ಉತ್ತಮ ಆರೋಗ್ಯಕ್ಕೆ ಕ್ರೀಡೆ ಅಗತ್ಯ ; ವೇಮನಿ ಸತೀಶ್ 

1 Min Read

             ವರದಿ ಮತ್ತು ಫೋಟೋ : ಸುರೇಶ್ ಪಟ್ಟಣ್,             ಮೊ : 87220 22817

ಚಿತ್ರದುರ್ಗ(ಸೆ. 03) : ಕ್ರೀಡೆ ಮಾನವನಿಗೆ ಅತಿ ಅಗತ್ಯವಾಗಿದೆ. ವ್ಯಾಯಾಮವನ್ನು ದಿನ ನಿತ್ಯ ಮಾಡುವುದರಿಂದ ಉತ್ತಮವಾದ ಆರೋಗ್ಯವನ್ನು ಪಡೆಯಬಹುದಾಗಿದೆ ಎಂದು ಆರ್.ಐ.ಡಿ.3160 ಡಿಸ್ಟಿಕ್ ಗೌರ್ನರ್ ವೇಮನಿ ಸತೀಶ್ ತಿಳಿಸಿದ್ದಾರೆ.

ನಗರದ ಒಳಾಂಗಣ ಕ್ರೀಡಾಂಗಣದಲ್ಲಿಂದು ರೋಟರಿ ಇಂಟರ್ ನ್ಯಾಷನಲ್ ಡಿಸ್ಟಿಕ್ 3160ವತಿಯಿಂದ ರೋಟರಿ ಕ್ಲಬ್ ಚಿನ್ಮೂಲಾದ್ರಿ ಜೋನ್‍ವತಿಯಿಂದ ಹಮ್ಮಿಕೊಂಡಿದ್ದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮವಾದ ಆರೋಗ್ಯವನ್ನು ಪಡೆಯಲು ಕ್ರೀಡೆ ಅತಿ ಮುಖ್ಯವಾಗಿದೆ. ಪ್ರತಿ ದಿನ ಕ್ರೀಡೆಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದರು.

ಇಂದಿನ ದಿನಮಾನದಲ್ಲಿ ಬಹುತೇಕ ಮನೆಗಳಲ್ಲಿ 2 ಅಥವಾ 4 ಚಕ್ರದ ವಾಹನಗಳು ಇದ್ದೇ ಇರುತ್ತವೆ. ಇದನ್ನು ಉಪಯೋಗ ಮಾಡುವುದರಿಂದ ದೇಹದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಇದರ ನಿವಾರಣೆಗೆ ವ್ಯಾಯಾಮ ಮಾಡುವುದು ಅಗತ್ಯವಾಗಿದೆ. ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಿ, ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ, ಈಗ ಸೋತವರು ಮುಂದಿನ ಸಮಯದಲ್ಲಿ ಗೆಲವು ಸಾಧಿಸಲಿಕ್ಕೆ ಪ್ರಯತ್ನ ಮಾಡಿ ಸೂತೆ ಎಂದ ಕುಗ್ಗ ಬೇಡಿ ಗೆದ್ದವರು ಸಹಾ ಮುಂದಿನ ದಿನದಲ್ಲಿ ಮತ್ತಷ್ಟು ಗೆಲವು ಸಾಧಿಸಲಿಕೆ ಮುಂದಾಗಿ ಎಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ರೋಟರಿಯನ್ ಮಾಧುರಿ ಮಧುಪ್ರಸಾದ್, ಚಿತ್ರದುರ್ಗ ಪೋರ್ಟನ ಮಧುಸೂಧನ್ ರೆಡ್ಡಿ, ಚಿನ್ಮೂಲಾದ್ರಿ ಅಧ್ಯಕ್ಷ ಅರುಣ್ ಕುಮಾರ್, ಫಸ್ಟ್ ಲೇಡಿ ಬಾನುಮಾತ, ಯುವಜನ ಸೇವಾ ಇಲಾಖೆಯ ಅಧಿಕಾರಿ ಶ್ರೀಮತಿ ಜಯಲಕ್ಷ್ಮೀ, ಚಿನ್ಮೂಲಾದ್ರಿ ಅಸಿಸ್ಟೆಂಟ್ ಗೌರ್ನರ್ ಶ್ರೀಮತಿ ಗಾಯತ್ರಿ ಶಿವರಾಂ ಮತ್ತು ವಿಶ್ವನಾಥ್ ಭಾಗವಹಿಸಿದ್ದರು.

ಈ ಕ್ರೀಡಾಕೂಟಕ್ಕೆ ಕರ್ನೂಲ್, ಆದ್ವಾನಿ, ನಂದ್ಯಾಲ, ಹೊಸಪೇಟೆ, ಬಳ್ಳಾರಿ, ಗುಲ್ಬರ್ಗ ಮತ್ತು ಚಿತ್ರದುರ್ಗದಿಂದ ರೋಟೇರಿಯನ್ ಕ್ರೀಡಾಪಟುಗಳು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *