ಬೆಂಗಳೂರು: ಮೂವರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತಿದೆ. ಎಸ್.ಎಮ್ ಕೃಷ್ಣ ಅವರನ್ನು ಈ ಸಂಬಂಧ ಅಶ್ವಥ್ ನಾರಾಯಣ್ ಅವರು ಭೇಟಿ ಮಾಡಿ ಬಂದಿದ್ದಾರೆ.
ಭೇಟಿ ಬಳಿಕ ಮಾತನಾಡಿದ ಸಚಿವ ಅಶ್ವತ್ಥ್ ನಾರಾಯಣ್, ಜೂನ್ 27ರಂದು ನಾಡಿನೆಲ್ಲೆಡೆ ನಾಡಪ್ರಭು ಕೆಂಪೇಗೌಡರ ಜನ್ಮದಿನ ಆಚರಿಸಲಾಗುತ್ತದೆ. ಕರ್ನಾಟಕ ಸರ್ಕಾರ ಸಿಎಂ ನೇತೃತ್ವದಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಾಂತ್ ಪ್ರಕಾಶ ವಿಷನ್ ಗ್ರೂಪ್ ಸ್ಟಾರ್ಟಪ್ ಸಂಸ್ಥೆಯವರನ್ನ ಅಧ್ಯಕ್ಷರನ್ನಾಗಿ ಮಾಡಲಾಗಿದೆ.
ಮೋಹನ್ ದಾಸ್ ಪೈ, ಬಾಲಸುಬ್ರಹ್ಮಣ್ಯಂ, ಶಂಕರಲಿಂಗೇಗೌಡರು ಸದಸ್ಯರ ಸಮಿತಿ ಮಾಡಲಾಗಿತ್ತು. ಮೂರು ಜನರಿಗೆ ಅಂತರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಮಾಡಲು ನಿರ್ಧರಿಸಲಾಗಿದೆ. ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರಿಗೆ ಪ್ರಧಾನ ಮಾಡಲಾಗುವುದು. ಬೆಂಗಳೂರು ಕಟ್ಟಿದ ಕೆಂಪೇಗೌಡರ ನೀಡಲಾಗುವುದು. ಸೋಮವಾರ ಬೆಳಗ್ಗೆ 11ಕ್ಕೆ ನೀಡಲಾಗುವುದು. ಇನ್ಫೋಸಿಸ್ ನಾರಾಯಣ ಮೂರ್ತಿ ಅವರಿಗೆ ನೀಡಲಾಗುವುದು. ಕ್ರೀಡಾಪಟು ಪ್ರಕಾಶ್ ಪಡುಕೋಣೆ ಅವರಿಗೆ ನೀಡಲಾಗುವುದು. ಸೋಮವಾರ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಅದಕ್ಕಾಗಿ ಅವರಿಗೆ ತಿಳಿಸಲು ಬಂದಿದ್ದೇನೆ ಎಂದಿದ್ದಾರೆ.