ಬೆಂಗಳೂರು: ಕಾಂಗ್ರೆಸ್ ಕಾಲದಲ್ಲಿ ನಡೆದಿರುವ ನೇಮಕಾತಿ ಅಕ್ರಮಗಳ ಕುರಿತು ದಾಖಲೆ ಬಿಡುಗಡೆ ಮಾಡ್ತೇನೆ ಎಂಬ ಸಿಎಂ ಹೇಳಿಕೆಗೆ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾಕೆ, ವಿರೋಧ ಪಕ್ಷದಲ್ಲಿದ್ದಾಗ ಎನ್ ಮಾಡ್ತಿದ್ದೆ ನೀನು…?. ಕಡ್ಲೆಪುರಿ ತಿಂತಾ ಇದ್ದಿಯಾ..? ದಾಖಲೆ ಇದ್ದರೆ ಹೇಳಬೀಕಿತ್ತಲ್ಲಾ..? ಎಂದಿದ್ದಾರೆ.
ನಮ್ಮ ಕಾಲದ ನೇಮಕಾತಿ ಬಗ್ಗೆ ತನಿಖೆ ಮಾಡಿಸಿ. ಯಾಕೆ ಸುಮ್ಮನಿದ್ರಿ..? ಆವಾಗ ಯಾಕೆ ಮಾತಾಡಿಲ್ಲ. ನನ್ನ ಉಳಿಸೋಕೆ ಹಾಗಾದ್ರೆ ಮಾತಾಡಿರಲಿಲ್ವಾ..? ಎಂದು ಸಿಎಂ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಸಿಎಂಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಪಿಎಸ್ಐ ಪ್ರಕರಣದಲ್ಲಿ ನೈತಿಕತೆ ಇದ್ದರೆ ಗೃಹ ಸಚಿವರನ್ನು ವಜಾಮಾಡಬೇಕು. ಸದನಕ್ಕೆ ಗೃಹ ಸಚಿವರು, ಸಿಎಂ ತಪ್ಪು ಮಾಹಿತಿ ನೀಡಿದ್ದಾರೆಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.