ಬೆಂಗಳೂರು: ಇತ್ತಿಚೆಗೆ ಈದ್ಗಾ ಮೈದಾನ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈದ್ಗಾ ಮೈದಾನದಲ್ಲಿ ಗಣೇಶನ ಹಬ್ಬ ಮಾಡಿಯೇ ತೀರುತ್ತೀವಿ ಎಂದು ಹಿಂದೂಪರ ಸಂಘಟನೆಗಳು ಹಠ ತೊಟ್ಟಿದ್ದರು. ಆದರೆ ಬೆಂಗಳೂರಿನ ಈದ್ಗಾ ಮೈದಾನದಲ್ಲಿ ಅದು ಸಾಧ್ಯವಾಗಲಿಲ್ಲ. ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣಪತಿ ಕೂರಿಸಲಾಗಿತ್ತು. ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣಪತಿ ಕೂರಿಸುವ ವಿಚಾರದಲ್ಲಿ ಜಮೀರ್ ಟೀಕೆಗೆ ಗುರಿಯಾಗಿದ್ದರು. ಇದೀಗ ತಮ್ಮ ಕಚೇರಿಯಲ್ಲಿಯೇ ಗಣಪತಿ ಕೂರಿಸಿ, ಹಿಂದೂ ಪರ ಸಂಘಟನೆಗಳಿಗೆ ಟಕ್ಕರ್ ಕೊಡಲು ರೆಡಿಯಾಗಿದ್ದಾರೆ.
ಚಾಮರಾಜಪೇಟೆಯಲ್ಲಿರುವ ತಮ್ಮ ಕಚೇರಿಯಲ್ಲಿ ನಾಳೆ ಗಣೇಶೋತ್ಸವ ಮಾಡಲಿದ್ದಾರೆ ಜಮೀರ್. ಈ ಸಂಬಂಧ ಈಗಾಗಲೇ ಅಖಿಲ ಕರ್ನಾಟಕ ಜಿ ಜೆಡ್ ಜಮೀರ್ ಅಹ್ಮದ್ ಖಾನ್ ಒಕ್ಕೂಟ ಆಹ್ವಾನ ಪತ್ರಿಕೆಯನ್ನು ಹೊರಡಿಸಿದೆ. ಒಂದು ದಿನದ ಗಣೇಶೋತ್ವದದಲ್ಲಿ ಏನೆಲ್ಲಾ ಕಾರ್ಯಕ್ರಮಗಳಿರಲಿದೆ ಎಂಬುದನ್ನು ಆಹ್ವಾನ ಪತ್ರಿಕೆಯಲ್ಲಿ ತಿಳಿಸಲಾಗಿದೆ.
ಸೋಮವಾರ ಬೆಳಗ್ಗೆ 9.15 ರಿಂದ 10 ಗಂಟೆಯ ಒಳಗೆ ವಿದ್ಯಾಗಣಪತಿಯನ್ನು ಕಚೇರಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಸಂಜೆ ನಾಲ್ಕು ಗಂಟೆಗೆ ವಿಸರ್ಜನೆ ಮಾಡಲಾಗುವುದು. ವಿಸರ್ಜನೆ ವೇಳೆ ವಾದ್ಯ, ಬಾಣಬಿರುಸಿನೊಂದಿಗೆ ಅದ್ಧೂರಿ ಮೆರವಣಿಗೆಯ ಮೂಲಕ ವಿಸರ್ಜನೆ ಮಾಡಲಾಗುತ್ತದೆ.