ಬೆಂಗಳೂರು : ರಕ್ತದಾನ ಮಾಡುವುದರಿಂದ ಎಷ್ಟೋ ಜನರಿಗೆ ಜೀವ ಉಳಿಯುತ್ತದೆ, “ರಕ್ತದಾನ ಮಾಡಿ ಜೀವ ಉಳಿಸಿ, ಅಪರೂಪದ ಈ ಸಾಧನೆ ಮಾಡಿ ಮಾದರಿಯಾಗುವಂತಹ ಕೆಲಸವನ್ನು ಮಾತೃ ಸಮಾನರಾದ ಮಧುರಾ ಅಶೋಕ್ ಕುಮಾರ್ ಅವರು ಮಾಡಿದ್ದಾರೆ.
ಅವರಿಗೆ ಈ ಕಾರ್ಯಕ್ರಮದ ಮೂಲಕ ಅಭಿನಂದನೆಯನ್ನು ಸಲ್ಲಿಸುವುದರ ಮುಖಾಂತರವಾಗಿ ನಾಡಿನ ಎಲ್ಲರೂ ಅದರಲ್ಲಿ ಹೆಣ್ಣು ಮಕ್ಕಳು ಕೂಡ ಈ ರೀತಿಯಾದಂತಹ ಸಾಧನೆ ಮಾಡಿ ಎಂದು ಹೇಳಿದರು.
“ಸಮಾನ ಮನಸ್ಕರ ವೇದಿಕೆ” ವತಿಯಿಂದ ವಿಜಯನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, 117 ಬಾರಿ ರಕ್ತದಾನ ಮಾಡಿ ಗಿನ್ನಿಸ್ ವಿಶ್ವ ದಾಖಲೆಗೆ ಸೇರ್ಪಡೆಯಾದಂತಹ ಶ್ರೀಮತಿ ಮಧುರಾ ಅಶೋಕ್ ಕುಮಾರ್ ಅವರಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು,
ಕಾರ್ಯಕ್ರಮದಲ್ಲಿ ವಸತಿ ಸಚಿವರಾದ ವಿ ಸೋಮಣ್ಣನವರು ಚಲನಚಿತ್ರ ಖ್ಯಾತ ನಟಿ ಶೃತಿ, ಇಸ್ರೋ ಮಾಜಿ ಅಧ್ಯಕ್ಷರಾದ ಕಿರಣ್ ಕುಮಾರ್ ಮಾಜಿ ಮಂತ್ರಿಗಳಾದ ರಾಣಿ ಸತೀಶ್,ಶೈಲಜಾ ಸೋಮಣ್ಣ, ಖ್ಯಾತ ಹಿನ್ನೆಲೆ ಗಾಯಕರಾದ ಶಶಿಧರ್ ಕೋಟೆ,ಸುಶೀಲಮ್ಮ, ಅಶೋಕ್ ಕುಮಾರ್, ಪಾಲನೇತ್ರ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳು ಹಾಗೂ ನೂರಾರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮಧುರಾ ಅವರನ್ನು ಅಭಿನಂದಿಸಿದರು. ಸಮಾನ ಮನಸ್ಕರ ವೇದಿಕೆಯ ಸುರೇಶ್ ಸ್ವಾಗತಿಸಿದರು. ಉಮೇಶ್ ಚಂದ್ರ ಅಭಿನಂದನಾ ನುಡಿಗಳನ್ನು ಹಾಗೂ ಅರುಣ್ ಕುಮಾರ್ ಡಿ ಟಿ ವಂದನಾರ್ಪಣೆಯನ್ನ ಮಾಡಿದರು. ಅಮೃತಾ ಧೂಪ್ ನಿವರ್ಹಿಸಿದರು.