ಬೆಂಗಳೂರು: ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ತುರ್ತು ಪರಿಸ್ಥಿತಿ ವಿರುದ್ಧ, ಫ್ರೀಡಂಪಾರ್ಕ್‌ನಲ್ಲಿ ನಡೆಯುತ್ತಿರೋ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಸಂಸದ ಸದಾನಂದಗೌಡ, ಪಿ.ಸಿ ಮೋಹನ್ ಭಾಗಿ. ಈ ವೇಳೆ ಮಾತನಾಡಿದ ಸದಾನಂದ ಗೌಡ, ನಮ್ಮದೇಶ ಯಾವತ್ತೂ ಸಂವಿಧಾನ ಬದ್ದವಾಗಿರಬೇಕು. ಪ್ರಜಾತಂತ್ರ ಉಳಿಸೋದು ಕೂಡ ಪ್ರಜಾಪ್ರಭುತ್ವ. ಪ್ರಪಂಚದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ. ಇದು ದೇಶ ಪ್ರೇಮದ ಕಾರ್ಯಕ್ರಮ ಎಂದಿದ್ದಾರೆ.
47ವರ್ಷಗಳ ಹಿಂದೆ ತುರ್ತು ಪರಿಸ್ಥಿತಿ ಏರಲಾಗಿತ್ತು. 1947ರ ಸ್ವಾತಂತ್ರ್ಯ ಬಂದ ನಂತರ ಸ್ವಾತಂತ್ರ್ಯ ಮತ್ತೆ ಹರಣ ಆಗಿತ್ತು. ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ತಂದುಕೊಟ್ರು. ವಿಶೇಷವಾದ ಸಂವಿಧಾನ ತಂದುಕೊಡುವ ಕೆಲಸ ಮಾಡಿದ್ರು ಎಂದು ಮಾಜಿ ಸಿಎಂ ಸದಾನಂದಗೌಡ ತುರ್ತು ಪರಿಸ್ಥಿತಿಯ ದಿನಗಳನ್ನು ನೆನೆದಿದ್ದಾರೆ.
ದೇಶದ ಆಡಳಿತ ವ್ಯವಸ್ಥೆಯನ್ನ ಜನರಿಗಾಗಿ ಮಾಡಿಕೊಟ್ಟ ವ್ಯವಸ್ಥೆ ಡಾ.ಬಿ.ಆರ್ ಅಂಬೇಡ್ಕರ್ ಮಾಡಿಕೊಟ್ರು. ದೇಶಕ್ಕೆ ಅದ್ಭುತವಾದ ಸಂವಿದಾನ ತಂದುಕೊಟ್ರು. ವ್ಯಕ್ತಿಗೆ ಬೇಕಾದ ಸ್ವಾತಂತ್ರ್ಯ ಒದಗಿಸಿಕೊಟ್ರು. ಈ ದೇಶದಲ್ಲಿ ನೆಹರು ಅವರು ಸ್ವಾತಂತ್ರ್ಯಕ್ಕೆ ದಕ್ಕೆ ತಂದಾಗ ಸಾಮ್ ಪ್ರಸಾದ್ ಮುಖರ್ಜಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಅದಾದ ಬಳಿಕ ಅವರದೇ ಕುಟುಂಬದ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಏರಿದ್ರು. ನಂತರ ಅವರನ್ನ ಸೋಲಿಸುವ ಕೆಲಸ ಮಾಡಿದ್ರು. ಜೂನ್ 26 1975ರಿಂದ 21ತಿಂಗಳ ಕಾಲ ತುರ್ತು ಪರಿಸ್ಥಿತಿ ಏರಿದ್ರು.
ಯಾಕೆ ಅದನ್ನೇ ಮೆಲುಕು ಹಾಕುವ ಕೆಲಸ ಮಾಡಿದ್ರಿ ಅಂತ ಪ್ರಶ್ನೆ ಮಾಡ್ತೀರಿ ಅಂತ ಪ್ರಶ್ನೆ ಮಾಡ್ತಾರೆ. ಇನ್ನೆಂದೂ ಅಂತ ಪರಿಸ್ಥಿತಿ ಬರದಿರಲಿ ಅಂತ ಈ ದಿನ ಹೋರಾಟ ಮಾಡ್ತಿದ್ದೇವೆ. ನಮ್ಮ ಹಿರಿಯರು ಇಲ್ಲಿ ಜೈಲಿನಲ್ಲಿದ್ರು. ನಮಗೆ ಇದು ಪುಣ್ಯ ಭೂಮಿ. ಇಂದಿರಾಗಾಂಧಿ ಅವರು 1971ರಲ್ಲಿ ಸೋತಾಗ ಮುಂದಿನ ಆರು ವರ್ಷ ಚುನಾವಣೆ ನಿಲ್ಲಬಾರದು ಅಂತ ನಿರ್ಧರಿಸಿದ್ರು. ದೇಶದ ಕಾನೂನನ್ನೇ ಬದಿಗೊತ್ತಿ ದೇಶದಲ್ಲಿ ತುರ್ತು ಪರಿಸ್ಥಿತಿ ಏರಿದ್ರು. ಅಲಹಬಾದ್ ಕೋರ್ಟ್ ತೀರ್ಪು ಬಂದ ಕೂಡಲೇ ತುರ್ತು ಪರಿಸ್ಥಿತಿ ಬಲವಂತವಾಗಿ ಏರಿದ್ರು.
ಅಂದಿನ ರಾಷ್ಟ್ರಪತಿ ಫಕ್ರುದಿನ್ ಅಲಿ, ಆರು ತಿಂಗಳಿಗೊಮ್ಮೆ ತುರ್ತು ಪರಿಸ್ಥಿತಿ ಮುಂದುವರೆಸಿದ್ರು. ಇದು ನಮ್ಮ ದೇಶದ ದುರ್ದೈವದ ಸಂಗತಿ. RSS, ವಿಪಕ್ಷದ ನಾಯಕರು, ಜಯಪ್ರಕಾಶ್ ನಾರಾಯಣ್, ವಾಜಪೇಯಿ, ಅಡ್ವಾನಿ ಎಲ್ಲರನ್ನೂ ಜೈಲಿಗೆ ಹಾಕಿದ್ರು ಎಂದಿದ್ದಾರೆ