ಚಿತ್ರದುರ್ಗ, (ಸೆ.04): ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಗರದ ಜೆಸಿಆರ್ ಬಡಾವಣೆ ಎರಡನೇ ಕ್ರಾಸ್(ಪೂರ್ವ) ವಾಸಿ ಟಿ.ಕೆ.ವೆಂಟಕಲಕ್ಷ್ಮಮ್ಮ( 94) ಭಾನುವಾರ ಬೆಳಗಿನ ಜಾವ 3.45ಕ್ಕೆ ನಿಧನರಾದರು.
ಅವರಿಗೆ ನಗರದ ನೀಲಾದ್ರಿ ಪೆಟ್ರೋಲ್ ಬಂಕ್ ಮಾಲೀಕ ಟಿ.ಕೆ.ಅಶ್ವತನಾರಾಯಣ ಶೆಟ್ಟಿ ಸೇರಿ ಆರು ಮಂದಿ ಪುತ್ರರು, ಮೂವರು ಪುತ್ರಿಯರು ಇದ್ದಾರೆ. ಮೃತರ ಅಂತ್ಯಕ್ರಿಯೆ ನಗರದ ಮುಕ್ತಿಧಾಮದಲ್ಲಿ ಸಂಜೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.