Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಈ ದೇಶದಲ್ಲಿ ಸಿದ್ದರಾಮಯ್ಯಗೂ ಜಾಗ ಇರುವುದಿಲ್ಲ : ಕೆ ಎಸ್ ಈಶ್ವರಪ್ಪ

Facebook
Twitter
Telegram
WhatsApp

ಬೆಂಗಳೂರು: ಸಿದ್ದರಾಮಯ್ಯ ಈ ದೇಶದಲ್ಲಿ ಇರುವುದಕ್ಕೆ ಯೋಗ್ಯವಲ್ಲದ ವ್ಯಕ್ತಿ. ಈ ದೇಶದಲ್ಲಿ ಇರುವುದಕ್ಕೆ ಇಷ್ಟವಿಲ್ಲದೆ ಇದ್ದರೆ ಪಾಕಿಸ್ತಾನಕ್ಕೆ ಹೋಗಲಿ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ, ಸಿದ್ದರಾಮಯ್ಯ ವಿರುದ್ಧ ಮತ್ತೆ ಮಾತಿನ ವಾಗ್ದಾಳಿ ನಡೆಸಿದ್ದಾರೆ.

ಮುಸಲ್ಮಾನರ ಜಾಗ ಅಂತ ಎಲ್ಲಿದೆ. ಮುಸಲ್ಮಾನರ ಜಾಗ ಅಂತ ಹೇಳಿ ಪಾಕಿಸ್ತಾನವನ್ನು ಬಿಟ್ಟು ಕೊಟ್ಟಾಗಿದೆ. ಈ ಹಳೇ ಕಾಂಗ್ರೆಸ್ ನಾಯಕರು. ಮುಸಲ್ಮಾನರ ಜಾಗ ಅಂತ ಹೇಳಿ ಬಾಂಗ್ಲಾದೇಶವನ್ನು ಬಿಟ್ಟು ಕೊಟ್ಟಾಗಿದೆ. ಇನ್ನು ಮುಸಲ್ಮಾನರಿಗೆ ಜಾಗ ಬಿಟ್ಟುಕೊಡಬೇಕು ಎಂಬುದು ಸಿದ್ದರಾಮಯ್ಯಗೆ ಆಸೆ ಇದ್ರೆ, ನಮ್ಮ ದೇಶದಲ್ಲಿ ಇರುವುದಕ್ಕೆ ನಿಂಗೆ ಯೋಗ್ಯವಿಲ್ಲ. ಈ ದೇಶ ಬಿಟ್ಟು ಪಾಕಿಸ್ತಾನಕ್ಕೆ ಹೋಗು ಎಂದು ಸಿದ್ದರಾಮಯ್ಯಗೆ ಹೇಳುವುದಕ್ಕೆ ಇಷ್ಟ ಪಡುತ್ತೀನಿ ಎಂದಿದ್ದಾರೆ.

ಮಹಾಪುರುಷರನ್ನು ಗೊಂದಲಕ್ಕೆ ಸಿಲುಕಿಸಲಾಗುತ್ತಿದೆ. ಇದಕ್ಕಿಂತಾ ವಂಚನೆ ಈ ದೇಶಕ್ಕೆ ಮತ್ತೊಂದಿಲ್ಲ. ದ್ರೋಹಿಗಳ ಸಾಲಿಗೆ ಸಿದ್ದರಾಮಯ್ಯ ಸೇರುತ್ತಾರೆ. ಅವರಿಗೆ ಸಪರೇಟ್ ಜಾಗ ಸೃಷ್ಟಿ ಮಾಡುತ್ತೇನೆ ಅಂದ್ರೆ ಆಮೇಲೆ ಈ ದೇಶದಲ್ಲಿ ಸಿದ್ದರಾಮಯ್ಯಗೂ ಜಾಗ ಇರುವುದಿಲ್ಲ. ಮುಸ್ಲಿಮರು ಇರುವ ಜಾಗದಲ್ಲಿ ಸಿದ್ದರಾಮಯ್ಯ ಗೆಲ್ಲುವುದಕ್ಕೆ ಯತ್ನ‌ ಮಾಡುತ್ತಿದ್ದಾರೆ. ಸಿದ್ದರಾಮಯ್ಯಗೆ ಸಿಎಂ ಆಗಬೇಕು ಎಂಬುದಿದೆ. ಈ ದೃಷ್ಟಿಯಲ್ಲಿ ಮುಸ್ಲಿಮರ ಜಾಗ ಅಂತ ಹೇಳುತ್ತಿದ್ದಾರೆ. ಇವರದ್ದು ರಾಯಣ್ಣ ಸಂತತಿ ಆಗಲಿ, ಕನಕದಾಸರ ಸಂತತಿ ಅಲ್ಲ. ಇವರದ್ದು ಜಿನ್ನಾ ಸಂತತಿ. ರಾಜ್ಯದ ಜನರು ಸಿದ್ದರಾಮಯ್ಯಗೆ ಬುದ್ದಿ‌ಕಲಿಸುತ್ತಾರೆ ಎಂದು ಕೆರಳಿ ಕೆಂಡವಾಗಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಅಪಾರ ಖಜಾನೆ ಸಂಪತ್ತು ಹೊಂದಿರುವರು.

ಈ ರಾಶಿಯವರು ಅಪಾರ ಖಜಾನೆ ಸಂಪತ್ತು ಹೊಂದಿರುವರು. ಈ ರಾಶಿಯವರು ಬಯಸಿದ್ದೆಲ್ಲಾ ಪಡೆಯುವ ಆಶಾವಾದಿಗಳು.   ಸೋಮವಾರ ರಾಶಿ ಭವಿಷ್ಯ -ಮೇ-13,2024 ಸೂರ್ಯೋದಯ: 05:48, ಸೂರ್ಯಾಸ್ತ : 06:36 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ

ಚಳ್ಳಕೆರೆ | ರೈತ ಆತ್ಮಹತ್ಯೆ

ಸುದ್ದಿಒನ್, ಚಳ್ಳಕೆರೆ, ಮೇ. 12 : ತಾಲೂಕಿನ ಬಾಲೇನಹಳ್ಳಿ ಗ್ರಾಮದ ಮೋಹನ್ ಕುಮಾರ್(36) ಎಂಬ ರೈತ ಬೆಳಗಾಗಿ ಮಾಡಿದ ಸಾಲವನ್ನು ತೀರಿಸಲಾಗದೆ ಭಾನುವಾರ ಬೆಳಗಿನ ಜಾವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ

ಹೊಸದುರ್ಗ | ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲ್,‌ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

  ಸುದ್ದಿಒನ್, ಚಿತ್ರದುರ್ಗ, ಮೇ. 12  : ಇತ್ತಿಚೀಗಷ್ಟೆ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ಜಿಲ್ಲೆ 21ನೇ ಸ್ಥಾನ ಪಡೆದುಕೊಂಡಿದೆ. ಇತ್ತ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಯಲ್ಲಿ ಫೇಲ್ ಆಗಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ

error: Content is protected !!