ನಾಳೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮದುವೆ

 

ಚಂಡೀಗಢ :  ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (49)  ಮದುವೆಯಾಗಲಿದ್ದಾರೆ. ಡಾ.ಗುರ್ಪ್ರೀತ್ ಕೌರ್ ಎಂಬ ಯುವತಿಯೊಂದಿಗೆ ಅವರ ಮದುವೆ ಗುರುವಾರ ಚಂಡೀಗಢದಲ್ಲಿ ನಡೆಯಲಿದೆ. ಕೆಲವೇ ಸದಸ್ಯರು ಸೇರಿದಂತೆ ಕುಟುಂಬದವರ ಸಮಕ್ಷಮದಲ್ಲಿ ಈ ಮದುವೆಗೆ ನಡೆಯಲಿದೆ.

ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವು ಆಪ್ ನಾಯಕರು ಮತ್ತು ಪಂಜಾಬ್ ರಾಜಕೀಯ ಮುಖಂಡರು ಈ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಿಎಂ ಭಗವಂತ್ ಮಾನ್ ಗೆ ಇದು ಎರಡನೇ ಮದುವೆ. ಆರು ವರ್ಷಗಳ ಹಿಂದೆ ಅವರು ಮೊದಲನೆಯ ಹೆಂಡತಿಯಿಂದ ವಿಚ್ಛೇದನ ಪಡೆದಿದ್ದರು.

ಈ ಮೊದಲು ಇಂದ್ರಪ್ರೀತ್ ಕೌರ್ ಅವರನ್ನು ವಿವಾಹವಾಗಿದ್ದರು. ಹಲವು ವೈಯಕ್ತಿಕ ಕಾರಣಗಳಿಂದ 2015 ರಲ್ಲಿ ವಿಚ್ಛೇದನ ಪಡೆದಿದ್ದರು.ಈ ದಂಪತಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿದೆ.

Share This Article
Leave a Comment

Leave a Reply

Your email address will not be published. Required fields are marked *