ಬಳ್ಳಾರಿ ಯಲ್ಲಿ ನಡೆಯುತ್ತಿರುವ ನಾ ನಾಯಕಿ ಕಾರ್ಯಕ್ರಮ ದಲ್ಲಿ ಜೂಮ್ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಭಾಗವಹಿಸಿದ್ದಾರೆ. ಉಮಾಶ್ರೀ, ಮೋಟಮ್ಮ, ಪುಷ್ಪಾ ಅಮರನಾಥ್ ಬಳ್ಳಾರಿ ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದಾರೆ.
ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್, ಇಂದು ನಾ ನಾಯಕಿ ಕಾರ್ಯಕ್ರಮ ಉದ್ಘಾಟನೆ ಆಗಿದೆ. ನಾನು ವರ್ಚುವಲ್ ಮೂಲಕ ಭಾಗಿಯಾಗಿದ್ದೇನೆ. ಇದು ನಾ ನಾಯಕಿ ಕಾರ್ಯಕ್ರಮ ಹೆಣ್ಣು ಮಕ್ಕಳ ಶಕ್ತಿ ಕ್ಷಮತೆ ಹೆಚ್ವಿಸುವ ಕಾರ್ಯಕ್ರಮ. ಅವರಿಗೆ ಆತ್ಮಧೈರ್ಯ ಕೊಡುವ ಕಾರ್ಯಕ್ರಮ. ಸರ್ಕಾರದ ಸೌಲಭ್ಯ ಏನಿದೆ, ಮುಂದೆ ಏನು ಮಾಡಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದಿದ್ದಾರೆ.
ಇದೇ ವೇಳೆ ಇಡಿ ವಿಚಾರಣೆ ಬಗ್ಗೆ ಮಾತನಾಡಿ, ನಮಗೆ ರಾಷ್ಟ್ರೀಯ ನಾಯಕರಿಗೆ ತೊಂದರೆ ಕೊಡ್ತಾನೆ ಇದ್ದಾರೆ. ಸೋನಿಯಾ ಗಾಂಧಿ ಟೈಂ ಕೇಳಿದ್ದಾರೆ. ಇಡಿ ಕೇಸ್ ಹೊಸದಾಗಿ ತಿರುಚಲು ಹೊರಟಿದ್ದಾರೆ. ಐದು ದಿನ ವಿಚಾರಣೆ ಅವಶ್ಯಕತೆ ಇರಲಿಲ್ಲ. ಇರಲಿ ನ್ಯಾಯ ದೊರೆಯುತ್ತೆ ಅನ್ನೋ ನಂಬಿಕೆ ಇದೆ. ಮೂರು ವರ್ಷದ ಹಿಂದೆಯೇ ನನ್ನ ಮೇಲೆ ಚರ್ಚ್ ಶೀಟ್ ಹಾಕಬೇಕಿತ್ತು. ಆದರೆ ಈಗ ಹಾಕಿದ್ದಾರೆ ಹಾಕಲಿ. ನಾನು ಎಲ್ಲಾ ದಾಖಲೆ ಕೊಟ್ಟಿದ್ದೇನೆ. ನೋಡೋಣ ಏನಾಗುತ್ತದೆ ಅಂತ.
ಫ್ರೆಶ್ ನೋಟೀಸ್ ಕೊಡೋದಕ್ಕೂ ನಡೀತಾ ಇದೆ, ನೋಡೋಣ. 31-1 ರಂದು ಸಮನ್ಸ್ ಗೆ ಉತ್ತರ ಕೊಡಬೇಕು ಹೋಗಬೇಕು. ಐದು ಜನರನ್ನು ಕರೆದಿದ್ದಾರೆ. ಫಾರ್ಮಲಿಟಿ ಪ್ರಕಾರ ಕಾನೂನು ಏನಿದೆ ಹಾಗೆ ಮಾಡಬೇಕು ಎಂದಿದ್ದಾರೆ.