Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪತ್ರಕರ್ತರಿಗೆ ಗೌರವ ಇದೆ ಆದರೆ ಪತ್ರಿಕೆಗಳಿಗೆ ಗೌರವ ಇಲ್ಲದಂತಾಗಿದೆ : ಅನಂತ ಚಿನಿವಾರ್

Facebook
Twitter
Telegram
WhatsApp

ಚಿತ್ರದುರ್ಗ,(ಜು.31) :  ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘ ಜಿಲ್ಲಾ ಮಟ್ಟದ ಸಂಘಗಳಿಗೆ ಶಕ್ತಿಯನ್ನು ತುಂಬುವಂತ ಕೆಲಸವನ್ನು ಮಾಡುತ್ತಿದೆ, ಸಂಘಟನೆಗಳು ಕೈ ಜೋಡಿಸುವ ಕಾರ್ಯವನ್ನು ಮಾಡಬೇಕಿದೆ ಎಂದು  ರಾಜ್ಯ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಜೆ.ಆರ್.ಕೆಂಚೇಗೌಡ ತಿಳಿಸಿದರು.

ಕರ್ನಾಟಕ ರಾಜ್ಯ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘ ಜಿಲ್ಲಾ ಘಟಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಡಿ.ವಿ.ಗುಂಡಪ್ಪ ಅವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ನೇರವೇರಿಸಿ ಮಾತನಾಡಿದರು.

ಸಂಘ ರಚನೆಯಾದಾಗಿನಿಂದಲೂ ಸಹಾ ಪತ್ರಿಕೆಗಳ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯವನ್ನು ಮಾಡುತ್ತಿದೆ, ಇದರಲ್ಲಿ ಜಾಹೀರಾತು ನೀತಿಯ ಬಗ್ಗೆಯೂ ಸಹಾ ಸರ್ಕಾರದ ಮಟ್ಟದಲ್ಲಿ ಮಾತುಕಥೆಯನ್ನು ನಡೆಸಲಾಗಿದೆ. ಜಿಲ್ಲಾ ಮತ್ತಿ ಪ್ರಾದೇಶಿಕ ಪತ್ರಿಕೆಗಳಿಗೆ ಹೆಚ್ಚಿನ ರೀತಿಯಲ್ಲಿ ಜಾಹಿರಾತು ನೀಡಬೇಕೆಂದು ಮನವಿ ಮಾಡಲಾಗಿತ್ತು ಆದರೆ ಅದು ಇದುವರೆವಿಗೂ ಕಾರ್ಯ ರೂಪಕ್ಕೆ ಬಂದಿಲ್ಲ, ಹಳೆಯ ಪಾಲಿಸಿಯನ್ನು ತಿದ್ದುಪಡಿ ಮಾಡುವುದರ ಮೂಲಕ ಜಾಹಿರಾತನ್ನು ನೀಡಲಾಗುತ್ತಿದೆ. ಕೋವಿಡ್ ಸಮಯದಲ್ಲಿ 180 ಪತ್ರಿಕೆಗಳು ಮಾಧ್ಯಮ ಪಟ್ಟಿಗೆ ಸೇರ್ಪಡೆಯಾಗಿದೆ ಇದರ ಬಗ್ಗೆ ಪರೀಶೀಲಿಸುವಂತೆ ಮನವಿ ಮಾಡಲಾಗಿದೆ ಹೊಸದಾಗಿ ಸೇರ್ಪಡೆಯಿಂದಾಗಿ ಪತ್ರಿಕೆಗಳಿಗೆ ಆದಾಯ ಕುಂಠಿತವಾಗಿದೆ ಎಂದರು.

ನಮ್ಮ ಸಂಘದಲ್ಲಿ ಯಾರೂ ಸಹಾ ಸ್ವಾರ್ಥಿಗಳಿಲ್ಲ, ಎಲ್ಲರು ಸಹಾ ಸೇವೆಯನ್ನು ಮಾಡುವವರೆ ಆಗಿದ್ದಾರೆ. ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಜಾಹಿರಾತನ್ನು ನೀಡಬೇಕೆಂದು ಸರ್ಕಾರದ ಗಮನವನ್ನು ಸೆಳೆಯುವ ಕಾರ್ಯವನ್ನು ಸಂಘ ಮಾಡಲಿದೆ. ಸಂಘವು ಜಿಲ್ಲಾ ಮಟ್ಟದ ಸಂಘಗಳಿಗೆ ಶಕ್ತಿಯನ್ನು ತುಂಬುವಂತ ಕೆಲಸವನ್ನು ಮಾಡಲಾಗುತ್ತಿದೆ. ಸಂಘಟನೆಯ ಜೊತೆ ಜಿಲ್ಲಾ ಸಂಘಗಳು ಕೈ ಜೋಡಿಸಬೇಕಿದೆ ಎಂದು  ಜೆ.ಆರ್.ಕೆಂಚೇಗೌಡ ತಿಳಿಸಿದರು.

ಹಿರಿಯ ಪತ್ರಕರ್ತ ಅನಂತ ಚಿನಿವಾರ್ ಉಪನ್ಯಾಸ ನೀಡಿ, ಇಂದಿನ ದಿನ ಮಾನದಲ್ಲಿ ಪತ್ರಕರ್ತರಿಗೆ ಗೌರವ ಇದೆ ಆದರೆ ಪತ್ರಿಕೆಗಳಿಗೆ ಗೌರವ ಇಲ್ಲದಾಗಿದೆ. ಆಂಗ್ಲ ಮತ್ತು ಕನ್ನಡ ಪತ್ರಿಕೆಗಳಿಗೆ ತನ್ನದೆ ಆದ ಸ್ಥಾನ- ಮಾನ ಇದೆ. ಇದರಲ್ಲಿ ಯಾರೂ ಸಹಾ ಮೇಲು-ಕೀಳಲ್ಲ, ಪತ್ರಕರ್ತರು ಸಂಘ ಮತ್ತು ಪತ್ರಿಕೆಗಳ ಗೌರವವನ್ನು ಕಾಪಾಡುವ ಕೆಲಸವನ್ನು ಮಾಡಬೇಕಿದೆ. ಮಾಧ್ಯಮದಲ್ಲಿಯೂ ಸಹಾ ಭ್ರಷ್ಠಚಾರ ಹೆಚ್ಚಾಗಿದೆ. ಇದು ತುಂಬಾ ಅಪಾಯಕಾರಿಯಾಗಿದೆ. ಗುಣಮಟ್ಟದಲ್ಲಿಯೂ ಸಹಾ ರಾಜಿ ಮಾಡಲಾಗುತ್ತಿದೆ. ಪತ್ರಿಕೆಗಳು ಭಷ್ಠವಾದರೆ ಜನಾಭೀಪ್ರಾಯಗಳು ಭ್ರಷ್ಠವಾಗುತ್ತದೆ ಎಂದರು.

ಪತ್ರಿಕೆಗಳಲ್ಲಿ ಬರವಣಿಗೆ ಮತ್ತು ವರದಿಗಾರಿಗೆ ಚನ್ನಾಗಿ ಇರಬೇಕಿದೆ. ಭಾಷೆಯನ್ನು ಉಳಿಸಿ ಬೆಳಸುವ ಕೆಲಸ ಪತ್ರಕರ್ತರಿಗೆ ಆಗಬೇಕಿದೆ. ಇದರ ಜವಾಬ್ದಾರಿಯೂ ಸಹಾ ಪತ್ರಕರ್ತರ ಮೇಲಿದೆ. ಪತ್ರಕರ್ತರು ಪ್ರಶ್ನಿಸುವ ಹಕ್ಕನ್ನು ಬೇಳಸಿಕೊಳ್ಳಬೇಕಿದೆ ಯಾರೂ ಹೇಳಿದ್ದನ್ನು ಬರೆದುಕೊಂಡು ಅದನ್ನು ಸುದ್ದಿ ಮಾಡುವುದು ಮಾತ್ರವಾಗಬಾರದು. ಅಧಿಕಾರಿಗಳು ಮತ್ತು ರಾಜಕಾರಣೀಗಳ ಹತ್ತಿರ ಸಹಾಯ ಪಡೆದವರು ಮಾತ್ರ ಅವರನ್ನು ಪ್ರಶ್ನಿಸುವುದಿಲ್ಲ, ಇದರಿಂದ ಆ ಪತ್ರಿಕೆಯ ಘನತೆ ಕಡಿಮೆಯಾಗುತ್ತದೆ. ಅಧಿಕಾರಿಗಳು ಮತ್ರತು ರಾಜಕಾರಣಿಗಳ ಭಷ್ಠಚಾರವನ್ನು ಬಯಲಿಗೆ ಎಳೆಯುವ ಕಾರ್ಯವಾಗಬೇಕಿದೆ ಆಗ ಮಾತ್ರ ಉತ್ತಮವಾದ ಪತ್ರಕರ್ತರಾಗಲು ಸಾಧ್ಯವಿದೆ ಎಂದು ಅನಂತ ತಿಳಿಸಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಚಂದ್ರವಳ್ಳಿ ದಿನ ಪತ್ರಿಕೆಯ ಸಂಪಾದಕ ಸಿ.ಹೆಂಜಾರಪ್ಪ, ಇಂದಿನ ದಿನಮಾನದಲ್ಲಿ ಪತ್ರಿಕೆಗಳನ್ನು ನಡೆಸುವುದು ಕಷ್ಠವಾಗಿದೆ. ಸರ್ಕಾರದಿಂದ ಬರುವಂತ ಜಾಹಿರಾತುಗಳ ಸಂಖ್ಯೆ ಕಡಿಮೆಯಾಗಿದೆ. ಇದನ್ನು ನಂಬಿಕೊಂಡು ಪತ್ರಿಕೆಯನ್ನು ನಡೆಸುವುದು ದುಸ್ತರವಾಗಿದೆ. ರಾಜ್ಯ ಮಟ್ಟದ ಪತ್ರಿಕೆಗಳಿಗೆ ಜಾಹಿರಾತು ಹೆಚ್ಚಿದೆ ಆದರೆ ಸ್ಥಳೀಯ ಮಟ್ಟದ ಪತ್ರಿಕೆಗಳಿಗೆ ಮಾತ್ರ ಕಡಿಮೆಯಾಗಿದೆ. ಆದರೆ ಸುದ್ದಿಗಳನ್ನು ನೀಡುವುದರಲ್ಲಿ ಸ್ಥಳಿಯ ಪತ್ರಿಕೆಗಳ ಪಾತ್ರ ಹೆಚ್ಚಾಗಿದೆ ಎಂದರು.

 

ಪತ್ರಕರ್ತರಿಗೆ ಸಹಾ ಬಿಪಿಎಲ್ ಕಾರ್ಡ ಅಗತ್ಯ ಇದೆ. ಇದರೊಂದಿಗೆ ಆರೋಗ್ಯ ಕಾರ್ಡ ಸಹಾ ಬೇಕಿದೆ. ಇದರೊಂದಿಗೆ ತಾಲ್ಲೂಕು ಮಟ್ಟದ ವರದಿಗಾರರಿಗೆ ಸಂಘದಿಂದ ಕಾರ್ಡನ್ನು ನೀಡುವಂತ ಕಾರ್ಯವಾಗಬೇಕಿದೆ. ಇದರಿಂದ ನಕಲಿ ಪತ್ರಕರ್ತರನ್ನು ತಡೆಬಹುದಾಗಿದೆ. ಇನ್ನು ಕೆಲವೊಮ್ಮೆ  ಆಧಿಕಾರಿಗಳು ವಿನಾ ಕಾರಣ ಪತ್ರಿಕೆಗೆ ಕಿರುಕುಳವನ್ನು ನೀಡುತ್ತಾರೆ ಇದನ್ನು ಸಹಾ ತಪ್ಪಿಸುವಂತ ಕಾರ್ಯವಾಗಬೇಕಿದೆ. ಸಂಘ ಸರ್ಕಾರ ಮತ್ತು ಪತ್ರಿಕೆಗಳ ಕೊಂಡಿಯಾಗಿ ಕೆಲಸವನ್ನು ಮಾಡಬೇಕಿದೆ ಎಂದು ಮನವಿ ಮಾಡಿದರು.

ರಾಜ್ಯ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ಜಿಲ್ಲಾ ಅಧ್ಯಕ್ಷ ಜಿ.ಓ.ಎನ್. ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ರಾಜ್ಯ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ಕಾರ್ಯಾಧ್ಯಕ್ಷರಾದ ಎಂ. ಮಂಜುನಾಥ್, ರೇಖಾ ಪ್ರಕಾಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಗಿರೀಶ್ ಕುಲಕರ್ಣಿ, ಕೋಶಾಧ್ಯಕ್ಷ ನಾಗತಿಹಳ್ಳಿ ನಾಗರಾಜ್, ಚಿತ್ರದುರ್ಗ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ ಭಾಗವಹಿಸಿದ್ದರು.

ನಿತ್ಯವಾಣಿ ಸಂಪಾದಕ ಹಾಗೂ ರಾಜ್ಯ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಟಿ.ನವೀನ್ ಕುಮಾರ್ ಸ್ವಾಗತಿಸಿದರು.
ಎಂ.ವಿ.ಪವಿತ್ರ ಪ್ರಾರ್ಥಿಸಿದರೆ ರಂಗ ನಿರ್ದೇಶಕ ಕೆಪಿಎಂ ಗಣೇಶಯ್ಯ ಕಾರ್ಯಕ್ರಮ ನಿರೂಪಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

43 ವಯಸ್ಸು ಅಂತ ಚಿಂತೆ ಬೇಡ.. PDO ಹುದ್ದೆಗೆ ನೀವೂ ಅರ್ಜಿ ಹಾಕಬಹುದು..!

ಬೆಂಗಳೂರು: ಎಷ್ಟೋ ಯುವಕ-ಯುವತಿಯರು ಸರ್ಕಾರಿ ಕೆಲಸಕ್ಕಾಗಿ ತಮ್ಮಿಡಿ ಜೀವನವನ್ನ ಮುಡಿಪಾಗಿಟ್ಟು ಓದುತ್ತಾ ಇರುತ್ತಾರೆ. ಆದರೆ ಎಲ್ಲರಿಗೂ ಸರ್ಕಾರಿ ಕೆಲಸಕ್ಕೆ ಹೋಗುವ ಅದೃಷ್ಟವೂ ಇರುವುದಿಲ್ಲ, ಕೆಲಸವೂ ಸಿಗುವುದಿಲ್ಲ. ವಯಸ್ಸು ಮೀರುತ್ತೆ. ಆದ್ರೀಗ ಅರ್ಜಿ ಆಹ್ವಾನಿಸಿರುವ ಪಿಡಿಓ

Tirumala Laddu : ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು : ಬಿಡುಗಡೆಯಾದ ಲ್ಯಾಬ್ ವರದಿಯಲ್ಲೇನಿದೆ ?

ಸುದ್ದಿಒನ್, ತಿರುಮಲ, ಸೆಪ್ಟೆಂಬರ್. 19 : ಆಂಧ್ರಪ್ರದೇಶದಲ್ಲಿ ತಿರುಮಲ ತಿರುಪತಿ ಲಡ್ಡು ವಿಚಾರ ಬಾರೀ ಸದ್ದು ಮಾಡುತ್ತಿದೆ. ವೈಸಿಪಿ ಆಡಳಿತದಲ್ಲಿ ಲಡ್ಡೂಗಳಿಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂಬ ಸಿಎಂ ಚಂದ್ರಬಾಬು ಹೇಳಿಕೆ ಸಂಚಲನ ಮೂಡಿಸಿತ್ತು.

ಸೆಪ್ಟೆಂಬರ್ 21 ರಂದು ದಾವಣಗೆರೆಯಲ್ಲಿ ಉದ್ಯೋಗ ಮೇಳ

ದಾವಣಗೆರೆ,ಸೆಪ್ಟೆಂಬರ್.19 : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಇವರ ವತಿಯಿಂದ ಸೆ.21 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಠಡಿ ಸಂಖ್ಯೆ-51,  ಜಿಲ್ಲಾಧಿಕಾರಿಗಳ ಕಚೇರಿ, ದಾವಣಗೆರೆ ಇಲ್ಲಿ ಉದ್ಯೋಗಮೇಳ ಆಯೋಜಿಸಲಾಗಿದೆ.

error: Content is protected !!