Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಾಂಗ್ರೆಸ್‍ನಲ್ಲಿ ಮೇಲು-ಕೀಳು ಎನ್ನುವ ತಾರತಮ್ಯವಿಲ್ಲ : ಎಂ.ಕೆ.ತಾಜ್‍ಪೀರ್

Facebook
Twitter
Telegram
WhatsApp

ಚಿತ್ರದುರ್ಗ : ವಿದೇಶಕ್ಕೆ ರಫ್ತು ಮಾಡುವಷ್ಟು ಗೋಧಿ ಮತ್ತು ಅಕ್ಕಿಯನ್ನು ಭಾರತದಲ್ಲಿ ಈಗ ಬೆಳೆಯಲಾಗುತ್ತಿರುವುದಕ್ಕೆ ದೇಶದ ಮಾಜಿ ಉಪ ಪ್ರಧಾನಿ ಡಾ.ಬಾಬುಜಗಜೀವನರಾಂರವರು ಕೊಟ್ಟಂತ ಯೋಜನೆಗಳೆ ಕಾರಣ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಡಾ.ಬಾಬು ಜಗಜೀವನರಾಂರವರ 36 ನೇ ಪುಣ್ಯತಿಥಿಯಲ್ಲಿ ಭಾಗವಹಿಸಿ ಮಾತನಾಡಿದ ಎಂ.ಕೆ.ತಾಜ್‍ಪೀರ್ ಹಸಿರು ಕ್ರಾಂತಿಯ ಹರಿಕಾರ ಎಂದೇ ಹೆಸರು ಪಡೆದ ಡಾ.ಬಾಬುಜಗಜೀವನರಾಂ ಶೋಷಿತರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ದೇಶದ ಮಾಜಿ ಉಪ ಪ್ರಧಾನಿಯಾಗಿ, ಎ.ಐ.ಸಿ.ಸಿ.ಅಧ್ಯಕ್ಷರಾಗಿ ಕೆಲಸ ಮಾಡಿದ ಅವರು ಇಂದಿರಾಗಾಂಧಿರವರ ಸಂಪುಟದಲ್ಲಿ ರಕ್ಷಣಾ ಖಾತೆ, ಕೃಷಿ ಹೀಗೆ ಅನೇಕ ಜವಾಬ್ದಾರಿಗಳನ್ನು ನಿಭಾಯಿಸಿ ಆಹಾರ ಉತ್ಪಾದನೆಯಲ್ಲಿ ಸುಧಾರಣೆ ತಂದವರು ಎಂದು ಸ್ಮರಿಸಿಕೊಂಡರು.

ಕಾಂಗ್ರೆಸ್‍ನಲ್ಲಿ ಮೇಲು-ಕೀಳು ಎನ್ನುವ ತಾರತಮ್ಯವಿಲ್ಲ. ಎಲ್ಲಾ ಜಾತಿ ಧರ್ಮದವರಿಗೂ ಸಮಾನತೆ ಇದೆ ಎನ್ನುವುದಕ್ಕೆ ಡಾ.ಬಾಬು ಜಗಜೀವನರಾಂರವರು ಉಪ ಪ್ರಧಾನಿಯಾಗಿದ್ದೆ ಸಾಕ್ಷಿ. ನೀರಾವರಿ ಯೋಜನೆಯನ್ನು ದೇಶಕ್ಕೆ ನೀಡಿದ್ದು, ನಮ್ಮ ಪಕ್ಷ. ಕಾಂಗ್ರೆಸ್ ಏನು ಮಾಡಿದ ಎಂದು ಕೇಳುತ್ತಿರುವ ವಿರೋಧ ಪಕ್ಷದ ಕೋಮುವಾದಿಗಳು ಸೇರಿದಂತೆ ಇಡೀ ಭಾರತದ ಜನತೆ ಇಂದು ತೃಪ್ತಿಯಾಗಿ ಊಟ ಮಾಡಿ ನೆಮ್ಮದಿಯಿಂದ ಇದ್ದಾರೆಂದರೆ ಅದು ಡಾ.ಬಾಬು ಜಗಜೀವನರಾಂರವರ ಕೊಡುಗೆ ಎಂದು ತಿಳಿಸಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ.ದುರಾಡಳಿತಕ್ಕೆ ಜನ ಬೇಸತ್ತಿದ್ದು, ಬದಲಾವಣೆ ಬಯಸುತ್ತಿದ್ದಾರೆ. ಹಾಗಾಗಿ ಮುಂಬರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ಈಗಿನಿಂದಲೆ ಕಾರ್ಯಕರ್ತರು ಶ್ರಮಿಸಬೇಕೆಂದು ಕರೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಮೊಗಲಳ್ಳಿ ಜಯಣ್ಣ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಯಾವುದೇ ಕಳಂಕವಿಲ್ಲದೆ ದೇಶ ಸೇವೆ ಮಾಡಿದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂರವರ ತತ್ವ ಆದರ್ಶಗಳ ಮೇಲೆ ಪಕ್ಷವನ್ನು ಮುನ್ನಡೆಸಿಕೊಂಡು ಹೋಗಬೇಕಿದೆ. ಪಕ್ಷದಲ್ಲಿ ಗುಂಪುಗಾರಿಕೆ ನಡೆಯುತ್ತಿರುವುದರಿಂದ ಪಕ್ಷಕ್ಕೆ ಧಕ್ಕೆಯಾಗಲಿದೆ. ಅದಕ್ಕಾಗಿ ದಲಿತರು ಒಟ್ಟಾಗಿ ಪಕ್ಷ ಕಟ್ಟುವ ಕೆಲಸ ಮಾಡಬೇಕು.
ಜೊತೆಗೆ ಡಾ.ಬಾಬು ಜಗಜೀವನರಾಂರವರ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಂಡು ಮುಂದೆ ಸಾಗಬೇಕು ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ ಮಾತನಾಡಿ ಪ್ರಧಾನಿ ಇಂದಿರಾಗಾಂಧಿರವರ ಕ್ಯಾಬಿನೆಟ್‍ನಲ್ಲಿ ಅನೇಕ ಪವರ್‍ಫುಲ್ ಖಾತೆಗಳನ್ನು ನಿಭಾಯಿಸಿದ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂರವರು ದೇಶಕ್ಕೆ ಆಹಾರ ಭದ್ರತೆ ನೀಡಿದ್ದರಿಂದ ಇಂದು ಭಾರತದಲ್ಲಿ ಅತಿ ಹೆಚ್ಚು ಆಹಾರ ಬೆಳೆಯಲು ಸಾಧ್ಯವಾಗಿದೆ. ದಲಿತರೆನ್ನುವ ಕಾರಣಕ್ಕಾಗಿ ಅವರು ಪ್ರಧಾನಿಯಾಗುವ ಅವಕಾಶ ತಪ್ಪಿತು. ಇಂದಿನ ಯುವ ಪೀಳಿಗೆಗೆ ಬಾಬು ಜಗಜೀವನರಾಂರವರ ವಿಚಾರಗಳನ್ನು ತಿಳಿಸಬೇಕಿದೆ ಎಂದರು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತ ನಂದಿನಿಗೌಡ ಮಾತನಾಡಿ ಡಾ.ಬಾಬು ಜಗಜೀವನರಾಂರವರ ಆದರ್ಶಗಳನ್ನು ಪಕ್ಷದಲ್ಲಿ ನೆನೆಯುವ ಕೆಲಸವಾಗಬೇಕು. ಹಸಿರು ಕ್ರಾಂತಿಯ ಹರಿಕಾರ, ಸರಳ, ಸಜ್ಜನಿಕೆಯ ವ್ಯಕ್ತಿತ್ವದ ಅವರು ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದಕ್ಕಾಗಿ ಕೃಷಿಯಲ್ಲಿ ಅನೇಕ ಬದಲಾವಣೆಗಳನ್ನು ತಂದರು ಎಂದು ಗುಣಗಾನ ಮಾಡಿದರು.

ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುನಿರಾ ಎ.ಮಕಾಂದಾರ್ ಮಾತನಾಡುತ್ತ ಸ್ವಾತಂತ್ರ್ಯ ಹೋರಾಟಗಾರ, ಹಸಿರುಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂರವರು ದೇಶಕ್ಕೆ ನೀಡಿದ ಕೊಡುಗೆ ಬರೀ ಇತಿಹಾಸದಲ್ಲಿ ಉಳಿದುಕೊಂಡರೆ ಸಾಲದು. ಅವರ ತತ್ವ ಸಿದ್ದಾಂತ ಆದರ್ಶಗಳು ಎಲ್ಲರಿಗೂ ತಿಳಿಯಬೇಕು. ಆಗ ಮಾತ್ರ ಕಾಂಗ್ರೆಸ್ ಪಕ್ಷದ ಸಾಧನೆ ಏನು ಎನ್ನುವುದು ವಿರೋಧಿಗಳಿಗೂ ಗೊತ್ತಾಗುತ್ತದೆ ಎಂದು ಸಲಹೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಎನ್.ರವಿಕುಮಾರ್ ಮಾತನಾಡಿ ಮಹಾನ್ ಚೇತನ ಡಾ.ಬಾಬು ಜಗಜೀವನರಾಂರವರು ಜನಪರ ಯೋಜನೆಗಳ ಮೂಲಕ ದೇಶದ ಜನರ ಮನಸ್ಸಿನಲ್ಲಿ ಇನ್ನು ಶಾಶ್ವತವಾಗಿ ಉಳಿದಿದ್ದಾರೆ. ಅಂತಹ ಮೇರು ವ್ಯಕ್ತಿತ್ವದ ನಾಯಕನ ಆಚಾರ ವಿಚಾರಗಳ ಮೇಲೆ ಪಕ್ಷವನ್ನು ಕಟ್ಟಿ ಮುಂಬರುವ ಚುನಾವಣೆಯಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್‍ಕುಮಾರ್, ಉಪಾಧ್ಯಕ್ಷೆ ನಜ್ಮತಾಜ್, ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಕಾಶ್, ಜಿಲ್ಲಾ ಕಾಂಗ್ರೆಸ್ ಕಾನೂನು ಮಾನವ ಹಕ್ಕುಗಳು ಹಾಗೂ ಮಾಹಿತಿ ಹಕ್ಕು ವಿಭಾಗದ ಜಿಲ್ಲಾಧ್ಯಕ್ಷ ಡಿ.ಎಸ್.ಸುದರ್ಶನ್, ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ಅಬ್ದುಲ್ಲಾ, ಹೆಚ್.ಶಬ್ಬೀರ್‍ಭಾಷ, ನೇತ, ಎಲ್.ಕೆ.ರಾಬರ್ಟ್, ಕಾರ್ಯದರ್ಶಿ ಮಹಮದ್‍ಸಾಬ್ ಜಿ.ಆರ್.ಹಳ್ಳಿ, ಕೆ.ಪಿ.ಸಿ.ಸಿ. ಪರಿಶಿಷ್ಟ ಜಾತಿ ವಿಭಾಗದ ಸದಸ್ಯ ನ್ಯಾಯವಾದಿ ಮಲ್ಲೇಶಿ, ಮೈಲಾರಪ್ಪ, ಜಿ.ವಿ.ಮಧುಗೌಡ ಇನ್ನು ಮುಂತಾದವರು ಪುಣ್ಯಸ್ಮರಣೆಯಲ್ಲಿ ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಗ್ಯಾರಂಟಿಯನ್ನೇನೋ ರದ್ದು ಮಾಡ್ತೀರಂತೆ ಪೇಪರ್ ನಲ್ಲಿ ಬಂದಿತ್ತು : ಸಿದ್ದು, ಡಿಕೆಶಿಯನ್ನು ಕೇಳಿದ ಖರ್ಗೆ

ಬೆಂಗಳೂರು: ರಾಜ್ಯದಲ್ಲಿ ಸರ್ಕಾರದ ಯಶಸ್ವಿ ಗ್ಯಾರಂಟಿಯಲ್ಲಿ ಒಂದಾದ ಶಕ್ತಿ ಯೋಜನೆಯನ್ನು ನಿಲ್ಲಿಸುತ್ತಾರೆ ಎಂಬ ಮಾತು ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಮಾತನಾಡಿದ್ದಾರೆ.  

ಶಕ್ತಿ ಯೋಜನೆ ಬಗ್ಗೆ ಮಹಿಳೆಯರಿಗೆ ಭಯ ಬೇಡ : ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದೇನು ನೋಡಿ..!

ಬೆಂಗಳೂರು: ಕಳೆದ ಕೆಲವು ದಿನಗಳಿಂದಾನೂ ಶಕ್ತಿ ಯೋಜನೆಯನ್ನು ನಿಲ್ಲಿಸಲಾಗುತ್ತದೆ ಎಂಬ ಊಹಾಪೋಹಗಳು ಬರುತ್ತಿವೆ. ಇದರಿಂದ ಮಹಿಲಕೆಯರಿಗೆ ಸಹಜವಾಗಿಯೇ ಬೇಸರ ಮೂಡಿದೆ. ಯಾಕಂದ್ರೆ ಈ ಶಕ್ತಿ ಯೋಜನೆಯಿಂದ ಅದೆಷ್ಟೋ ಹೆಣ್ಣು ಮಕ್ಕಳು ಇಂದು ಜೀವನ ನಡೆಸಲು

ಚಿತ್ರದುರ್ಗ | ನಾಲ್ವರು ಪತ್ರಕರ್ತರಿಗೆ ರಾಜ್ಯೋತ್ಸವ ಪ್ರಶಸ್ತಿ

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 31 : ನಾಲ್ವರು ಪತ್ರಕರ್ತರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಒಟ್ಟು 28 ಸಾಧಕರನ್ನು ಪ್ರಸ್ತುತ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್

error: Content is protected !!