ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿರುವ ಕೆಜಿಎಫ್ 2 ನಟ ಹರೀಶ್ ರೈ : ಸಿನಿಮಾಗಾಗಿ ಊತವನ್ನು ಮುಚ್ಚಿಕೊಂಡಿದ್ದು ಹೇಗೆ ಗೊತ್ತಾ..?

1 Min Read

 

ಬ್ಲಾಕ್‌ಬಸ್ಟರ್ ಹಿಟ್‌ಗಳಾದ ಕೆಜಿಎಫ್ 1 ಮತ್ತು 2 ನಲ್ಲಿ ಕಾಣಿಸಿಕೊಂಡಿರುವ ಖ್ಯಾತ ನಟ ಹರೀಶ್ ರೈ ಅವರು ಗಂಟಲು ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದಾರೆ. ಈಗಾಗಲೇ ಅವರ ಚಿಕಿತ್ಸೆಗೆ ನಟ ಯಶ್ ಸಹಾಯ ಮಾಡಿದ್ದಾರೆ. ಇನ್ನು ಈ ವರ್ಷದ ಆರಂಭದಲ್ಲಿ ಕೆಜಿಎಫ್ 2 ಚಿತ್ರೀಕರಣದ ವೇಳೆ ಹರೀಶ್ ರೈ ಅವರು ತಮ್ಮ ಗಂಟಲು ಊತವನ್ನು ಪ್ರೇಕ್ಷಕರಿಂದ ಹೇಗೆ ಮರೆಮಾಡಿದರು ಎಂಬುದರ ಕುರಿತು ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ.

“ಸಮಯ ಸಂದರ್ಭ ಎಂಬುದು ಏನನ್ನು ಬೇಕಾದರೂ ನೀಡಬಹುದು, ಕಸಿದುಕೊಳ್ಳಬಹುದು. ಆದರೆ ವಿಧಿಯಿಂದ ಪಾರಾಗಲು ಸಾಧ್ಯವಿಲ್ಲ. ನಾನು ಮೂರು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದೇನೆ. ನಟಿಸುವಾಗ ನಾನು ಉದ್ದನೆಯ ಗಡ್ಡವನ್ನು ಬಿಡುತ್ತೇನೆ. ಅದಕ್ಕೆ ಕಾರಣ ಈ ಕಾಯಿಲೆ ಸೃಷ್ಟಿಸಿರುವ ಕತ್ತಿನ ಊತವನ್ನು ಮುಚ್ಚಿಕೊಳ್ಳಲು ಎಂದಿದ್ದಾರೆ.

ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿರುವ ಬಗ್ಗೆ ನೋವು ವ್ಯಕ್ತಪಡಿಸಿದ್ದಾರೆ. “ಮೊದಲು ನನ್ನ ಬಳಿ ಹಣವಿಲ್ಲದ ಕಾರಣ ನಾನು ನನ್ನ ಶಸ್ತ್ರಚಿಕಿತ್ಸೆಯನ್ನು ಮುಂದೂಡಿದ್ದೆ. ಸಿನಿಮಾ ಬಿಡುಗಡೆಯಾಗುವವರೆಗೂ ನಾನು ಕಾಯುತ್ತಿದ್ದೆ. ಈಗ ನಾನು ನಾಲ್ಕನೇ ಹಂತಕ್ಕೆ ಬಂದಿದ್ದೇನೆ. ಅಭಿಮಾನಿಗಳು ಮತ್ತು ಉದ್ಯಮದ ಜನರ ಸಹಾಯವನ್ನು ಕೇಳುವ ವೀಡಿಯೊವನ್ನು ನಾನು ರೆಕಾರ್ಡ್ ಮಾಡಿದ್ದೇನೆ ಆದರೆ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲು ಸಾಧ್ಯವಾಗಲಿಲ್ಲ ಎಂದು ಹರೀಶ್ ಹೇಳಿದರು.

ಆದರೆ, ಕ್ಯಾನ್ಸರ್ ಚಿಕಿತ್ಸೆಗೆ ಮಾಸಿಕ ಬಿಲ್ 3 ಲಕ್ಷ ವೆಚ್ಚವಾಗುತ್ತಿದ್ದು, ಇದೀಗ ಫಲಾನುಭವಿಗಳಿಂದ ಧನ ಸಹಾಯ ಪಡೆಯಲು ಮುಂದಾಗಿದ್ದಾರೆ. ಕನ್ನಡದ ತಾರೆ ಬೆಂಗಳೂರು ಅಂಡರ್‌ವರ್ಲ್ಡ್, ಧನ್ ಧನಾ ಧನ್, ಮತ್ತು ನನ್ನ ಕನಸಿನ ಹೂವೇ ಸೇರಿದಂತೆ ಕೆಜಿಎಫ್ 1 ಮತ್ತು ಕೆಜಿಎಫ್ 2 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *