President election: ವೀಲ್ ಚೇರ್ ಮೇಲೆ ಬಂದು ಮತ ಚಲಾಯಿಸಿದ ಮಾಜಿ ಪಿಎಂ ಮನಮೋಹನ್ ಸಿಂಗ್ – ವೈರಲ್ ವಿಡಿಯೋ

ನವದೆಹಲಿ: ಕಾಂಗ್ರೆಸ್ ಸಂಸದ ಮತ್ತು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸಲು ಇಂದು ಸಂಸತ್ತಿಗೆ ಗಾಲಿ ಖುರ್ಚಿಯಲ್ಲಿ ಬಂದಿದ್ದಾರೆ. ಅವರು ಗಾಲಿಕುರ್ಚಿಯಲ್ಲಿ ಸಂಸತ್ತಿಗೆ ಬಂದ ಫೋಟೋ ಮತ್ತು ವೀಡಿಯೊಗಳು ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದ್ದ ಸಂಸತ್ತಿನ ಎರಡನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 63 ಕ್ಕೆ ಮನಮೋಹನ್ ಅವರನ್ನಿ ಕರೆದೊಯ್ಯಲಾಯಿತು. ಮನಮೋಹನ್ ಸಿಂಗ್ ಮತಪೆಟ್ಟಿಗೆಯನ್ನು ತಲುಪಿದ ಕೂಡಲೇ ಅವರನ್ನು ನಾಲ್ಕು ಅಧಿಕಾರಿಗಳು ಎತ್ತಿಕೊಂಡು ಹೋದರು. ಅಧಿಕಾರಿಗಳು ಮನಮೋಹನ್ ಸಿಂಗ್ ಅವರಿಗೆ ಗಾಲಿಕುರ್ಚಿಯಿಂದ ಮತ ಚಲಾಯಿಸಲು ಸಹಾಯ ಮಾಡಿದರು.

ಇದಕ್ಕೂ ಮುನ್ನ ಅಕ್ಟೋಬರ್ 13 ರಂದು ಮನಮೋಹನ್ ಸಿಂಗ್ ಅವರು ಜ್ವರ ಮತ್ತು ದೈಹಿಕ ದೌರ್ಬಲ್ಯದಿಂದ ಏಮ್ಸ್‌ಗೆ ದಾಖಲಾಗಿದ್ದರು. ಅವರು ಹೃದ್ರೋಗ ತಜ್ಞ ನಿತೀಶ್ ನಾಯಕ್ ಅವರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು. ಡಾ.ನಿತೀಶ್ ನಾಯಕ್ ಅವರು ಹಲವಾರು ವರ್ಷಗಳ ಕಾಲ ಮಾಜಿ ಪ್ರಧಾನಿಯವರ ಆಪ್ತ ವೈದ್ಯರಾಗಿದ್ದರು. ಅವರಲ್ಲದೆ, AIIMS ನ ಅನೇಕ ತಜ್ಞ ವೈದ್ಯರು 89 ವರ್ಷದ ಮಾಜಿ ಪ್ರಧಾನಿಯವರ ದೈಹಿಕ ಸ್ಥಿತಿಯನ್ನು ಪರೀಕ್ಷಿಸಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವ್ಯ ಕೂಡ ಮಾಜಿ ಪ್ರಧಾನಿಯನ್ನು ಆಸ್ಪತ್ರೆಗೆ ಭೇಟಿ ಮಾಡಿದರು. ಆ ಸಮಯದಲ್ಲಿ ಚಿತ್ರ ತೆಗೆಯುವ ಬಗ್ಗೆ ವಿವಾದವಿತ್ತು. ಮನಮೋಹನ್ ಆಸ್ಪತ್ರೆಗೆ ದಾಖಲಾದ 18 ದಿನಗಳ ನಂತರ ಮನೆಗೆ ಮರಳಿದರು. ಕಳೆದ ವರ್ಷ ನಡೆದ ಚಳಿಗಾಲದ ಅಧಿವೇಶನದಲ್ಲಿ ದೈಹಿಕ ಅಸ್ವಸ್ಥ ಕಾರಣದಿಂದ ಸಂಸತ್ತಿಗೆ ಕಾಲಿಡಲಿಲ್ಲ.

ಇದಕ್ಕೂ ಮೊದಲು, ಕಳೆದ ವರ್ಷ ಏಪ್ರಿಲ್‌ನಲ್ಲಿ ಮನಮೋಹನ್ ಸಿಂಗ್ ಅವರನ್ನು ಕೊರೋನಾದಿಂದಾಗಿ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್‌ಗೆ ದಾಖಲಿಸಲಾಗಿತ್ತು. ಬಳಿಕ ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ. ಮಾಜಿ ಪ್ರಧಾನಿ 2009 ರಲ್ಲಿ AIIMS ನಲ್ಲಿ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಮಾಜಿ ಪ್ರಧಾನಿ ಈಗ ರಾಜ್ಯಸಭಾ ಸಂಸದರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *