Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸಲು ಜುಲೈ 31 ಕೊನೆ ದಿನ..!

Facebook
Twitter
Telegram
WhatsApp

 

ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವ ಗಡುವನ್ನು ವಿಸ್ತರಿಸುವ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ಕಂದಾಯ ಇಲಾಖೆಯ ಕಾರ್ಯದರ್ಶಿ ತರುಣ್ ಬಜಾಜ್ ಸ್ಪಷ್ಟಪಡಿಸಿದ್ದಾರೆ.

ಜುಲೈ 31 ಕೊನೆಯ ದಿನಾಂಕವಾಗಿದ್ದು, ಅಂತಿಮ ಗಡುವಿನೊಳಗೆ ರಿಟರ್ನ್ಸ್ ಬರುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ. 2021-22 ರ ಹಣಕಾಸು ವರ್ಷಕ್ಕೆ ಜುಲೈ 20 ರವರೆಗೆ 2.3 ಕೋಟಿಗೂ ಹೆಚ್ಚು ಐಟಿಆರ್‌ಗಳನ್ನು ಸಲ್ಲಿಸಲಾಗಿದೆ ಮತ್ತು ಈ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ ಎಂದು ಬಜಾಜ್ ವಿವರಿಸಿದರು.

ಕೋವಿಡ್ ಪರಿಣಾಮ, ಐಟಿ ಪೋರ್ಟಲ್‌ನಲ್ಲಿನ ಸಮಸ್ಯೆಗಳು ಮತ್ತು ಇತರ ಅಂಶಗಳಿಂದ ಕಳೆದ ವರ್ಷ ಡಿಸೆಂಬರ್ 31 ರವರೆಗೆ ಗಡುವನ್ನು ವಿಸ್ತರಿಸಲಾಗಿತ್ತು. ಈ ಬಾರಿಯೂ ಅದೇ ರೀತಿ ಗಡುವು ವಿಸ್ತರಿಸಬಹುದು ನಿಧಾನವಾಗಿ ಐಟಿಆರ್‌ಗಳನ್ನು ಸಲ್ಲಿಸಬಹುದು ಎಂದು ಕೆಲವರು ಭಾವಿಸಿರಬಹುದು ಎಂದು ಬಜಾಜ್ ಹೇಳಿದ್ದಾರೆ. ಆದರೆ ಈ ಬಾರಿ ಗಡುವು ವಿಸ್ತರಿಸುವ ಯೋಜನೆ ಇಲ್ಲ. ಪ್ರಸ್ತುತ ನಿತ್ಯ 15-18 ಲಕ್ಷ ರಿಟರ್ನ್ಸ್ ಬರುತ್ತಿದ್ದರೆ, ಮುಂದಿನ ದಿನಗಳಲ್ಲಿ 25 ಲಕ್ಷದಿಂದ 30 ಲಕ್ಷಕ್ಕೆ ಏರಿಕೆಯಾಗಬಹುದು ಎಂದು ವಿವರಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

High Blood Pressure : ಅಧಿಕ ರಕ್ತದೊತ್ತಡ ಎಷ್ಟು ಅಪಾಯಕಾರಿ ಗೊತ್ತಾ ?

ಸುದ್ದಿಒನ್ : ಅಧಿಕ ರಕ್ತದೊತ್ತಡ ಎನ್ನುವುದು ಒಂದು ರೀತಿಯ ಸೈಲೆಂಟ್ ಕಿಲ್ಲರ್ ಇದ್ದಂತೆ. ಈ ಸಮಸ್ಯೆ ಇದ್ದರೆ ಪ್ರತಿದಿನ ವೈದ್ಯರ ಸಲಹೆಯಂತೆ ಔಷಧಿ ತೆಗೆದುಕೊಳ್ಳಬೇಕು. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಮುಂತಾದ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಈ ರಾಶಿಯವರು ಏನೇ ಪ್ರಯತ್ನಿಸಿದರು ಸೋಲುಗಳ ಮೇಲೆ ಸೋಲು ಏಕೆ? ಇದಕ್ಕೆಲ್ಲ ಕಾರಣವೇನು?

ಈ ರಾಶಿಯವರು ಏನೇ ಪ್ರಯತ್ನಿಸಿದರು ಸೋಲುಗಳ ಮೇಲೆ ಸೋಲು ಏಕೆ? ಇದಕ್ಕೆಲ್ಲ ಕಾರಣವೇನು? ಮಂಗಳವಾರ ರಾಶಿ ಭವಿಷ್ಯ -ಮೇ-21,2024 ನರಸಿಂಹ ಜಯಂತಿ ಸೂರ್ಯೋದಯ: 05:46, ಸೂರ್ಯಾಸ್ತ : 06:39 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ

error: Content is protected !!