ಸಮಂತಾ ಜೊತೆಗೆ ವಿಚ್ಛೇಧನದ ಬಳಿಕ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ ನಾಗಚೈತನ್ಯ..!

1 Min Read

ನವದೆಹಲಿ: ಸೌತ್ ಸೂಪರ್ ಜೋಡಿ ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ಅವರು ಹತ್ತು ವರ್ಷದ ಮದುವೆಯನ್ನು ಮುರಿದುಕೊಂಡಿದ್ದಾರೆ. ಅವರು ಕಳೆದ ವರ್ಷ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಊಹಾಪೋಹಗಳಿಗೆ ತೆರೆ ಎಳೆದಿದ್ದರು. ಡಿವೋರ್ಸ್ ಆದ ಮೇಲೆ ಇಬ್ಬರು ತಮ್ಮ ತಮ್ಮ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ.

ಇತ್ತೀಚೆಗೆ ಸಿನಿಮಾದ ಪ್ರಚಾರದ ವೇಳೆ ಮಾಧ್ಯಮಗಳು ನಾಗಚೈತನ್ಯ ಅವರ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆ ಕೇಳಿದ್ದು, COVID-19 ಮತ್ತು ಮಾಜಿ ಪತ್ನಿ ಸಮಂತಾ ರುತ್ ಪ್ರಭುವಿನಿಂದ ವಿಚ್ಛೇದನದ ನಂತರ ತನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ.

“ಈ ಅವಧಿಯಲ್ಲಿ ನಾನು ವ್ಯಕ್ತಿಯಾಗಿ ಸಾಕಷ್ಟು ಬದಲಾಗಿದ್ದೇನೆ. ಮೊದಲು ನಾನು ಹೆಚ್ಚು ಓಪನ್ ಅಪ್ ಆಗಲು ಸಾಧ್ಯವಾಗಲಿಲ್ಲ. ಆದರೆ ಈಗ ನನಗೆ ಸಾಧ್ಯವಾಗಿದೆ. ನನ್ನ ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ತುಂಬಾ ಸಮಯ ಕಳೆಯುತ್ತಿದ್ದೇನೆ. ನನ್ನನ್ನು ನೋಡಲು ತುಂಬಾ ಸಂತೋಷವಾಗಿದೆ. ಸಂಪೂರ್ಣವಾಗಿ ಹೊಸ ವ್ಯಕ್ತಿಯಾಗಿದ್ದೇನೆ ಎಂದಿದ್ದಾರೆ.

 

ಕಳೆದ ವರ್ಷ ಅಕ್ಟೋಬರ್‌ನಲ್ಲಿ, ನಾಗ ಚೈತನ್ಯ ಮತ್ತು ಸಮಂತಾ ಇಬ್ಬರು ಡಿವೋರ್ಸ್ ಬಗ್ಗೆ ಮಾಹಿತಿ ನೀಡಿದ್ದರು. ಹತ್ತು ವರ್ಷದ ಸಂಬಂಧವನ್ನು ಕಳೆದುಕೊಳ್ಳುತ್ತಿದ್ದೇವೆ. ನಮ್ಮ ವೈಯಕ್ತಿಕ ಜೀವನವನ್ನು ಗೌರವಿಸಿ ಎಂದು ಮನವಿ ಮಾಡಿದ್ದರು

Share This Article
Leave a Comment

Leave a Reply

Your email address will not be published. Required fields are marked *