ಬೆಂಗಳೂರು: ಕೇಂದ್ರ ಸರ್ಕಾರದ ಸಹಾಯದೊಂದಿಗೆ ರಾಜ್ಯದಲ್ಲಿ ಬೂಸ್ಟರ್ ಡೋಸ್ ಕೊಡಲಾಗುತ್ತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಗವಾಗಿ ಬೂಸ್ಟರ್ ಡೋಸ್ ನೀಡಲಾಗುತ್ತಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಇದು ಜಗತ್ತಿನಲ್ಲೇ ಅತ್ಯಂತ ದೊಡ್ಡ ಲಸಿಕಾ ಅಭಿಯಾನ, ಇದರ ಸಂಪೂರ್ಣ ಶ್ರೇಯ ಪ್ರಧಾನಿ ಮೋದಿಯವರಿಗೆ ಸಲ್ಲಬೇಕು. ವೈರಸ್ ವಿರುದ್ಧದ ಹೋರಾಟದಲ್ಲಿ ಲಸಿಕೆ ಮಹತ್ವದ ಪಾತ್ರವಹಿಸಿದೆ. ಕೊರೊನಾ ಬಂದ ಬಳಿಕ ವಿಜ್ಞಾನಿಗಳು, ವೈದ್ಯರು, ದಾದಿಯರು ಎಲ್ಲರೂ ಲೀಡರ್ ಗಳಾಗಿ ಮಾರ್ಪಾಡು ಆಗಿದ್ದಾರೆ. ಅವರು ಲೀಡರ್ ಆಗದೆ ಹೋಗಿದ್ದರೆ ಇದನ್ನು ಕಂಟ್ರೋಲ್ ಮಾಡಲು ಸಾಧ್ಯವಾಗುತ್ತಿರಲಿಲ್ಲ.
5.94 ಕೋಟಿ ಮೊದಲ ಡೋಸ್ ಹಾಗೂ 5.42 ಕೋಟಿ ಎರಡನೇ ಡೋಸ್ ಲಸಿಕೆ ಕೊಡಲಾಗಿದೆ ರಾಜ್ಯದಲ್ಲಿ. ಸದ್ಯ ನಾವು ಹಾದು ಹೋಗುತ್ತಿರುವುದು ಟೇಪರಿಂಗ್ ಸಿಚಿವ್ಯೇಷನ್ ನಲ್ಲಿ. ಕೊರೊನಾ ಕಡಿಮೆ ಆಗಿ ಅದು ಫೇಡ್ ಔಟ್ ಆಗುತ್ತಿದೆ, ಈ ವೇಳೆಯಲ್ಲೂ ನಾವು ಕಾಳಜಿವಹಿಸಬೇಕು, ನಿರ್ಲಕ್ಷ್ಯಿಸಬಾರದು. ಕೇಂದ್ರ ಸರ್ಕಾರ ಕೊರೊನಾ ನಿರ್ವಹಣೆಗೆ ಬಹಳ ದುಡ್ಡು ಕೊಟ್ಟಿದೆ. ಕೇಂದ್ರ ಸರ್ಕಾರ ಹಣ ಕೊಟ್ಟಿಲ್ಲಂದ್ರೆ ಇವತ್ತು ರಾಜ್ಯದ ಬೊಕ್ಕಸಕ್ಕೆ ದೊಡ್ಡ ಹೊಡೆತ ಬೀಳುತ್ತಿತ್ತು ಎಂದಿದ್ದಾರೆ.