ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒಡೆತನದ ನ್ಯಾಷನಲ್ ಹಿಲ್ ವ್ಯೂವ್ ಶಾಲೆಗೆ ನಿನ್ನೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಈ ಕೇಸ್ ಗೆ ಸಂಬಂಧಿಸಿದಂತೆ ಇಂದು ಟ್ವಿಸ್ಟ್ ಸಿಕ್ಕಿದೆ. ಆ ಬಾಂಬ್ ಬೆದರಿಕೆ ಹಾಕಿದವ ಅದೇ ಶಾಲೆಯ ವಿದ್ಯಾರ್ಥಿ ಎನ್ನಲಾಗಿದೆ.
ಹುಚ್ಚ ವೆಂಕಟ್ ಹೆಸರಿನಲ್ಲಿ ಈ ಬಾಂಬ್ ಬೆದರಿಕೆ ಕರೆ ಬಂದಿತ್ತು. ಅದೇ ಶಾಲೆಯಲ್ಲಿ ಓದುತ್ತಿರುವ ಹತ್ತನೇ ತರಗತಿ ವಿದ್ಯಾರ್ಥಿ ಈ ರೀತಿಯ ಬೆದರಿಕೆ ಹೊಡ್ಡಿದ್ದಾನೆ ಎಂದು ತಿಳಿದು ಬಂದಿದೆ. ಭಾನುವಾರ ರಾತ್ರಿಯೇ ಇಮೇಲೆ ಮಾಡಿ ಬೆದರಿಕೆ ಹಾಕಲಾಗಿತ್ತು. ಬೆಳಗ್ಗೆ ಶಿಕ್ಷಕರೆಲ್ಲಾ ಶಾಲೆಗೆ ಬಂದ ಬಳಿಕ ಇಮೇಲ್ ಪರೀಕ್ಷಿಸಿದ ಬಳಿಕ ವಿಷಯ ಗೊತ್ತಾಗಿತ್ತು. ಅಷ್ಟೊತ್ತಿಗೆ ಮಕ್ಕಳೆಲ್ಲರೂ ಶಾಲೆಗೆ ಬಂದಿದ್ದರು. ತಕ್ಷಣ ಮಕ್ಕಳನ್ನೆಲ್ಲಾ ಸ್ಥಳಾಂತರ ಮಾಡಿದ್ದರು. ಆದರೆ ಈ ಬಾಂಬ್ ಬೆದರಿಕೆ ಹಾಕಿರುವ ವಿಚಾರ ಶಾಕಿಂಗ್ ಆಗಿದೆ.
ಅದೇ ಶಾಲೆಯ ವಿದ್ಯಾರ್ಥಿ ಪರೀಕ್ಷೆ ಮುಂದೂಡಿಸಲು ಈ ರೀತಿ ಮಾಡಿದ್ದಾನೆ. ಜುಲೈ 21ಕ್ಕೆ ಹತ್ತನೇ ತರಗತಿಯ ಫಸ್ಟ್ ಸೆಮಿಸ್ಟರ್ ಪರೀಕ್ಷೆ ಇದ್ದ ಕಾರಣ, ಪರೀಕ್ಷೆ ಮುಂದೂಡಲು ಈ ರೀತಿ ಮಾಡಿದ್ದಾನೆ. ಸದ್ಯ ಆರ್ ಆರ್ ನಗರ ಪೊಲೀಸರು ವಿದ್ಯಾರ್ಥಿಯನ್ನು ಬಾಲ ಅಪರಾಧಿಗಳ ಪುನಶ್ಚೇತನಕ್ಕೆ ಕಳುಹಿಸಿದ್ದಾರೆ.