ಜುಲೈ 3 ಮತ್ತು 4 ರಂದು ರಾಯಚೂರಿನಲ್ಲಿ ಕರ್ನಾಟಕ ಜನಶಕ್ತಿಯ 3 ನೇ ರಾಜ್ಯ ಸಮ್ಮೇಳನ

1 Min Read

ಚಿತ್ರದುರ್ಗ,(ಜೂ.27) : ಕರ್ನಾಟಕ ಜನಶಕ್ತಿಯ 3 ನೇ ರಾಜ್ಯ ಸಮ್ಮೇಳನವನ್ನು ಜುಲೈ 3 ಮತ್ತು 4 ರಂದು ರಾಯಚೂರು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮಲ್ಲಿಗೆ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಮತ್ತು ದೇಶದಲ್ಲಿ ಸುವ್ಯವಸ್ಥಿತವಾದ ಬದಲಾವಣೆಗಳು ಆಗುತ್ತಿಲ್ಲ. ಅಧಿಕಾರಕ್ಕೆ ಬಂದವರು ತಮ್ಮ ಇಚ್ಚಾನುಸಾರ ಆದೇಶಗಳನ್ನು ಮಾಡುವ ಮೂಲಕ ದೇಶ , ರಾಜ್ಯದ ಅಭಿವೃದ್ಧಿಯನ್ನು ಕುಂಠಿತ ಮಾಡುತ್ತಿವೆ ಎಂದು ಆರೋಪಿಸಿದರು.

ಇಂದಿನ ಸರ್ಕಾರಗಳಿಂದ ಸಂವಿಧಾನದ ಆಶಯಗಳು ಹಿಡೆರುತ್ತಿಲ್ಲ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳು ಮಾಡಿದ್ದಾರೆ. ನೊಂದವರಿಗೆ ನ್ಯಾಯ ಸಿಗುತ್ತಿಲ್ಲ, ನಿರುದ್ಯೋಗಿ ಯುವ ಜನತೆಗೆ ಉದ್ಯೋಗ ಭದ್ರತೆ ಮರಿಚಿಕೆಯಾಗಿದೆ. ಕೇಂದ್ರ ಸರ್ಕಾರ ಸರ್ಕಾರಿ ಸ್ವಾಮ್ಯದಲ್ಲಿರುವಂತಹ ಎಲ್ಲವನ್ನೂ ಖಾಸಗೀಕರಣ ಮಾಡುವ ಮೂಲಕ ಯುವ ಜನತೆಯಲ್ಲಿ ಆತಂಕ ಅಭದ್ರತೆಯನ್ನು ಉಂಟು ಮಾಡಿದ್ದಾರೆ ಎಂದರು.

ಕೇಂದ್ರದ ಬಿಜೆಪಿ ಸರ್ಕಾರ ತನ್ನ 2 ಅವಧಿಯಲ್ಲಿ ಬೆಲೆ ಏರಿಕೆ ಹಣದೊಬ್ಬರವನ್ನು ಹೆಚ್ಚು ಮಾಡಿದೆ. ಇದರಿಂದಾಗಿ ಗ್ಯಾಸ್ ಸಿಲಿಂಡರ್, ಪೆಟ್ರೋಲ್, ದಿನಸಿ ವಸ್ತುಗಳು ಆರೋಗ್ಯ ಸೇವೆಯ ವಸ್ತುಗಳ ಬೆಲೆಗಳು ತುಟ್ಟಿಯಾಗಿವೆ. ರೈತರನ್ನು ಬೀದಿಗೆ ತರುವಂತಹ ಕಾಯ್ದೆಗಳನ್ನು ಜಾರಿಗೆ ತರಲು ಸರ್ಕಾರ ಮುಂದಾಗಿತ್ತು ಆದರೆ ರೈತರ ತೀವ್ರವಾದ ಹೋರಾಟದ ಫಲವಾಗಿ ಹಿಂಪಡೆಯಲಾಗಿದೆ. ಅಲ್ಪಸಂಖ್ಯಾತರು ದಲಿತರ ಮೇಲೆ ದಾಳಿಗಳು ಹೆಚ್ಚಾಗಿವೆ. ಗೋ ರಕ್ಷಣೆ, ಪೂಜಾ ಸ್ಥಳ, ಮತಾಂತರ, ಹಿಜಾಬ್, ಹಲಾಲ್ ವ್ಯಪಾರ ನಿಷೇಧ ಇಂತಹ ಆಧರ್ಮಿಕ ಕಾರಣಗಳಿಂದ ದೌರ್ಜನ್ಯಗಳು ಹೆಚ್ಚಾಗಿವೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನುಲೇನೂರು ಶಂಕರಪ್ಪ, ರಾಜ್ಯ ಸಮಿತಿ ಸದಸ್ಯ ಸತೀಶ್, ಜಿಲ್ಲಾ ಸಂಚಾಲಕ ಷಫೀವುಲ್ಲಾ ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *