ಬೆಂಗಳೂರು: ಇತ್ತೀಚೆಗೆ ಕೆಲವೊಂದು ಸಲ ಪ್ರಚೋದನಕಾರಿ ಪೋಸ್ಟ್ ಗಳು ಪರಿಸ್ಥಿತಿಯನ್ನು ಇನ್ನೆಲ್ಲಿಗೋ ಎಳೆದುಕೊಂಡು ಹೋಗಿ ಬಿಡುತ್ತವೆ. ಅದರಿಂದ ಪರಿಸ್ಥಿತಿಯೂ ಹದಗೆಡುತ್ತದೆ. ಇದೇ ಕಾರಣಕ್ಕೆ ಇದೀಗ ಬೆಂಗಳೂರು ಪೊಲೀಸರು ಎಚ್ಚರಿಕೆಯನ್ನು ನೀಡಿದ್ದಾರೆ. ವಿವಾದಾತ್ಮಕ ಪೋಸ್ಟ್ ಹಾಕುವವರ ವಿರುದ್ಧ ಕಟಡಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಎಡಿಜಿಪಿ ಅಲೋಕ್ ಕುಮಾರ್, ಸಾಮಾಜಿಕ ಜಾಲತಾಣದಲ್ಲಿ ಸಾಮಾಜಿಕ ಸುವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತ ಪ್ರಚೋದನಕಾರಿ ಪೋಸ್ಟ್ ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಅಂತಹ ಪೋಸ್ಟ್ ಗಳನ್ನು ಅಂತಹ ಪೋಸ್ಟ್ ಗಳನ್ನು ನಾವೂ ಗಮನಿಸುತ್ತಿದ್ದೇವೆ. ಪರಿಶೀಲಿಸುತ್ತಿದ್ದು, ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಈಗಾಗಲೇ ಪ್ರಚೋದನಕಾರಿ ಭಾಷಣ ಮಾಡಿದ ಕಾಳಿ ಸ್ವಾಮೀಜಿಯ ಮೇಲೆ ಕಾನೂನು ಕ್ರಮ ತೆಗೆದುಕೊಂಡಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
ಕಾಳಿ ಸ್ವಾಮೀಜಿ ಜನವರಿ 17 ರಂದು ಶ್ರೀರಂಗಪಟ್ಟಣದ ಮಸೀದಿ ಮುಂದೆ ನಿಂತು ವಿಡಿಯೋವೊಂದನ್ನು ಮಾಡಿದ್ದರು. ದೇವಾಲಯವನ್ನು ಕೆಡವಿ ಮಸೀದಿ ಮಾಡಿದ್ದಾರಡ. ಇದು ಮೊದಲಿಗೆ ದೇವಾಲಯವಿತ್ತು ಎಂದು ಹಿಂದೂಗಳಿಗೆ ಕರೆ ನೀಡಿದ್ದರು. ಈ ವಿಡಿಯೋ ಗಮನಿಸಿರುವ ಪೊಲೀಸರು ಕಾಳಿ ಸ್ವಾಮೀಜಿ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರೆ ಎಂದಿದ್ದಾರೆ.