ಬೆಂಗಳೂರು: 254 ಕೋಟಿ ಯೋಜನೆ ಖಾಸಗಿ ಅವ್ರಿಗೆ ಕೊಡೋಕೆ ಸರ್ಕಾರ ಮುಂದಾಗಬಾರದು ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಹೇಳಿಕೆ ನೀಡಿದ್ದಾರೆ.
ಖಾಸಗಿ ಅವ್ರಿಗೆ ಕೊಟ್ಟರೆ 254 ಕೋಟಿ ಭ್ರಷ್ಟಾಚಾರ ಆಗಲಿದೆ. ಕೂಡಲೇ ಈ ಯೋಜನೆ ಕೈ ಬಿಡಬೇಕು. ಒಂದು ವೇಳೆ ಕಾಗದ ರಹಿತ ಯೋಜನೆ ತರೋದು ಆದ್ರೆ ಕೇಂದ್ರ ಸರ್ಕಾರದ ನೇವಾ ಯೋಜನೆ ಮೂಲಕ ಅನುಷ್ಠಾನ ಮಾಡಬೇಕು. ಗಾಂಧಿ ಪ್ರತಿಮೆಯಲ್ಲಿ ಅಕ್ರಮ ಆಗಿ ನಮ್ಮ ಹೆಸರು ಹಾಳಾಗಿದೆ.
ಸ್ಪೀಕರ್ ಸಾರ್ವಜನಿಕರ ಹಣ ಅಕ್ರಮವಾಗಲು ಬಿಡಬಾರದು. ಸ್ಪೀಕರ್ ನಮ್ಮ ಮನವಿಗೆ ಸ್ಪಂದನೆ ಮಾಡದೇ ಹೋದ್ರೆ ಪ್ರಕರಣದ ಬಗ್ಗೆ ಲೋಕಾಯುಕ್ತಗೆ ದೂರು ನೀಡುತ್ತೇವೆ ಎಂದು ರಮೇಶ್ ಬಾಬು ಹೇಳಿದ್ದಾರೆ.