಮಳೆಯಾಗುವ ಸಾಧ್ಯತೆ ಇದೆ. ನಾಲ್ಕು ದಿನ ಅಂತು ಹೆಚ್ಚಿನ ಮಳೆಯಾಗುತ್ತದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ.
ಈ ಮಳೆಯ ಪರಿಣಾಮ ನಗರದ ರೈನ್ಬೋ ಲೇಔಟ್, ಇಂದಿರಾನಗರ, ಸರ್ಜಾಪುರದಲ್ಲಂತು ಪರಿಸ್ಥಿತಿಯನ್ನು ಅವಲೋಕಿಸುವುದಕ್ಕೂ ಕಷ್ಟಕರವಾಗಿದೆ. ಇನ್ನು ಮನೆಯಲ್ಲಿರುವ ನೀರನ್ನು ಹೊರಹಾಕುವುದಕ್ಕೂ ಕಷ್ಟಕರವಾಗಿದೆ. ಯಾಕೆಂದರೆ ನೀರನ್ನು ಹೊರ ಹಾಕುವುದಕ್ಕೂ ಆಗುತ್ತಿಲ್ಲ. ಹೊರಗಡೆಯೂ ಅಷ್ಟೇ ನೀರು ನಿಂತಿರುವುದರಿಂದ ಮನೆಯೊಳಗಿನ ನೀರನ್ನು ಹೊರಗೆ ಹಾಕುವುದಕ್ಕೂ ಆಗುತ್ತಿಲ್ಲ.
ಇನ್ನು ವಿಧಾನಸೌಧದ ಕ್ಯಾಂಟಿನ್ ಗೂ ಮಳೆ ನೀರು ನುಗ್ಗಿದೆ. ನೆಲಮಹಡಿಯಲ್ಲಿರುವ ಕ್ಯಾಂಟಿನ್ಗೆ ನೀರು ನುಗ್ಗಿದ್ದು ಅವಾಂತರ ಸೃಷ್ಟಿಸಿದೆ. ಪಂಪ್ ಮೂಲಕ ನೀರನ್ನು ಹೊರ ಹಾಕುವ ಕೆಲಸ ನಡೆಯುತ್ತಿದೆ. ಕ್ಯಾಂಟಿನ್, ಕಿಚನ್ ಭಾಗ, ಸಂಪ್ ಗಳಲ್ಲಿಯೂ ನೀರು ತುಂಬಿದೆ.