ಬೆಂಗಳೂರು: ಡಿಸೆಲ್ ಬೆಲೆ 40 ರೂನಿಂದ 91 ರೂ ಆಗಿದೆ. ಪೆಟ್ರೋಲ್ 61 ರಿಂದ 113 ರೂಗೆ ಏರಿದೆ. ಕಾರಣ ಸೆಸ್ ಹೆಚ್ಚು ಮಾಡ್ತಾ ಹೋದ್ರು. 26 ಲಕ್ಷ ಕೋಟಿ ಹೆಚ್ಚುವರಿ ತೆರಿಗೆಯಿಂದ ಬಂದಿದೆ. ಇತ್ತೀಚೆಗೆ ಗ್ಯಾಸ್ ಸಬ್ಸಿಡಿಯನ್ನೂ ನಿಲ್ಲಿಸಿದ್ರು. ಇದು ಮೋದಿಯವರ ಎಂಟು ವರ್ಷದ ಕೊಡುಗೆ ಏನು. 15 ನೇ ಪೇ ಕಮೀಷನ್ ನಲ್ಲಿ 5495 ಕೋಟಿ ಶಿಫಾರಸು. ನಮ್ಮ ರಾಜ್ಯಕ್ಕೆ ಕಮೀಷನ್ ಶಿಫಾರಸು ಮಾಡಿತ್ತು. ಆದರೆ ಈ ಶಿಫಾರಸ್ಸನ್ನೇ ಕೇಂದ್ರ ಅರ್ಥ ಸಚಿವೆ ತೆಗೆಸಿದ್ರು ಎಂದು ಸಿದ್ದರಾಮಯ್ಯ ಅವರು ಹರಿಹಾಯ್ದಿದ್ದಾರೆ.
25 ಬಿಜೆಪಿ ಸಂಸದರು ಇದ್ರೂ ಮಾತನಾಡಲಿಲ್ಲ. ರಾಜ್ಯಕ್ಕೆ ಅನ್ಯಾಯವಾದ ಬಗ್ಗೆ ಧ್ವನಿ ಎತ್ತಲಿಲ್ಲ. ನೋಟ್ ಬ್ಯಾನ್ ಮಾಡಿದ್ರು. ಕಪ್ಪುಹಣ,ಭ್ರಷ್ಟಾಚಾರ ಕಡಿಮೆ ಮಾಡ್ತೇವೆ ಅಂದ್ರು. ಎಲ್ಲಿ ಕಪ್ಪು ಹಣ,ಭಯೋತ್ಪಾದನೆ ಹೋಗಿದ್ಯಾ?. ಇದರ ಬಗ್ಗೆ ಪ್ರಧಾನಿ ಮಾತೇ ಆಡ್ತಿಲ್ಲ ಎಂದು ಪ್ರಧಾನಿವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ದೇಶದ ಸಾಲ ಸುನಾಮಿ ರೀತಿ ಬೆಳೆದಿದೆ. 155 ಲಕ್ಷ ಕೋಟಿ ಸಾಲ ಆಗಿದೆ. 1 ಲಕ್ಷ 70 ಸಾವಿರ ಸಾಲ ಪ್ರತಿಯೊಬ್ಬರ ತಲೆಯ ಮೇಲಿದೆ. 50% ಸಣ್ಣ ಕೈಗಾರಿಕೆಗಳು ಮುಚ್ಚಿಹೋಗಿವೆ. ಕೆಲಸ ಕೇಳಿದ್ರೆ ಪಕೋಡ ಮಾರಿ ಅಂತಾರೆ. ಇವರೆಲ್ಲ ಪಕೋಡ ಮಾರೋಕೆ ಹೋದ್ರೆ ಅಲ್ಲಿರುವವರು ಎಲ್ಲಿಗೆ ಹೋಗ್ಬೇಕು. ಏರ್ಪೋರ್ಟ್ ಬಂದರು ಖಾಸಗೀಕರಣ ಮಾಡ್ತಿದ್ದಾರೆ. ಖಾಸಗೀಕರಣ ಮಾಡಿದ್ರೆ ಮೀಸಲಾತಿ ಸಿಕ್ಕಲ್ಲ. ರೈತರ ಆದಾಯ ದುಪ್ಪಟ್ಟು ಮಾಡ್ತೇವೆಂದ್ರು. ಆದಾಯ ದುಪ್ಪಟ್ಟಾಗಿಲ್ಲ,ಸಾಲ ದುಪ್ಪಟ್ಟಾಗಿದೆ.
ಮೂರು ರೈತ ವಿರೋಧಿ ಕಾನೂನು ತಂದ್ರು. ರೈತರ ಪ್ರತಿಭಟನೆಗೆ ವಾಪಸ್ ಪಡೆದ್ರು. ರೈತರ ಬೆಳೆಗೆ ಎಂಎಸ್ ಪಿ ಬೆಲೆ ಕೊಡಲಿಲ್ಲ. ರೈತರ ಗೊಬ್ಬರ, ಬೀಜದ ಬೆಲೆ ಹೆಚ್ಚಾಯ್ತು. ರೈತರ ಆದಾಯ ಎಲ್ಲಿ ಡಬಲ್ ಆಯ್ತು. ರಾಜ್ಯ ಸರ್ಕಾರವೂ ಸಾಲ ಮಾಡಿದೆ. 70 ಸಾವಿರ ಕೋಟಿ ಸಾಲ ಮಾಡ್ತೇವೆ ಅಂದ್ರು. ಆದರೆ ಕಳೆದ ವರ್ಷ 80 ಸಾವಿರ ಕೋಟಿ ಸಾಲ ಮಾಡಿದ್ರು. ನಾಲ್ಕು ವರ್ಷಗಳಲ್ಲಿ 3 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ದೇಶದಲ್ಲಿ ಒಟ್ಟು 235 ಕೋಟಿ ಸಾಲವಿದೆ. ಇವರ ಕೆಟ್ಟ ಆರ್ಥಿಕ ನೀತಿಯಿಂದ ಈ ಪರಿಸ್ಥಿತಿ ಬಂದಿದೆ ಎಂದು ಕೇಂದ್ರ,ರಾಜ್ಯದ ವಿರುದ್ಧ ಸಿದ್ದು ವಾಗ್ದಾಳಿ ನಡೆಸಿದ್ದಾರೆ.