ಬೆಂಗಳೂರು: ಬೀದರ್ ಜಿಲ್ಲೆ ಔರಾ ಗ್ರಾಮದಲ್ಲಿ ಬ್ರಿಡ್ಜ್ ಬ್ಯಾರೇಜ್ ನಿರ್ಮಾಣ 70 ಕೋಟಿ ಅನುದಾನಕ್ಕೆ ಅನುಮೋದನೆ ಹಲವು ಜಿಲ್ಲೆಗಳಲ್ಲಿ ಕೋರ್ಟ್ ನಿರ್ಮಾಣಕ್ಕೆ ಹಲವು ಕಡೆ ಅನುದಾನ ನೀಡಲಾಗಿದೆ. ಬೆಳಗಾವಿ ಚಿಕ್ಕೋಡಿಯಲ್ಲಿ ಕೋರ್ಟ್ ಗೆ 32 ಕೋಟಿ ಅನುದಾನ ನೀಡಲಾಗಿದೆ. ಮೂಡಿಗೆರೆ ನ್ಯಾಯಾಲಯ 11 ಕೋಟಿ. ಕೋಲಾರದಲ್ಲಿ ಹೊಸ ಕೋರ್ಟ್ 25 ಕೋಟಿ. ಶ್ರೀನಿವಾಸಪುರ ಕೋರ್ಟ್ 15 ಕೋಟಿ. ಬಳ್ಳಾರಿ ಪಾರ್ವತಿನಗರ ಕೋರ್ಟದ 121 ಕೋಟಿ. ರಾಯಚೂರು ಜಿಲ್ಲೆ ಹೊಸ ನ್ಯಾಯಾಲಯ 27.1 ಕೋಟಿ. ದಾವಣಗೆರೆ ಕುಂದವಾಡ ನ್ಯಾಯಾಲಯ 22 ಕೋಟಿ ನೀಡಲಾಗಿದೆ.
ಅಥಣಿ ನಿಪ್ಪಾಣಿ ರಸ್ತೆ ಅಗಲೀಕರಣ 32 ಕೋಟಿ. ಪಾಂಡವಪುರ ಸಕ್ಕರೆ ಕಾರ್ಖಾನೆ ನಿರಾಣಿ ಶುಗರ್ಸ್ ಗ್ರೂಪ್ ಗೆ ಲೀಸ್ ನೀಡಲಾಗಿತ್ತು. ಸ್ಟಾಂಪ್ ಡ್ಯೂಟಿ ರಿಜಿಸ್ಟ್ರೇಷನ್ ವೇಳೆ ಪಾವತಿ ಮಾಡಿರಲಿಲ್ಲ. ಸ್ಟಾಂಪ್ ಡ್ಯೂಟಿ ಸರ್ಕಾರವೇ ವಾವತಿಸಿತ್ತು. 10 ವರ್ಷಗಳಲ್ಲಿ ಅದನ್ನು ವಾಪಸ್ ನೀಡುವಂತೆ ಸೂಚಿಸಿದೆ. ರೇಣುಕಾ ಸಾಗರ ಡ್ಯಾಂ ಕುಡಿಯುವ ನೀರಿನ ಸ್ಕೀಂ 96.6 ಕೋಟಿ ಅನುದಾನ. ಅಮೃತ್ ನಗರೋತ್ಥಾನ ಯೋಜನೆಯ ನಿಯಮಗಳನ್ನು ಕೆಲವು ಬದಲಾವಣೆ ಮಾಡಲಾಗಿದೆ.
ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ರಾಷ್ಟ್ರೋತ್ಥಾನ ಸಂಸ್ಥೆಗೆ ನೀಡಿದ ಜಮೀನು ಶುಲ್ಕ 25% ವಿನಾಯಿತಿ. ಶಿವಮೊಗ್ಗ ವಿಮಾನ ನಿಲ್ದಾಣ ಅಭಿವೃದ್ಧಿ ಗೆ ನೈಟ್ ಲ್ಯಾಂಡಿಂಗ್ ಗೆ ವ್ಯವಸ್ಥೆ. 65.5 ಕೋಟಿ ಹೆಚ್ಚುವರಿ ಅನುದಾನ. ಪೌರ ಕಾರ್ಮಿಕರ ಸಂಕಷ್ಟ ಭತ್ಯೆ ಮಾಸಿಕ 2000 ರೂ. ಅನುಮೋದನೆ. ಬಿಬಿಎಂಪಿ ವ್ಯಾಪ್ತಿಯಲ್ಲೂ ಸರ್ಕಾರವೇ ಸಂಕಷ್ಟ ಪರಿಹಾರ ನಿಧಿ ನೀಡಲಿದೆ.
ದೇವೆಗೌಡರ ಕುರಿತು ಕೆ ಎನ್ ರಾಜಣ್ಣ ಆಕ್ಷೇಪಾರ್ಹ ಹೇಳಿಕೆ ವಿಚಾರವಾಗಿ ಮಾತನಾಡಿದ, ಕಾನೂನು ಸಚಿವ ಮಾಧುಸ್ವಾಮಿ ರಾಜಣ್ಣ ಹೇಳಿಕೆ ಸರಿಯಲ್ಲ. ರಾಜಕಾರಣ ಬೇರೆ ಆ ರೀತಿಯಲ್ಲಿ ಮಾತಾಡಬಾರದು. ನನ್ನ ಸ್ನೇಹಿತ ರಾಜಣ್ಣ. ಹಿರಿಯರ ಬಗ್ಗೆ ಆ ರೀತಿಯಲ್ಲಿ ಮಾತಾಡುವುದು ಸರಿಯಲ್ಲ.
ಔಃಅ ಮೀಸಲಾತಿ ಬಗ್ಗೆ ಭಕ್ತವತ್ಸಲ ಕಮಿಟಿ ಮಾಡಲಾಗಿದೆ. ಅವರು ವರದಿ ಕೊಡಬೇಕಿದೆ. ಶೀಘ್ರವೇ ವರದಿ ಕೊಟ್ಟ ನಂತರ ಅದನ್ನ ಪರಿಗಣಿಸಲಿದ್ದೇವೆ. ಪಂಚಮಸಾಲಿ ಮೀಸಲಾತಿ ಕೂಡ ಔಃಅ ಮೀಸಲಾತಿಯಲ್ಲೇ ಬರಲಿದೆ. ಭಕ್ತ ವತ್ಸಲ ಕಮಿಟಿ ವರದಿಯ ಬಳಿಕ ಎಲ್ಲವೂ ಸ್ಪಷ್ಟವಾಗಲಿದೆ. ಒಬ್ಬರ ಹೇಳಿಕೆ ಮೇಲೆ ಪ್ರತಿಕ್ರಿಯೆ ಸರಿಯಲ್ಲ. ಆದರೆ ರಾಜಣ್ಣನ ಸ್ನೇಹಿತನಾಗಿ ಹೇಳೋದಾದ್ರೆ ಅವರು ಹೇಳಿದ್ದು ಸರಿಯಲ್ಲ. ರಾಜಕಾರಣ ಏನೇ ಇರಲಿ, ಆತರ ಮಾತನಾಡಬಾರದಿತ್ತು ಎಂದಿದ್ದಾರೆ.
ದತ್ತಪೀಠದ ವಿವಾದ ಪರಿಹಾರ ಮಾಡುವ ವಿಚಾರವಾಗಿ ಮಾತನಾಡಿದ್ದು, ರಾಜ್ಯ ಸಚಿವ ಸಂಪುಟ ಉಪಸಮಿತಿಯ ವರದಿ ಸಂಪುಟ ಸಭೆಯಲ್ಲಿ ಮಂಡನೆ. ಸಮಸ್ಯೆ ಪರಿಹಾರಕ್ಕೆ ಶಿಫಾರಸು ಮಾಡಿರುವ ಸಂಪುಟ ಉಪಸಮಿತಿ ವರದಿ. ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ರಚನೆಯಾಗಿದ್ದ ಸಂಪುಟ ಉಪಸಮಿತಿ. ಉಪಸಮಿತಿ ಕೊಟ್ಟಿರುವ ವರದಿಯ ಕುರಿತು ಹೈಕೋರ್ಟ್ ಮುಂದೆ ಪ್ರಮಾಣಪತ್ರ ಹಾಕಲು ತಿರ್ಮಾನ. ಪ್ರಮಾಣಪತ್ರ ಹಾಕಲು ಸಚಿವ ಸಂಪುಟ ಸಭೆಯಲ್ಲಿ ಸಹಮತ ಇದೆ ಎಂದಿದ್ದಾರೆ.