ಕುರುಗೋಡು.(ಜು.23) : ಮಾಜಿ ಶಾಸಕ ಸುರೇಶ್ ಬಾಬು ಥರ್ಡ್ ಕ್ಲಾಸ್ ರಾಜಕೀಯ ಮಾಡುವುದು ಬಿಡಲಿ. ಕ್ಷೇತ್ರದ ಜನರಿಗೆ ಸುಳ್ಳು ಸುದ್ದಿ ನೀಡಿ ದಿಕ್ಕು ತಪ್ಪಿಸುವ ಹುನ್ನಾರ ನಿಲ್ಲಿಸಲಿ ಎಂದು ಹಾಲಿ ಶಾಸಕ ಜೆ. ಎನ್. ಗಣೇಶ್ ಹೇಳಿದರು.
ಪಟ್ಟಣದ ಶಾಸಕರ ಜನ ಸಂಪರ್ಕ ನಿಲಯದಲ್ಲಿ ಕರೆಯಲಾಗಿದ್ದ ಪತ್ರಿಕೆ ಗೋಷ್ಠಿ ಯಲ್ಲಿ ಮಾತನಾಡಿದ ಅವರು, ನಾವು ಕಾಲುವೆಗಳ ಮೇಲೆ ಹೋಗಿ ರೈತರಿಗೆ ನೀರು ಬಿಡುವುದಕ್ಕೆ ಹೋದ್ರೆ ನಮ್ನ ನೋಡಿ ಕಾಲುವೆ ಮೇಲೆ ಬರೋದು. ಕಾರ್ಯಕರ್ತರ ಮದುವೆಗೆ ಹೋದ್ರೆ ಬರೋದು, ಕ್ಷೇತ್ರದಲ್ಲಿ ಮನೆ ಮಾಡಿದ್ರೂ ತಾನು ಮನೆ ಮಾಡೋದು ಅದಕ್ಕಾಗಿ ಸುರೇಶ್ ಬಾಬು ಕಾಫಿ ರಾಜಕೀಯ ಮಾಡುವುದು ಕೈ ಬಿಡಲಿ ಮಾದಲು ಎಂದರು.
ತಮ್ಮಂಗೆ ಸುಳ್ಳು ರಾಜಕೀಯ ಮಾಡುವುದು, ಕಾರ್ಯಕರ್ತರ ಹಣ ಕಬಳಿಸುವುದು, ಬೇನಾಮಿ ಆಸ್ತಿ ಮಾಡುವುದು ನಾವು ಕಲಿತಿಲ್ಲ. ಅದೇ ಕಂಪ್ಲಿ ಯಲ್ಲಿ 176 ಎಕರೆ ಶುಗರ್ ಕಾರ್ಖಾನೆ ಕಬ್ಜ ಮಾಡಿದ್ದಾರೆ. ಶ್ರೀಧರ್ ಗಡ್ಡೆ ಯಲ್ಲಿ 30 ಎಕರೆ ಬೇನಾಮಿ ಆಸ್ತಿ ಮಾಡಿ ಅಲ್ಲಿನ ಬಿಜೆಪಿ ಕಾರ್ಯಕರ್ತರ 500 ಕೋಟಿ ಲೂಟಿ ಮಾಡಿದ್ದಾರೆ. ಅದಲ್ಲದೆ ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿಯ ಅತ್ತಿರ 27 ಕೋಟಿ ಇಸ್ಕೊಂಡಿರೋದು ನನ್ ಅತ್ತಿರ ಕಾಲ್ ರೆಕಾರ್ಡ್ ಸಮೇತ ಇದೆ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುತ್ತೇನೆ ಇಲ್ಲ ಅಂದ್ರೆ ಅವರನ್ನೇ ಕರೆದು ಪತ್ರಿಕೆಗೋಷ್ಠಿ ನಡೆಸುತ್ತೇನೆ ಎಂದು ತಿಳಿಸಿದರು.
ಅಲ್ಲದೆ ಸುರೇಶ್ ಬಾಬು 1 ಕೋಟಿ 70 ಲಕ್ಷ ಬೆಲೆ ಬಾಳುವ ಕಾರ್ ನಲ್ಲಿ ಓಡಾಡುತ್ತಿದ್ದಾರೆ ಅಲ್ಲದೆ 8 ಪ್ಯಾಕ್ಟರಿಗಳು ಬೇನಾಮಿ ಅಸ್ತಿಯಲ್ಲಿ ನಡೆಸುತ್ತಿದ್ದಾರೆ ಇದರಿಂದ ತಿಂಗಳಿಗೆ 70 ರಿಂದ 80 ಲಕ್ಷ ಲಾಭದಾಯಕ ಗಳಿಸುತ್ತಿದ್ದಾರೆ ಇದೆಲ್ಲ ಸುರೇಶ್ ಬಾಬು ಗೆ ಹೇಗೆ ಬಂತು.? ಇಲ್ಲಾಂದ್ರೆ ಅವರ ಕುಟುಂಬ ಇದಕ್ಕಿಂತ ಮೊದಲು ಜಿಂದಾಲ್ ಪ್ಯಾಕ್ಟರಿಗಳನ್ನು ಏನಾದ್ರೂ ನಡೆಸುತಿದ್ರಾ ಎಂದು ಪ್ರೆಶ್ನೆ ಮಾಡಿದರು?
ಕುರುಗೋಡು ತಾಲೂಕಿನಲ್ಲಿ 30 ಎಕರೆ ಆಸ್ತಿ ಮಾಡಿ ರಿಯಲ್ ಎಸ್ಟೇಟ್ ಮಾಡುತ್ತಾನೆ ಗಣೇಶ್ ಎಂದು ಆರೋಪ ಮಾಡಿದ್ದಾರೆ ಕುರುಗೋಡಲ್ಲಿ ನನ್ನ ಹೆಸರಿನ ಮೇಲೆ 1 ಎಕರೆ ಭೂಮಿ ಇರೋದು ಪಹಣಿ ಸೇರಿ ದಾಖಲಾತಿ ಸಮೇತ ನೀಡಿದರೆ ರಾಜಕೀಯದಿಂದ ಹಿಂಜರಿಯುತ್ತೇನೆ ಎಂದು ಹೇಳಿದರು.
ಕುರುಗೋಡು ಮತ್ತು ಕಂಪ್ಲಿ ಗೆ ಮಂಜೂರಾದ 100 ಆಸೀಗೇವುಳ್ಳ ಆಸ್ಪತ್ರೆ ಸಚಿವ ಬಿ. ಶ್ರೀರಾಮುಲು ಕ್ಯಾಬಿನೆಟ್ ಸಭೆಯಲ್ಲಿ ಅನುಮೋದನೆ ಗೊಳಿಸಿ ಅನುದಾನ ಬಿಡುಗಡೆ ಗೊಳಿಸಿದ್ದಾರೆ ಎಂದು ಹೇಳುತ್ತಿದ್ದಾರೆ, ಅದು ಡಿ. ಕೆ. ಶಿವುಕುಮಾರ್ ಜಿಲ್ಲಾ ಉಸ್ತುವಾರಿ ಮಂತ್ರಿ ಇದ್ದಾಗ ಆಗಿರೋದು ಅದಕ್ಕೆ ಸುಮಾರು 2 ವರ್ಷಗಳ ಕಾಲ ಶ್ರಮ ಪಟ್ಟಿದ್ದೇವೆ. 3 ರಿಂದ 4 ಕೋಟಿ ವೆಚ್ಚದ ಅನುದಾನ ಆದ್ರೆ ಜಿಲ್ಲಾಧಿಕಾರಿಯಿಂದ ಅನುಮೋದನೆ ಗೊಳ್ಳಿಸಬಹುದಿತ್ತು, ಆದ್ರೆ 20 ಕೋಟಿ ಆಗಿರುವುದರಿಂದ ಕ್ಯಾಬಿನೆಟ್ ನಲ್ಲಿ ಅನುಮೋದನೆ ಗೊಳ್ಳಬೇಕು ಅದಕ್ಕಿಂತ ಮುಂಚಿತವಾಗಿ ವಾಣಿಜ್ಯ, ಕೈಗಾರಿಕೆ, ಅರೋಗ್ಯ, ಅರಣ್ಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಅನುಮತಿ ಸಿಗಬೇಕು ಇದಕ್ಕಾಗಿ 2 ವರ್ಷ ಶ್ರಮ ಪಟ್ಟು ಇಲಾಖೆ ವಾರು ತೆರಳಿದ್ದೇವೆ ಕ್ಷೇತ್ರದ ಜನರ ಅನುಕೂಲಕ್ಕೆ ಅಲ್ಲದೆ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ದಾನಿ ಮಾಡಿರುವ ಸ್ವಾಮೀಜಿಗಳ ಅತ್ತಿರ ಸುಮಾರು ಬಾರಿ ಹೋದಾಗ 6 ಎಕರೆ ನೀಡಿದ್ದಾರೆ ಇಲ್ಲ ಅಂದ್ರೆ ಕುರುಗೋಡಲ್ಲಿ ಆಸ್ಪತ್ರೆ ಆಗುತ್ತಿರಲಿಲ್ಲ ಇವಾಗ ಸುರೇಶ್ ಬಾಬು ಅವರು ಸಚಿವ ರಾಮುಲು ಮಂಜೂರು ಮಾಡಿಸಿದ್ದಾರೆ ಎಂದು ಕ್ಷೇತ್ರದ ಜನರಿಗೆ ತಿಳಿಸಲು ಹೊರಟಿರುವುದು ಶೋಭೆಯಲ್ಲ ಎಂದು ಎಚ್ಚರಿಸಿದರು.
ಕಂಪ್ಲಿ ಕ್ಷೇತ್ರಕ್ಕೆ ಸಚಿವ ಶ್ರೀರಾಮುಲು ಕೊಡುಗೆ ಶೂನ್ಯ, ಕಂಪ್ಲಿ ಸೇತುವೆ ನಿರ್ಮಾಣಕ್ಕೆ ವಿಧಾನಸಭೆಯಲ್ಲಿ 3 ಬಾರಿ ದ್ವನಿ ಎತ್ತಿ ಮಾತಾಡಿದ್ದೇನೆ ಎಂದರು.
ಸುರೇಶ್ ಬಾಬು ಅವರು ನನ್ನ ತಾಕತ್ತು ಬಗ್ಗೆ ಮಾತನಾಡುತ್ತಿದ್ದಾರೆ. ನನ್ನ ತಾಕತ್ತು ಏನು ಅಂತ ಕ್ಷೇತ್ರದ ಜನರು ವೋಟು ಹಾಕಿ ಗೆಲ್ಲುಸಿದವರಿಗೆ ಗೊತ್ತಿದೆ. ಅಲ್ಲದೆ ಬಹಿರಂಗ ಚರ್ಚೆಗೆ ಕರೆಯುತ್ತಿದ್ದಾರೆ ಸುರೇಶ್ ಬಾಬು ಕೆಳಮಟ್ಟದ ರಾಜಕಾರಣಿ ಅವರೊಂದಿಗೆ ಬಹಿರಂಗ ಚರ್ಚೆಗೆ ಬರಲ್ಲ ಅವರ ಸಹೋದರ ಮಾವ ಸಚಿವ ಬಿ. ಶ್ರೀರಾಮುಲು ಅವರ ಜೊತೆಗೆ ಬಹಿರಂಗ ಚರ್ಚೆಗೆ ಬರಲು ಸಿದ್ದ ಎಂದು ಸವಾಲು ಹೊಡ್ದಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಎನ್. ನಾಗರಾಜ್, ಚನ್ನಪಟ್ಟಣ ಮಲ್ಲಿಕಾರ್ಜುನ, ಬ್ಲಾಕ್ ಅಧ್ಯಕ್ಷ ಬಂಗಿ ಮಲ್ಲಯ್ಯ,ಮುಖಂಡರಾದ ವೆಂಕಟೇಶ್ ಗೌಡ, ಜೋಗಿ ಸುಂಕಪ್ಪ, ಒಂಕಾರಪ್ಪ ಸೇರಿದಂತೆ ಇತರರು ಇದ್ದರು.