Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಾಜ್ಯಸಭೆಗೆ ಡಾ. ಡಿ.ವೀರೇಂದ್ರ ಹೆಗ್ಗಡೆ ನಾಮನಿರ್ದೇಶನ :ಶುಭಕೋರಿದ ಸಿಎಂ

Facebook
Twitter
Telegram
WhatsApp

 

ಬೆಂಗಳೂರು: ರಾಜ್ಯಸಭೆಗೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನಾಮ ನಿರ್ದೇಶನಗೊಂಡಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹರ್ಷ ವ್ಯಕ್ತ ಪಡಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಡಾ. ಹೆಗ್ಗಡೆಯವರನ್ನು ಅಭಿನಂದಿಸಿದ್ದಾರೆ. ಆರೋಗ್ಯ, ಶಿಕ್ಷಣ, ಸ್ತ್ರೀಶಕ್ತಿ, ಗ್ರಾಮೀಣಾಭಿವೃದ್ಧಿ ಹೀಗೆ ವಿವಿಧ ಕ್ಷೇತ್ರಗಳ ಹಾಗೂ ಆಯಾಮಗಳಲ್ಲಿ ಜನಜೀವನದಲ್ಲಿ ಸಕಾರಾತ್ಮಕ ಬೆಳವಣಿಗೆಗೆ ಶ್ರಮಿಸುತ್ತಿರುವ ಶ್ರೀ ಹೆಗ್ಗಡೆಯವರ ಅನುಭವ ಸಂಸತ್ತಿನ ಕಲಾಪಗಳ ಸತ್ವ ಹೆಚ್ಚಿಸಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ರಾಜ್ಯಸಭೆಗೆ ನಾಮನಿರ್ದೇಶನಕ್ಕೆ ಡಾ. ವೀರೇಂದ್ರ ಹೆಗ್ಗಡೆಯವರಂಥ ಅರ್ಹರನ್ನು ಶಿಫಾರಸು ಮಾಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.

ಅವರೊಂದಿಗೆ ರಾಜ್ಯಸಭೆಗೆ ನಾಮ ನಿರ್ದೇಶನಗೊಂಡ ಒಲಿಂಪಿಯನ್ ಅಥ್ಲೀಟ್ ಆಗಿದ್ದ ಪಿ. ಟಿ. ಉಷಾ, ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಹಾಗೂ ಖ್ಯಾತ ಚಿತ್ರ ನಿರ್ದೇಶಕ, ಚಿತ್ರ ಸಾಹಿತಿ ಕೆ.ವಿ. ವಿಜಯೇಂದ್ರ ಪ್ರಸಾದ್ ಅವರನ್ನೂ ಮುಖ್ಯಮಂತ್ರಿಗಳು ಅಭಿನಂದಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | 28 ಸಾಧಕರಿಗೆ ಜಿಲ್ಲಾ‌ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಚಿತ್ರದುರ್ಗ ಅ. 31: ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಸನ್ಮಾನಿಸಿ ಗೌರವಿಸುವ ಸಲುವಾಗಿ 28 ಸಾಧಕರನ್ನು ಜಿಲ್ಲಾ‌ ಮಟ್ಟದ ಸಮಿತಿಯು ಆಯ್ಕೆ ಮಾಡಿದ್ದು, ಸಾಧಕರಿಗೆ ನ. 01 ರಂದು ಬೆ.

ಅಜ್ಞಾನ ಕಳೆದು ಜ್ಞಾನದ ಬೆಳಕು ಪಸರಿಸುವ ಹಬ್ಬ ದೀಪಾವಳಿ..!

ಇಂದಿನಿಂದ ನಾಡಿನೆಲ್ಲೆಡೆ ದೀಪಾವಳಿಯ ಹಬ್ಬ ಶುರುವಾಗಿದೆ. ಕೆಲವೆಡೆ ವಾರಾನುಗಟ್ಟಲೆಯಿಂದಾನೇ ದೀಪಾವಳಿಯ ಸಂಭ್ರಮ ಮನೆ ಮಾಡಿದೆ. ಇದು ಬೆಳಕುಗಳ ಹಬ್ಬ. ಎಷ್ಟೋ ಜನರ ಬದುಕಲ್ಲಿ ಕತ್ತಲೆ ಸರಿದು, ಬೆಳಕನ್ನು ತೋರೊಸುವ ಹಬ್ಬ. ಸಂತೋಷ ಮತ್ತು ಸಮೃದ್ದಿಯ

ಮಗನ ಬರ್ತ್ ಡೇ.. ಜೈಲಿಂದ ಜಾಮೀನು ಸಿಕ್ಕ ಖುಷಿ.. ನೇರ ವಿಜಯಲಕ್ಷ್ಮೀ ಮನೆಗೆ ಬಂದ ದರ್ಶನ್..!

ರೇಣುಕಾಸ್ವಾಮಿ ಕೊಲೆ‌ ಪ್ರಕರಣದಲ್ಲಿ ಐದು ತಿಂಗಳಿನಿಂದ ಜೈಲಿನಲ್ಲೇ ಇದ್ದ ದರ್ಶನ್ ಗೆ ನಿನ್ನೆ ಮಧ್ಯಂತರ ಜಾಮೀನು ಸಿಕ್ಕಿದೆ. ಇಂದು ಮಗ ವಿನೀಶ್ ಬರ್ತ್ ಡೇ ಕೂಡ. ದೀಪಾವಳಿಯಲ್ಲಿ ದರ್ಶನ್ ಬದುಕಲ್ಲಿ ಹೊಸ ಬೆಳಕು ಮೂಡಿದಂತಾಗಿದೆ.

error: Content is protected !!