ಬೆಂಗಳೂರು: ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಹೆಚ್ಚು ಸೀಟ್ ಗೆಲ್ಲುತ್ತೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸರ್ಕಾರ ಬರುತ್ತೆ ಅಂತ ಎಲ್ಲರೂ ಮಾತನಾಡ್ತಿದ್ದಾರೆ. ಎರಡು ಮೂರು ಸಮೀಕ್ಷೆ ನಾನು ಮಾಡಿಸಿದ್ದೇನೆ, ದೆಹಲಿಯವರು ಮಾಡಿಸಿದ್ದಾರೆ.
ಬೈ ಎಲೆಕ್ಷನ್‌ನಲ್ಲಿ ನಾವು ಗೆದ್ದಿದ್ದೇವೆ, ಬಿಜೆಪಿನೂ ಗೆದ್ದಿದೆ. ಎಂಎಲ್ಸಿ ಎಲೆಕ್ಷನ್‌ನಲ್ಲೂ ಕೂಡ ಸಮಾನವಾಗಿ ಗೆದ್ದಿದ್ದೇವೆ. ಶಿಕ್ಷಕರ ಕ್ಷೇತ್ರದಲ್ಲಿ ಯಾವತ್ತು ಗೆದ್ದಿರಲಿಲ್ಲ,ಇವತ್ತು ಗೆದ್ದಿದ್ದೇವೆ. ಶಿಕ್ಷಕರು, ಪದವಿದರರು ನಮ್ಮನ್ನು ಗೆಲ್ಲಿಸಿದ್ದಾರೆ. ಕಾಂಗ್ರೆಸ್‌ಗೆ ವಿದ್ಯಾವಂತರು, ಪ್ರಜ್ಞಾವಂತರು ಮತ ಹಾಕಿದ್ದಾರೆ
ಸಿದ್ದರಾಮೋತ್ಸವ ಜಯಂತಿ ನಡೆಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ನನಗೆ ಅದು ಗೊತ್ತಿಲ್ಲ. ಕಾರ್ಯಕರ್ತರು ಅವರ ಅಭಿಮಾನಿಗಳು ಸೇರಿ 75 ನೇ ವರ್ಷ ಹುಟ್ಟುಹಬ್ಬ ಮಾಡ್ತಿದ್ದಾರೆ. ಇನ್ನು ಬಿಜೆಪಿ ಟೀಕೆ ವಿಚಾರವಾಗಿ ಮಾತನಾಡಿ, ಬಿಜೆಪಿ ಟೀಕೆ ಲೆಕ್ಕಕ್ಕೆ ಇಲ್ಲ. ನನ್ನ ಹುಟ್ಟು ಹಬ್ಬ ನಾನು ಕೇದಾರನಾಥ ಸನ್ನಿದಿಯಲ್ಲಿ ಆಚರಣೆ ಮಾಡಿಕೊಂಡೆ. ಒಬ್ಬೊಬ್ಬರದ್ದು ಒಂದೊಂದು ರೀತಿಯಲ್ಲಿ ಆಚರಣೆ ಮಾಡ್ತಾರೆ. ಅದಕ್ಕೆ ಒಂದು ಸಮಿತಿ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯನವರೇ ನನಗೆ ಹೇಳಿದ್ದಾರೆ ಕಾರ್ಯಕ್ರಮದಲ್ಲಿ ಇರಬೇಕು ಅಂತ ಹೇಳಿದ್ದಾರೆ ನಾನು ಇರ್ತಿನಿ. ರಾಹುಲ್ ಗಾಂಧಿ ಕರೆದಿರಬಹುದು ನನಗೆ ಅದು ಗೊತ್ತಿಲ್ಲ ಎಂದಿದ್ದಾರೆ.
ಇದು ಶಕ್ತಿ ಪ್ರದರ್ಶನಾನ ಅನ್ನೋ ಪ್ರಶ್ನೆಗೆ ಉತ್ತರಿಸಿ, ನಮ್ಮ ಪಾರ್ಟಿಗೆ ಏನೆಲ್ಲ ಅನುಕೂಲ ಬೇಕೋ ಅದನ್ನೆಲ್ಲ ಮಾಡ್ಲಿ. ಖರ್ಗೆ ಅವರು mla ಆಗಿ 50 ವರ್ಷ ಆಗಿದೆ. ಅವರದ್ದು ಕಾರ್ಯಕ್ರಮ ಮಾಡಿ ಅಂತ ಬಂದಿದ್ದಾರೆ. ಪರಮೇಶ್ವರ್ ಸಹ ಅವರದ್ದು ಪುಸ್ತಕ ಬಿಡುಗಡೆ ಕಾರ್ಯಕ್ರಮವಿದೆ ಅಂತ ಮನವಿ ಮಾಡಿದ್ದಾರೆ. ನಾನು ಹೇಳಿದ್ದೆ ನನ್ನ ಹುಟ್ಟು ಹಬ್ಬ ಆಚರಣೆ ಮಾಡಬೇಡಿ, ಫ್ಲೆಕ್ಸ್ ಬ್ಯಾನರ್ ಹಾಕಬೇಡಿ ಎಂದಿದ್ದೆ. ಒಬ್ಬೊಬ್ಬರದ್ದು ಒಂದೊಂದು ಆಸೆ ಇರುತ್ತೆ ಅದನ್ನ ತಪ್ಪು ಅಂತ ಹೇಳೋಕೆ ಆಗಿತ್ತಾ? ಎಂದಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿಕೆಶಿ ಒಳಜಗಳಕ್ಕೆ ರಾಹುಲ್‌ಗಾಂಧಿ ಸಂಧಾನ ನಡೆಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ, ಮಂತ್ರಿಗಿರಿ ಸಿಗದಿದ್ದಾಗಲೇ ನಾನು ಉಸಿರು ಎತ್ತಿಲ್ಲ. ನನ್ನಂತ ನಿಷ್ಟಾವಂತ ಕಾರ್ಯಕರ್ತರನ್ನ ತೋರಿಸಿ. ನಮ್ಮ ಸರ್ಕಾರ ಬಂದಾಗ ನನ್ನನ್ನ ಮಂತ್ರಿ ಮಾಡಿಲ್ಲ. ಆಗಲೂ ನಾನೇನು ಮಾತನಾಡಿಲ್ಲ. ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಚುನಾವಣಾ ಎದುರಿಸಬೇಕು ಅಂತ ಹೋರಾಟ ಮಾಡಿರೋರು ನಾವು. ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷನಾಗಿ ನಾನು ಕೆಲಸ ಮಾಡಿದ್ದೀನಿ. ಅವ್ರ ಸರ್ಕಾರ ಸೋತಾಗಲೂ ಕೂಡ ವಿಪಕ್ಷ ನಾಯಕರನ್ನ ಮಾಡಿದ್ದೇವೆ. ನಮಗೆ ವ್ಯಕ್ತಿ ಮುಖ್ಯ ಅಲ್ಲ,ಪಕ್ಷ ಮುಖ್ಯ. ವ್ಯಕ್ತಿ ಪೂಜೆಗೆ ಗೌರವ ಕೊಡೊದಿಲ್ಲ,ಪಕ್ಷದ ಪೂಜೆಗೆ ಗೌರವ ಕೊಡ್ತೀವಿ. ನನಗೆ ಪಕ್ಷವೇ ಇಂಪಾರ್ಟೆಂಟ್ ಎಂದಿದ್ದಾರೆ.