Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಧಿಕಾರಿಗಳು ಮತ್ತು ರಾಜಕಾರಣಿಗಳು ತಮ್ಮ ಮಕ್ಕಳನ್ನು ಸೈನ್ಯಕ್ಕೆ ಸೇರಿಸಲು ಮುಂದಾಗಬೇಕಿದೆ :  ಸರೋಜಮ್ಮ

Facebook
Twitter
Telegram
WhatsApp

ವರದಿ ಮತ್ತು ಫೋಟೋ : ಸುರೇಶ್ ಪಟ್ಟಣ್,                          ಮೊ :  9886295817

ಚಿತ್ರದುರ್ಗ,(ಜು.26) : ಮನೆಗೊಬ್ಬ ಯೋಧನನ್ನು ಕಳುಹಿಸುವಂತೆ ಕಾರ್ಯವಾಗಬೇಕಿದೆ ಆದರಲ್ಲೂ ಅಧಿಕಾರಿಗಳು ಮತ್ತು ರಾಜಕಾರಣಿಗಳು ತಮ್ಮ ಮಕ್ಕಳನ್ನು ಸೈನ್ಯಕ್ಕೆ ಸೇರಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಎಸ್.ಎಸ್.ಚೈತನ್ಯರವರ ತಾಯಿ ಸರೋಜಮ್ಮ ಅಭಿಪ್ರಾಯಪಟ್ಟಿದ್ದಾರೆ.

ವೀರಯೋಧ ಎಸ್.ಎಸ್.ಚೈತನ್ಯ ಅಭಿಮಾನಿ ಬಳಗದವತಿಯಿಂದ ನಗರದ ಸ್ಟೇಡಿಯಂ ಕ್ರಾಸ್‍ನ ವೀರಯೋಧ ಎಸ್.ಎಸ್.ಚೈತನ್ಯ ವೃತ್ತದಲ್ಲಿ ಹಮ್ಮಿಕೊಂಡಿದ್ದ ಜುಲೈ 26ರ ಕಾರ್ಗಿಲ್ ವಿಜಯೋತ್ಸವ ಮತ್ತು ಸೈನಿಕರಿಗೆ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ತಮ್ಮಲ್ಲಿರುವ ಮಕ್ಕಳಲ್ಲಿ ಸೈನ್ಯಕ್ಕೆ ಕಳುಹಿಸುವಂತ ಕಾರ್ಯಕ್ಕೆ ಪೋಷಕರು ಮುಂದಾಗಬೇಕಿದೆ ದುಡಿಮೆ ಮುಖ್ಯವಲ್ಲ, ನಮ್ಮಲ್ಲಿರುವ ಯೋಗ್ಯತೆ ನೋಡಿ ಹಣ ಬರುತ್ತಿದೆ. ಸಾವು ಎಲ್ಲರಿಗೂ ಬರುತ್ತದೆ ಅದರೆ ಅದಕ್ಕೆ ಹೆದರದೆ ಸೈನ್ಯಕ್ಕೆ ಸೇರಲು ಯುವಜನತೆ ಮುಂದಾಗಬೇಕಿದೆ. ದೇಶದಲ್ಲಿನ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗದ ಮಕ್ಕಳನ್ನು ಸೈನ್ಯಕ್ಕೆ ಕಳುಹಿಸಲು ಮುಂದಾಗಬೇಕಿದೆ. ನನ್ನ ಮಗ ಇಲ್ಲ ಎಂಬ ಭಾವನೆ ನನ್ನಲ್ಲಿ ಇಲ್ಲ ನನ್ನ ಸುತ್ತಾ ಎಲ್ಲರು ಇದ್ದಾರೆ ಇದೇ ರೀತಿ ನನ್ನ ಮಗನು ಸಹಾ ಇದ್ದಾನೆ ಎಂಬ ನಂಬಿಕೆ ಇದೆ ಎಂದರು.

ಬಿಜೆಪಿ ಮುಖಂಡರಾದ ಅನಿತ್‍ಕುಮಾರ್ ಮಾತನಾಡಿ, ಕಾರ್ಗಿಲ್ ಯುದ್ದ ನಿರಂತರವಾಗಿ 60 ದಿನಗಳ ಕಾಲ ನಡೆದಿದೆ. ಈ ಸಮಯದಲ್ಲಿ ಬಹಳಷ್ಟು ಯೋಧರನ್ನು ಕಳೆದು ಕೊಳ್ಳಬೇಕಾಯಿತು. ಈ ಯುದ್ದದಲ್ಲಿ ನಾವು ಕಳೆದು ಕೊಂಡಿದ್ದ ಬಂಕರ್‍ನ್ನು ವಾಪಾಸ್ಸು ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಈ ಯುಧ್ದದಲ್ಲಿ ಸಾವನ್ನಪ್ಪಿದ ಯೋಧರ ಸವಿನೆನಪಿಗಾಗಿ ಅವರ ಆತ್ಮಕ್ಕೆ ಶಾಂತಿಯನ್ನು ಕೋರುವ ದಿನವಾಗಿದ್ದು ಕಾರ್ಗಿಲ್ ವಿಜಯೋತ್ಸವನ್ನು ಆಚರಣೆ ಮಾಡಲಾಗುತ್ತಿದೆ ಎಂದರು.

ಇಂದಿನ ದಿನಮಾನದಲ್ಲಿ ಸೈನ್ಯಕ್ಕೆ ಯೋಧರನ್ನು ಕಳುಹಿಸುವುದು ಅಪರೂಪವಾಗಿದೆ ಅಂತಹದರಲ್ಲಿ ಚೈತನ್ಯರವರ ತಾಯಿಯವರು ಅಂದಿನ ಕಾಲದಲ್ಲಿಯೇ ತಮ್ಮ ಮಗನನ್ನು ಸೈನ್ಯಕ್ಕೆ ಕಳುಹಿಸುವುದರ ಮೂಲಕ ದೇಶ ಸೇವೆಯಲ್ಲಿ ಪಾತ್ರವಹಿಸಿದ್ದಾರೆ. ಈ ವೃತ್ತಕ್ಕೆ ಚೈತನ್ಯ ವೃತ್ತ ಎಂದು ನಾಮಕರಣ ಮಾಡಿರುವುದು ಉತ್ತಮವಾದ ಕೆಲಸವಾಗಿದೆ. ಇಲ್ಲಿ ಅನೇಕ ಕಾಲೇಜುಗಳಿದ್ದು ಅಲ್ಲಿ ಓದುವ ವಿದ್ಯಾರ್ಥಿಗಳಿಗೆ ಅವರು ಸ್ಪೂರ್ತಿಯಾಗಿದ್ದಾರೆ ಎಂದು ಅನಿತ್ ತಿಳಿಸಿದರು.

ಕಾರ್ಯಕ್ರಮದಲ್ಲಿ ದೇವರಾಜು ಅರಸ್ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ರಘುಚಂದನ್, ಸಿಆರ್‍ಪಿಎಸ್.ನ ಯೋಧ ಜಗದೀಶ್, ಮೃತ ಯೋಧರ ಪತ್ನಿಯರಾದ ಮಂಜುಳ ಮಂಜುನಾಥ್, ರೇಖಾ ಪ್ರಭಾಕರ್, ಆರ್ ಎಸ್.ಎಸ್.ನ ಜಿಲ್ಲಾ ಪ್ರಮುಖ್ ರಾಜಕುಮಾರ್, ಕೆ.ಎಸೆ.ಆರ್.ಟಿ.ಸಿ.ಯ ಬಾಬು, ಪರಶುರಾಮ್, ಚಂದನ್ ಭಾಗವಹಿಸಿದ್ದರು. ನಟರಾಜ್ ಕಾರ್ಯಕ್ರಮ ನಿರೂಪಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ : ಜೂನ್ 3 ರಂದು ಮತದಾನ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ. ಮೇ.03: ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಆಯ್ಕೆಯ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 4615 ಮತದಾರರು ಇದ್ದು , ಜೂನ್ 3 ರಂದು ಮತದಾನ ಜರುಗಲಿದೆ ಎಂದು ಆಗ್ನೇಯ

ಚಿತ್ರದುರ್ಗದ ರಾಜಬೀದಿಗಳಲ್ಲಿ ವಿಜೃಂಭಣೆಯಿಂದ ಸಾಗಿದ ಏಕನಾಥೇಶ್ವರಿ ಅಮ್ಮನವರ ಮೆರವಣಿಗೆ ಮತ್ತು ಗ್ರಾಮ ದೇವತೆ ಬರಗೇರಮ್ಮನವರ ಮೆರವಣಿಗೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 03 : ಏಕನಾಥೇಶ್ವರಿ ಅಮ್ಮನ ಮೆರವಣಿಗೆ ನಗರದ ರಾಜಬೀದಿಗಳಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಕೋಟೆ

ನೇಹಾ ಹತ್ಯೆ ವೇಳೆ ನೆರವಿಗೆ ಧಾವಿಸಿದ ಜೋಶಿ ವಿರುದ್ಧ ಪ್ರಚಾರ ಮಾಡ್ತಿದ್ದೀರಾ ಎಂದು ಕೇಳಿದ್ದಕ್ಕೆ ನೇಹಾ ತಂದೆ ಏನಂದ್ರು..?

ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ನಡೆದಿದ್ದು, ಈಗ ಎರಡನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ ಕಾರ್ಯವೂ ನಡೆಯುತ್ತಿದೆ. ಹುಬ್ಬಳ್ಳಿ ಧಾರವಾಢ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನೋದ್ ಸೂಟಿ ಸ್ಪರ್ಧೆ ಮಾಡಿದ್ದು ಅದಕ್ಕೆ ವಿರುದ್ಧ

error: Content is protected !!