ಬೆಂಗಳೂರು: ಕಾಂಗ್ರೆಸ್ ಒಳಗೆ ಆಂತರಿಕ ಪ್ರಜಾಪ್ರಭುತ್ವಕ್ಕೆ ಬೆಲೆ ಇಲ್ಲ. ಅದರ ವಿರುದ್ಧ ಧ್ವನಿ ಎತ್ತಿದವರಿಗೆ ಮೂಲೆ ಸೇರಿಸುವ ಕೆಲಸ ಮಾಡಿದ್ದಾರೆ. ಅನೇಕ ಪಕ್ಷಗಳಿಗೆ ಆಂತರಿಕ ಪ್ರಜಾಪ್ರಭುತ್ವ ಇಲ್ಲ ಎಂದು ಸಿಟಿ ರವಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆದ್ರೆ ಬಿಜೆಪಿ ಆಂತರಿಕ ಪ್ರಜಾಪ್ರಭುತ್ವದ ಒಳಗೆ ಬೆಲೆ ಕೊಡುವ ಕೆಲಸ ಮಾಡಿದೆ. ಈಶಾನ್ಯ ರಾಜ್ಯದಲ್ಲಿ ಅಲ್ಪಸಂಖ್ಯಾತರಿರೋ ಭಾಗದಲ್ಲೂ ನಾವು ಅಧಿಕಾರಕ್ಕೆ ಬಂದಿದ್ದೇವೆ. ಅವರನ್ನ ಬಳಸಿಕೊಂಡು ಸಲಹೆಯನ್ನೂ ಪಡೆಯಬೇಕಿದೆ. ಕೇಡರ್‌ಗಳಿಂದ ಲೀಡರ್ ಆಗಿರೋ ಬಿಜೆಪಿ. ಇನ್ನೊಂದು ಕಡೆ ಪರಿವಾರವಾದ ಮೂಸೆಯಿಂದ ಅಜ್ಜ, ಮುತ್ತಜ್ಜ, ಅಪ್ಪ, ಅಮ್ಮನ ಹೆಸರನ್ನ ಹೇಳಿಕೊಂಡು ನಾಯಕತ್ವ ನಮ್ಮ ಜನ್ಮ ಸಿದ್ದ ಹಕ್ಕು ಅಂತ ಪರಿತಪ್ಪಿಸುತ್ತಿರೋ ರಾಜಕಾರಣ ಇನ್ನೊಂದು ಕಡೆ.
ಎಲ್ಲರೊಂದಿಗೆ ಎಲ್ಲರ ಅಭಿವೃದ್ದಿ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಒಂದು ಕಡೆ. ಜಾತಿ ಹೆಸರಲ್ಲಿ ಪಕ್ಷದ ಕೋಟೆ ಕಟ್ಟಿಕೊಳ್ಳೋದು ಒಂದು ಕಡೆ, ರಾಷ್ಟ್ರ ವಾದದ ಮೇಲೆ ನಿಂತಿರೋ ಬಿಜೆಪಿ ಒಂದು ಕಡೆ. ರಾಜಕಾರಣದ ದೃವೀಕರಣ ಬಿಜೆಪಿ ಬೆಳವಣಿಗೆಗೆ ಕೆಲವರನ್ನ ಕಂಗೆಡಿಸಿರೋದು ಸತ್ಯ. ಕಂಗೆಟ್ಟಿರೋದು ಪರಿವಾರದವರು, ಜಾತಿ ರಾಜಕಾರಣದವರು. ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕಾಲ ಕಾಲಕ್ಕೆ ಬದಲಾಗ್ತಾರೆ.
ಜಾತಿ ರಾಜಕಾರಣದ ಬಹುತೇಕ ಜನ, ಜಾತಿ ಹೆಸರು ಹೇಳೋದು ಬಿಟ್ರೆ ಬದುಕುಳಿಯಲು ಸಾಧ್ಯವಿಲ್ಲ. ಎನ್.ಡಿ.ಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ರಾಜ್ಯಕ್ಕೆ ಬರ್ತಿದ್ದಾರೆ. ಮೊದಲ ಬಾರಿ ರಾಷ್ಟ್ರಪತಿ ಅಭ್ಯರ್ಥಿ ಘೋಷಣೆ ಮಾಡುವ ಅವಕಾಶ ದೊರೆತಾಗ, ಅಟಲ್ ಬಿಹಾರಿ ವಾಜಪೇಯಿ ಅವರು ಅಬ್ದುಲ್ ಕಲಾಂ ಅವರನ್ನು ಆಯ್ಕೆ ಮಾಡಿತು. ಇಡೀ ದೇಶದ ಜನ, ಕೆಲವು ಪಕ್ಷದವರನ್ನ ಹೊರತುಪಡಿಸಿ, ನಮ್ಮಲ್ಲೇ ಒಬ್ಬನನ್ನ ಆಯ್ಕೆ ಮಾಡಿದ್ರು ಅಂತ ಖುಷಿ ಪಟ್ರು.
ದುರ್ದೈವ ಅವರನ್ನ ಎರಡನೇ ಬಾರಿ ಆಯ್ಕೆಗೆ ಅವಕಾಶ ಸಿಗಲಿಲ್ಲ. ಮತ್ತೊಮ್ಮೆ ಅವಕಾಶ ಸಿಕ್ಕಾಗ ರಾಮನಾಥ್ ಕೋವಿಂದ್ ಅವರಿಗೆ ಅವಕಾಶ ನೀಡಿತ್ತು. ಈಗ ಆದಿವಾಸಿ ಮಹಿಳೆ, ಬಡತನದಿಂದ ಬದುಕು ಕಟ್ಟುಕೊಂಡವರು, ರಾಜ್ಯಪಾಲರಾಗಿ ಅನುಭವದ ಗಣಿಯಾಗಿರೋ ದ್ರೌಪದಿ ಮುರ್ಮು ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ, ಎನ್.ಡಿ.ಎ ಮೂಲಕ ಆಯ್ಕೆ ಮಾಡಿದ್ದೇವೆ. ಮತ ಕೇಳಲು ಬರ್ತಿದ್ದಾರೆ. ಈಗಿರೋ ಮಾಹಿತಿ ಪ್ರಕಾರ ಅವರು ಗೆಲುವು ಸಾಧಿಸಲಿದ್ದಾರೆ ಎಂದಿದ್ದಾರೆ.