ಚಿತ್ರದುರ್ಗ : ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆ ಕೆ.ಟಿ.ನಾಗಭೂಷಣ್ ಇವರಿಗೆ ರಾಜ್ಯ ಮಟ್ಟದ ಗುರು ಪ್ರತಿಭಾ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಮೈಸೂರು,
ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಾಗಿದ್ದು,, ಶಿಕ್ಷಣ,ಸೇವೆ ಮತ್ತು ಪುರಸ್ಕಾರ ಎಂಬ ಮೂರು ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ಶಿಕ್ಷಕರಿಗಾಗಿ ವಿವಿಧ ಮಾಹಿತಿಗಳ ಸಾಗಣೆ , ಶಿಕ್ಷಕರ ವೃತ್ತಿಪರ ಅಭಿವೃದ್ಧಿಗೆ ಸಹಕರಿಸುವ ತರಬೇತಿಗಳನ್ನು ನೀಡುವುದು ,ಹಾಗೂ ಅತ್ಯುತ್ತಮ ಸೇವೆ ಸಲ್ಲಿಸಿ ಎಲೆ ಮರೆ ಕಾಯಿಯಂತೆ ಇರುವ ಪ್ರತಿಭಾನ್ವಿತ ಶಿಕ್ಷಕರುಗಳನ್ನು ಗುರುತಿಸಿ ಪುರಸ್ಕರಿಸುತ್ತಾರೆ.
ಕೆ.ಟಿ.ನಾಗಭೂಷಣ್ ಅವರ ಪರಿಚಯ :
ಪರಿಷತ್ತಿನ ರಾಜ್ಯ ತಾಂತ್ರಿಕ ವಿಭಾಗದ ವೇದಿಕೆಯ ಮುಖ್ಯಸ್ಥರಾಗಿ ನಾಡಿನ ಸಾವಿರಾರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗಾಗಿ ಅನೇಕ ವಿನೂತನ ಆನ್ ಲೈನ್ ಸ್ಪರ್ಧೆಗಳನ್ನು, ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿ ,ಜೊತೆಗೆ ಹಲವಾರು ಉತ್ಸಾಹಿ ಶಿಕ್ಷಕರಿಗೆ ಅವಕಾಶ, ಹಾಗೂ ಮಾರ್ಗದರ್ಶನ ನೀಡುವುದರ ಮೂಲಕ, ಇಲಾಖೆಯ ಎಲ್ಲಾ ಕಾರ್ಯ ಕ್ರಮಗಳಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ,ವಿಭಿನ್ನ ಬೋಧನ ಪದ್ಧತಿಗಳನ್ನು ತರಗತಿ ಕೋಣೆಯ ಬೋಧನೆಯಲ್ಲಿ ಅಳವಡಿಸಿ ಉತ್ತಮ ಸೇವೆ ಸಲ್ಲಿಸುತ್ತಿರುವ ಕ್ರಿಯಾಶೀಲ ಪ್ರತಿಭಾನ್ವಿತ ಶಿಕ್ಷಕರಾದ ನಾಗಭೂಷಣ್ ಇವರ ಪ್ರಾಮಾಣಿಕ ಬದ್ಧತೆಯ ಸೇವೆಯನ್ನು ಗುರುತಿಸಿ ರಾಜ್ಯ ಪರಿಷತ್ ಇವರಿಗೆ. 2022 ನೇ ಸಾಲಿನ ಗುರು ಪ್ರತಿಭಾ ಪುರಸ್ಕಾರ ಪ್ರಶಸ್ತಿ”* ನೀಡಿ ಗೌರವಿಸಿದೆ.
ವಿದ್ಯಾರ್ಥಿಗಳ ಉತ್ತಮ ಕಲಿಕೆಗಾಗಿ ಶ್ರಮಿಸುತ್ತಿರುವ ನಾಗಭೂಷಣ್ 14 ವರ್ಷಗಳ ತನ್ನ ವೃತ್ತಿ ಸೇವೆಯಲ್ಲಿ ವಿದ್ಯಾರ್ಥಿಗಳ ಉತ್ತಮ ಕಲಿಕೆಗಾಗಿ ವಿಜ್ಞಾನ ಪ್ರಯೋಗಾಲಯವನ್ನು ನಿರ್ಮಿಸಿ ವಿದ್ಯಾರ್ಥಿಗಳ ಸ್ವ- ಅನುಭವ ಕಲಿಕೆಗೆ ನೆರವಾಗಿದ್ದಾರೆ.
ತಂತ್ರಜ್ಞಾನ ಬಳಕೆಯನ್ನು ಭೋದನೆಯಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿ ಕಲಿಕಾ ಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಈಗಾಗಲೇ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಸ್ವೀಕರಿಸಿರುವ ನಾಗಭೂಷಣ್ ಇವರಿಗೆ ಜಿಲ್ಲೆಯ ಉಪನಿರ್ದೇಶಕರಾದ ರವಿ ಶಂಕರ್ ರೆಡ್ಡಿ, ಡಯಟ್ ನ ಪ್ರಾಚಾರ್ಯರಾದ ಎಸ್.ಕೆ.ಬಿ. ಪ್ರಸಾದ್ , ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ನ ರಾಜ್ಯಧ್ಯಕ್ಷರಾದ ಪಿ.ಮಹೇಶ್, ಉಪಾಧ್ಯಕ್ಷರಾದ ವಿಜಿ ಅಗ್ರಹಾರ, ಪ್ರಧಾನ ಕಾರ್ಯದರ್ಶಿಯಾದ ಸಂತೋಷ್ ಬಂಡೆ, ರಾಜ್ಯ ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ಚಂದ್ರಶೇಖರ್ ನಾಯಕ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ. ಎಸ್.ಸುರೇಶ್ ,ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಲಕ್ಷ್ಮಮ್ಮ, ಸದಸ್ಯರಾದ ರಾಮ ಚಂದ್ರ ನಾಯಕ, ಮಂಜುಳಾ, ಮುಖ್ಯ ಶಿಕ್ಷಕರಾದ ವೆಂಕಟೇಶ್ ಹೆಚ್. ಡಿ. ಎಸ್. ಡಿ. ಎಂ. ಸಿ.ಅಧ್ಯಕ್ಷರಾದ ತಿಪ್ಪೇಸ್ವಾಮಿ, ಶಾಲಾ ಶಿಕ್ಷಕರಾದ ಪರ್ಮೇಶರಪ್ಪ, ವೀರಭದ್ರಪ್ಪ, ರಂಗನಾಥ, ಶಾಂತಲ, ಶಶಿಕಲಾ, ಜಗದೀಶ್ , ಅಫ್ರಿದಿ ಹಾಗೂ ಊರಿನ ಗ್ರಾಮಸ್ಥರು ಅಭಿನಂದಿಸಿದ್ದಾರೆ.