ಬೆಂಗಳೂರು: ಫ್ರೀಡಂ ಪಾರ್ಕ್ ನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ಡಾ.ಕೆ ಸುಧಾಕರ್, ಆರೋಗ್ಯ ಇಲಾಖೆಯಲ್ಲಿ 21 ಸಾವಿರ ಸಿಬ್ಬಂದಿ ಗಳು ಕೆಲಸ ನಿರ್ವಹಣೆ ಮಾಡ್ತಾ ಇದಾರೆ. ಕೇಂದ್ರ ಸರ್ಕಾರದ ಅನುಧಾನದ ಕಾರ್ಯಕ್ರಮ ಇದು ಎಂದಿದ್ದಾರೆ.
ಈ ವಿಷಯದ ವಿಚಾರವಾಗಿ ಕೆಲವು ಸಿಬ್ಬಂದಿ ಗಳು ಹಲವು ಬೇಡಿಕೆ ಗಳನ್ನು ಇಟ್ಟುಕೊಂಡು ಫ್ರೀಡಂ ಪಾರ್ಕ್ ನಲ್ಲಿ ಕುಳಿತಿದ್ದಾರೆ. ಪ್ರತಿ ಸಿಬ್ಬಂದಿ ಮೇಲೆ ಕೂಡಾ ಸರ್ಕಾರಕ್ಕೆ ಗೌರವ ಇದೆ. ಕೋವಿಡ್ ಸಂಧರ್ಭದಲ್ಲಿ ಕೂಡಾ ಎಲ್ಲಾ ತ್ಯಾಗ ಮನೋಭಾವದಿಂದ ಕೆಲಸ ಮಾಡಿದ್ದಾರೆ. ನಮ್ಮ ಹಂತದಲ್ಲಿ ಏನೆಲ್ಲಾ ಸಾಧ್ಯತೆ ಗಳಿವೆ ಅವುಗಳ ಬಗ್ಗೆ ಈಗಾಗಲೆ ಚರ್ಚೆ ಮಾಡಿದ್ದೇನೆ.
ಇನ್ನೂ ಕೆಲವು ಬೇಡಿಕೆಗಳ ಬಗ್ಗೆ ಆರ್ಥಿಕ ಇಲಾಖೆ ಜೊತೆ ಮಾತನಾಡಬೇಕಿದೆ. ಇದು ಕೇಂದ್ರ ಸರ್ಕಾರದ ಅನುದಾನದ ಅಡಿ ನಡೆಯುವ ಕಾರ್ಯಕ್ರಮ ಆಗಿರುವುದರಿಂದ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುವ ಅವಶ್ಯಕತೆ ಇದೆ. ಮಧ್ಯಾಹ್ನ ಒಂದು ಗಂಟೆಗೆ ನಾನು ಫ್ರೀಡಂ ಪಾರ್ಕ್ ಬಳಿ ಹೋಗುತ್ತೇನೆ. ಅವರ ಜೊತೆ ಚರ್ಚೆ ಮಾಡುತ್ತೇನೆ. ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಣೆ, ಎಷ್ಟು ಕಾಲದಿಂದ ಕಾರ್ಯ ನಿರ್ವಹಣೆ ಮಾಡ್ತಿದಾರೆ ಎಲ್ಲದರ ಬಗ್ಗೆಯೂ ಚರ್ಚೆ ಮಾಡುತ್ತೇನೆ ಎಂದಿದ್ದಾರೆ.