ಕೋಲಾರ: ವ್ಯವಸಾಯ ಮಾಡುವ ರೈತರು ಯಾವ ಕಾಲಕ್ಕೆ ಯಾವ ಬೆಳೆಯನ್ನು ಬೆಳೆದರೆ ಲಾಭ ಬರುತ್ತೆ ಎಂದು ಯೋಚಿಸಿಯೇ ಬೆಳೆ ಹಾಕುತ್ತಾರೆ. ಆದರೆ ಬೆಳೆ ಕೈಗೆ ಬಂದು ಇನ್ನೇನು ಲಾಭ ಬರಬೇಕು ಎನ್ನುವಷ್ಟರಲ್ಲಿ ಬೆಳೆಯ ಬೆಲೆ ಕುಸಿತವಾದರೆ ರೈತನ ಮನಸ್ಥಿತಿ, ಪರಿಸ್ಥಿತಿ ಏನಾಗಬೇಡ. ಕೋಲಾರದ ರೈತರ ಪರಿಸ್ಥಿತಿಯೂ ಈಗ ಮರುಗುವಂತಾಗಿದೆ.
ಕೋಲಾರ ಜಿಲ್ಲೆಯಲ್ಲಿ ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಟೊಮೋಟೋ ಬೆಳೆದಿದ್ದಾರೆ. ಎರಡೂವರೆ ಎಕರೆಯಲ್ಲಿ ಸುಮಾರು ಐದು ಲಕ್ಷ ಹಣ ಖರ್ಚು ಮಾಡಿ ಬೆಳೆ ಬೆಳದಿದ್ದ ರೈತ, ಇದೀಗ ತನ್ನ ಕೈಯ್ಯಾರೆ ತಾನೇ ಬೆಳಯನ್ನು ನಾಶ ಮಾಡಿದ್ದಾನೆ. ಟೊಮೋಟೋ ಬೆಳೆಯನ್ನು ಬುಡ ಸಮೇತ ಕಿತ್ತು ಬಿಸಾಕಿದ್ದಾರೆ.
ಬೆಳೆ ಬೆಳೆದಾಗ ಟೊಮೋಟೋ ಬೆಲೆ ತುಂಬಾ ಚೆನ್ನಾಗಿಯೇ ಇತ್ತು. ಇದೀಗ ಬೆಲೆ ಸಾಕಷ್ಟು ಕುಸಿತವಾಗಿದೆ. ಇದರಿಂದ ರೈತರು ಕಂಗಲಾಗಿದ್ದು, ಈ ನಿರ್ಧಾರಕ್ಕೆ ಬಂದಿದ್ದಾರೆ. ಬೆಳೆ ಬೆಳೆದಾಗ 15 ಕೆಜಿಯ ಒಂದು ಬಾಕ್ಸಿಗೆ ಎರಡು ಸಾವಿರ ರೂಪಾಯಿ ಇತ್ತು. ಆದರೆ ಈಗ ದಿಢೀರನೇ ಕುಸಿದಿದೆ. ಹೀಗಾಗಿ ಕೋಪಗೊಂಡ ರೈತ ಟೊಮೋಟೋ ಬೆಳೆಯನ್ನು ನಾಶ ಮಾಡಿದ್ದಾರೆ.