ಬೆಂಗಳೂರು: ಸಚಿವ ಮುನಿರತ್ನ ಸುದ್ದಿಗೋಷ್ಟಿಯಲ್ಲಿ ಸಿದ್ದರಾಮೋತ್ಸವ ವಿಚಾರವಾಗಿ ಮಾತನಾಡಿ, ಕೆಪಿಸಿಸಿ ಅಧ್ಯಕ್ಷರು ಒಂದು ಉತ್ಸವ ಆಚರಣೆ ಮಾಡಿಕೊಂಡ್ರೂ ಅಚ್ಚರಿ ಇಲ್ಲ. ಸಿದ್ದರಾಮಯ್ಯ ಅವರಿಗೆ ಹುಟ್ಟಿದ ದಿನವೇ ಗೊತ್ತಿಲ್ಲ. ಸಿದ್ದರಾಮಣ್ಣ ಹುಟ್ಟಿದ ದಿನದ ಶುಭಾಷಯ ಅಂದ್ರೆ.. ಏಯ್ ಹೋಗೋ ನನಗೆ ಹುಟ್ಟಿದ ದಿನವೇ ಗೊತ್ತಿಲ್ಲ ಅಂತಿದ್ರು. ಆದ್ರೀಗ, ಇದ್ದಕ್ಕಿದ್ದಂತೆ ಆಗಸ್ಟ್ 3 ಅಂತಲೇ ಹೇಗೆ ತಿಳಿಯಿತೋ ಗೊತ್ತಿಲ್ಲ. ಈ ಹುಟ್ಟುಹಬ್ಬ ಅವರು ಮಾಡಿಕೊಳ್ಳುತ್ತಿರೋದಲ್ಲ. ಅವರ ಅಕ್ಕಪಕ್ಕದಲ್ಲಿ ಇರುವವರು ಮಾಡುತ್ತಿರೋದು. ಅವರೆಲ್ಲಾ ಯಾರು ಅಂತ ನಿಮಗೆ ಗೊತ್ತು. ನೀವೇ ತಿಳಿದುಕೊಳ್ಳಿ ಎಂದಿದ್ದಾರೆ.
ಈದ್ಗಾ ಮೈದಾನ ವಿಚಾರವಾಗಿ ಪ್ರತಿಭಟನೆ ನಡೆಯುತ್ತಿರುವ ಬಗ್ಗೆ ಮಾತನಾಡಿ, ಇದು ಸರ್ಕಾರ, ಪಾಲಿಕೆ, ಈದ್ಗಾ ವಿಚಾರವಾಗಿದೆ. ದಾಖಲೆ ಪರಿಶೀಲಿಸಿ ಚರ್ಚೆ ಮಾಡಬೇಕಾಗುತ್ತೆ ಎಂದಿದ್ದಾರೆ.
ಇನ್ನು ಈ ಭಾರಿ ಫಲಪುಷ್ಪ ಪ್ರದರ್ಶನಕ್ಕೆ ಪುನೀತ್ ಹಾಗೂ ಗಾಜನೂರಿನ ಮನೆ ವಿಶೇಷವಾಗಿರುತ್ತದ. ನಮ್ಮ ಲಾಲ್ ಭಾಗ್ ಫ್ಲವರ್ ಶೋ ಕೋವಿಡ್‌ನಿಂದ ಕಾರ್ಯಕ್ರಮ ಮಾಡಿರಲಿಲ್ಲ. ಈ ಭಾರಿ ಆಗಸ್ಟ್ 15ರಂದು ಹಿಂದೆ ಮಾಡುತ್ತಿದ್ದಕ್ಕಿಂತ ಹೆಚ್ಚಾಗಿ ಮಾಡುತ್ತಿದ್ದೇವೆ. ಆಗಸ್ಟ್ 5-15ರ ವರೆಗೆ ಮಾಡಲು ನಿರ್ಧಾರ. ಈಗ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಇನ್ನೆರಡು ದಿನ ಮುಂದುವರೆಸಲು ನಿರ್ಧಾರ. ಬೇರೆ ದೇಶದಿಂದಲೂ ವಿಶೇಷ ಹೂ ಗಿಡಗಳನ್ನ ತರಿಸಲು ನಿರ್ಧಾರಿಸಿದ್ದೇವೆ. ಪುನೀತ್ ರಾಜ್ ಕುಮಾರ್ ಅವರ ಚಿತ್ರವನ್ನು ವಿಶೇಷವಾಗಿ ಮಾಡಲಿದ್ದೇವೆ. ರಾಜ್ ಕುಮಾರ್ ಅವರ ಗಾಜನೂರಿನ ಮನೆಯನ್ನ ಪ್ಲವರ್ ಡೆಕೋರೇಷನ್ ಮಾಡಲು ನಿರ್ಧಾರ ಮಾಡಿದ್ದೇವೆ. ಈ ಬಾರಿ ಸಾರ್ವಜನಿಕರು ಬರಬಹುದು. ಆಗಸ್ಟ್ 5ರಂದು ಸಿಎಂ ಬಸವರಾಜ್ ಬೊಮ್ಮಾಯಿ ಉದ್ಘಾಟನೆ ಮಾಡಲಿದ್ದಾರೆ. ವಿದೇಶದಿಂದ ನಮ್ಮ ವಾತಾವರಣಕ್ಕೆ ಹೊಂದಿಕೊಳ್ಳುವ ಗಿಡಗಳ ಪಟ್ಟಿ ತರಿಸುತ್ತೇವೆ. ಅದರಲ್ಲಿ ಆಯ್ಕೆ ಮಾಡುತ್ತೇವೆ. ಪುನೀತ್ ರಾಜ್ ಕುಮಾರ್ ಕನ್ನಡದ ಪ್ರತಿಭೆ. ಚಿಕ್ಕ ವಯಸ್ಸಿನಲ್ಲಿ ನಮ್ಮನ್ನ ಅಗಲಿದ್ದಾರೆ. ಬಾಲ ಪ್ರತಿಭೆ, ಹಾಗಾಗಿ ಅವರನ್ನ ಸ್ಮರಿಸೋ ಕೆಲಸ ಮಾಡ್ತೀವಿ ಎಂದಿದ್ದಾರೆ.