ಜುಲೈ 15 ರಿಂದ ಕರ್ನಾಟಕ ಜನ ಚೈತನ್ಯಯಾತ್ರೆ ಪುನರಾರಂಭ : ಜಿಲ್ಲಾಧ್ಯಕ್ಷ ಮಹೇಶ ಸಿ ನಗರಂಗೆರೆ

suddionenews
2 Min Read

ಚಿತ್ರದುರ್ಗ, (ಜು.14) : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ರಾಜ್ಯಾದ್ಯಂತ ನಡೆಸುತ್ತಿರುವ ಕರ್ನಾಟಕ ಜನ ಚೈತನ್ಯಯಾತ್ರೆಯ ಮುಂದುವರೆದ ಭಾಗವಾಗಿ ಇದೇ ಜುಲೈ 15 ರಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಿಂದ ಪುನರಾರಂಭವಾಗಲಿದೆ ಎಂದು ಕರ್ನಾಟ ರಾಷ್ಟ್ರ ಸಮಿತಿ ಪಕ್ಷದ ಚಿತ್ರದುರ್ಗ ಜಿಲ್ಲಾ ಯುವ ಘಟಕದ ಜಿಲ್ಲಾಧ್ಯಕ್ಷ ಮಹೇಶ ಸಿ ನಗರಂಗೆರೆ ಹೇಳಿದರು.

1980ರ ಜುಲೈ 21ರಂದು ನರಗುಂದ ಮತ್ತು ನವಲಗುಂದದಲ್ಲಿ ನಡೆದ ಗಲಭೆ, ಹೋರಾಟ, ಹಿಂಸಾಚಾರಕ್ಕೆ ಪೊಲೀಸರೂ ಸೇರಿದಂತೆ ಹಲವು ರೈತರು ಬಲಿಯಾದರು. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷದ ಜುಲೈ ಇಪ್ಪತ್ತೊಂದನ್ನು ರಾಜ್ಯದಲ್ಲಿ “ರೈತ ಹುತಾತ್ಮ ದಿನ” ಎಂದು ಆಚರಿಸಲಾಗುತ್ತಿದ್ದು, ಈ ವರ್ಷದ ರೈತ ಹುತಾತ್ಮ ದಿನಾಚರಣೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವೂ ಪಾಲ್ಗೊಳ್ಳಲಿದೆ ಮತ್ತು ಏಖS ಪಕ್ಷದ ರೈತ ಘಟಕದ ಅಧ್ಯಕ್ಷ ಜೋಗನಹಳ್ಳಿ ಗುರುಮೂರ್ತಿಯವರ ನೇತೃತ್ವದಲ್ಲಿ ನರಗುಂದ ಮತ್ತು ನವಲಗುಂದದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದು ತಿಳಿಸಿದರು.

ಸರ್ಕಾರಿ ಅಧಿಕಾರಿಗಳ ಲಂಚಕೋರತನ ಮತ್ತು ಕಿರುಕುಳವನ್ನು ಬಡವರು ಪ್ರಶ್ನಿಸಲು ಸಾಧ್ಯವೇ ಇಲ್ಲ ಮತ್ತು ಪೊಲೀಸರ ದೌರ್ಜನ್ಯ, ಹಿಂಸೆ, ಭ್ರಷ್ಟಾಚಾರವನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವಂತಹ ಅಸಹಾಯಕ ಸಂದರ್ಭದಲ್ಲಿ ರಾಜ್ಯದ ಜನತೆಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಒಂದು ಆಶಾಕಿರಣವಾಗಿ ಮೂಡಿಬಂದಿದೆ. ಜನರಲ್ಲಿ ಪ್ರಶ್ನಿಸುವ ಮನೋಭಾವ ಮತ್ತು ಸ್ಥೈರ್ಯವನ್ನು ಮೂಡಿಸುವ ಮೂಲಕ ಸ್ವಚ್ಚ, ಪ್ರಾಮಾಣಿಕ, ಜನಪರ ಮತ್ತು ಪ್ರಾದೇಶಿಕ ರಾಜಕಾರಣದ ಅಗತ್ಯತೆಯನ್ನು ಮನಗಾಣಿಸುತ್ತಾ, 15 ರಂದು ಚಳ್ಳಕೆರೆಯಿಂದ ಪುನರ್ ಪ್ರಾರಂಭಗೊಳ್ಳವ ಕರ್ನಾಟಕ ಜನ ಚೈತನ್ಯಯಾತ್ರೆಯ ಮುಂದಿನ 16 ದಿನಗಳ ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಯಾತ್ರೆ ಸಾಗಲಿದ್ದು, 16 ರಂದು ದಾವಣಗೆರೆ ಜಿಲ್ಲೆ, 17 ಮತ್ತು 18 ರಂದು ಹಾವೇರಿ ಜಿಲ್ಲೆ, 19 ರಂದು ಧಾರವಾಡ ಜಿಲ್ಲೆ, 20 ರಂದು ಬೆಳಗಾವಿ ಜಿಲ್ಲೆ, 21 ರ ರೈತ ಹುತಾತ್ಮ ದಿನಾಚರಣೆಯಂದು ನರಗುಂದ-ನವಲಗುಂದದಲ್ಲಿ ಯಾತ್ರೆ ಕಾರ್ಯಕ್ರಮ ನಡೆಸಲಿದೆ ಎಂದರು.

22 ರಂದು ಬಾಗಲಕೋಟೆ ಜಿಲ್ಲೆ, 23 ಮತ್ತು 24 ರಂದು ವಿಜಯಪುರ, ಬೀದರ್ ಜಿಲ್ಲೆ, 25 ರಂದು ಕಲಬುರಗಿ,ಯಾದಗಿರಿ ಜಿಲ್ಲೆ, 26 ಮತ್ತು 27 ರಂದು  ರಾಯಚೂರು, ಕೊಪ್ಪಳ ಜಿಲ್ಲೆಯಲ್ಲಿ 28,29,30 ರಂದು ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಕಾರ್ಯಕ್ರಮ ನಡೆಸಲಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಚಳ್ಳಕೆರೆ ತಾಲ್ಲೂಕು ರೈತ ಸಂಘದ ಅಧ್ಯಕ್ಷ ನಾಗಿರೆಡ್ಡಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *