ಬೆಂಗಳೂರು: ಜೆಡಿಎಸ್ ತೊರೆದು ಎಚ್.ಆರ್.ಶ್ರೀನಾಥ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಗಂಗಾವತಿ ಕ್ಷೇತ್ರದ ತನ್ನ ನೂರಾರು ಬೆಂಬಲಿಗರ ಜೊತೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕೈ ಪಡೆಗೆ ಸೇರಿದ್ದಾರೆ.
ಕಾಂಗ್ರೆಸ್ ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಎಚ್.ಆರ್.ಶ್ರೀನಾಥ್, ಮೂರು ವರ್ಷ ನಾನು ವನವಾಸದಲ್ಲಿದ್ದೆ. ಇದೀಗ ಮತ್ತೆ ನಾನು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇನೆ. ನಮ್ಮ ರಕ್ತದಲ್ಲಿ ಕಾಂಗ್ರೆಸ್ ಪಕ್ಷ ಇದೆ. ನಮ್ಮ ತಂದೆ ಇಂದಿರಾಗಾಂಧಿ ಅವರ ಅನುಯಾಯಿಗಳು. ಇಂದಿರಾಗಾಂಧಿ ಅವರು ಸುಮಾರು ಬಾರಿ ನಮ್ಮ ಮನೆಗೆ ಬಂದಿದ್ರು.
ಬಿಜೆಪಿ ಅವರು ಕೂಡ ನಂಗೆ ಕರೆದಿದ್ದರು. ಗೃಹ ಸಚಿವ ಅಮಿತ್ ಶಾ ಕೂಡ ನಂಗೆ ಕರೆ ಮಾಡಿ ಬಿಜೆಪಿಗೆ ಬನ್ನಿ ಅಂದಿದ್ರು. ನಮ್ಮ ತಂದೆ ಅವ್ರಿಗೆ ಅಲ್ಪಸಂಖ್ಯಾತ , ದಲಿತರು, ಬಡವ ಹಾಗೂ ವೀರಶೈವ ಸಮಾಜದ ಆಶಿರ್ವಾದ ಇದೆ. ಅದಕ್ಕಾಗಿ ನಂಗೆ ಬಿಜೆಪಿ ಪಕ್ಷಕ್ಕೆ ಹೋಗುವ ಮನಸ್ಸು ಆಗಲಿಲ್ಲ. ಗಂಗಾವತಿಯಲ್ಲಿ ಕೋಮು ಗಲಭೆ ಶುರುವಾಗಿದೆ. ಮಸೀದಿಯಲ್ಲಿ ಶಿವಲಿಂಗ ಇದೆ ಇಲ್ಲಿ ಇದು ಇದೆ ಅಂತ ಗಲಭೆಗಳು ಪ್ರಾರಂಭವಾಗಿವೆ. ನಾನು ಮುಸಲ್ಮಾನ ಪರವಾಗಿ ಜೋತೆಗೆ ಎಲ್ಲಾ ಧರ್ಮದವರ ಪರವಾಗಿ ಹೋರಾಟ ಶುರುಮಾಡಿದೇನೆ
ಬಿಜೆಪಿಗೆ ದೊಡ್ಡ ಅಸ್ತ್ರ ಅಂದ್ರೆ ಅದು ಅಂಜನಾದ್ರಿ ಬೆಟ್ಟ. ಅಯೋಧ್ಯೆ ಆದ್ಮೆಲೆ ದಕ್ಷಿಣ ಕನ್ನಡ ಭಾಗದಲ್ಲಿ ಅಂಜನಾದ್ರೀ ಇಟ್ಟಿಕೊಂಡಿ ಪ್ರವೇಶಮಾಡುವ ಕೆಲಸ ಬಿಜೆಪಿ ಮಾಡ್ತಿದೆ. ಅಂಜನಾದ್ರೀ ಪರ್ವತ ಕೇವಲ ಹಿಂದೂಗಳಿಗಲ್ಲ ಎಲ್ಲಾ ಸಮಾಜದವರಿಗೆ ಸೇರಿದ್ದು. ಅಂಜನಾದ್ರೀ ಪರ್ವತದಿಂದ ನಾವು ಬಿಜೆಪಿಯನ್ನು ದೂರ ಇಡುವ ಕೆಲಸ ಮಾಡುತೇವೆ.ನಾನು ಯಾವುದೇ ಅಧಿಕಾರದ ಆಸೆಗಾಗಿ ಕಾಂಗ್ರೆಸ್ ಗೆ ಬಂದಿಲ್ಲ ಎಂದಿದ್ದಾರೆ.