ಚಿತ್ರದುರ್ಗ,(ಜು.13): ನಗರದ ಎಸ್. ಆರ್. ಎಸ್. ಹೆರಿಟೇಜ್ ಶಾಲೆಯಲ್ಲಿಂದು “ಅನಂತಕೃಷ್ಣ ಬೃಹತ್ ಸಭಾಂಗಣದಲ್ಲಿ” ಗುರುಪೂರ್ಣಿಮಾ ಕಾರ್ಯಕ್ರಮವನ್ನು ನಡೆಸಲಾಯಿತು.
ಪ್ರತಿ ವರ್ಷ ಆಷಾಡ ಮಾಸದ ಶುಕ್ಲಪಕ್ಷದ ಹುಣ್ಣಿಮೆಯ ದಿನ ಗುರುಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಶಾಲೆಯ 3 ರಿಂದ 6ನೆ ತರಗತಿಯ ಸರಿಸುಮಾರು 650 ಮಕ್ಕಳು ಉತ್ಸಾಹಭರಿತವಾಗಿ ತಮ್ಮ ಪೋಷಕರ ಪಾದಪೂಜೆ ಮಾಡುವ ಮೂಲಕ ಅವರ ಆಶೀರ್ವಾದಕ್ಕೆ ಪಾತ್ರರಾದರು.
ಗುರುಗಳ ಸ್ಥಾನವು ದೇವರಿಗೆ ಸಮಾನ ಎಂದು ಹೇಳಲಾಗುತ್ತದೆ. ಜೀವನದ ನಿಜವಾದ ಮಾರ್ಗತೋರಿಸಲು ಗುರು ಸಹಾಯ ಮಾಡುತ್ತಾರೆ. ಈ ದಿನ ಜನಿಸಿದ ವೇದವ್ಯಾಸರು ವೇದಗಳನ್ನು ರಚಿಸಿದ ಪವಿತ್ರ ದಿನ ಮೂಲಕ ಈ ಮೂಲಕ ಜಗತ್ತಿಗೆ ಜ್ಞಾನವನ್ನು ಹರಡಿದರು.
ಈ ಕಾರ್ಯಕ್ರಮ ಆಚರಣೆಯ ಮೂಲಕ ಭಾರತೀಯ ಸಂಸೃತಿ, ಸಂಸ್ಕಾರ ಮತ್ತು ಹಿಂದಿನ ಗುರುಕುಲ ಶಿಕ್ಷಣವನ್ನು ಮರುಕಳಿಸುವುದು ಹಾಗೂ ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಸಂಸ್ಕøತಿ ಮತ್ತು ಮೌಲ್ಯಗಳನ್ನು ಬೆಳಸುವುದಾಗಿದೆ.
ಕಾರ್ಯಕ್ರಮದಲ್ಲಿ ಪೋಷಕರು ಭಾಗವಹಿಸಿ ತಮ್ಮ ಮಕ್ಕಳಿಗೆ ಆಶೀರ್ವದಿಸಿದರು. ಹಾಗೂ ಕಾರ್ಯಕ್ರಮದ ಬಗ್ಗೆ ತಮ್ಮ ಭಾವನೆಗಳೊಂದಿಗೆ ಅಭಿಪ್ರಾಯಗಳನ್ನು ಹಂಚಿಕೊಂಡರು.
ಈ ಕಾರ್ಯಕ್ರಮದಲ್ಲಿ “ಎಸ್. ಆರ್. ಎಸ್ ಶಿಕ್ಷಣ ಸಮೂಹ ಸಂಸ್ಥೆಯ” ಅಧ್ಯ್ಯಕ್ಷರಾದ ಬಿ.ಎ. ಲಿಂಗಾರೆಡ್ಡಿಯವರು, ಸಂಸ್ಥೆಯ ಉಪಾಧ್ಯಾಕ್ಷರಾದ ಅಮೋಘ್ ಬಿ ಎಲ್ ಆಡಳಿತಾಧಿಕಾರಿಳಾದ ಡಾ|| ರವಿ ಟಿ. ಎಸ್. ಶಾಲೆಯ ಪ್ರಾಂಶುಪಾಲರಾದ ಪ್ರಭಾಕರ್ ಎಂ. ಎಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಾಗೂ ತರಗತಿಯ ಶೈಕಣಿಕ ಸಂಯೋಜಕರಾದ ಶ್ರೀಮತಿ ರೋಹಿನ ಟಿ. ಮತ್ತು ಶ್ರೀಯುತ ಜಗದೀಶ್, ಬೋಧಕ ಹಾಗೂ ಬೋಧಕೇತರ ವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.