ಬೆಂಗಳೂರು: ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಹೋರಾಟದ ವಿಚಾರವಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮಾತನಾಡಿದ್ದು, ಬೆಂಗಳೂರಿನಲ್ಲಿ ಹೋರಾಟ ಮಾಡಿದ್ರು. ರಾಜಭವನ ಮುತ್ತಿಗೆ ಹಾಕಿದ್ರಿ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಈ ದೇಶದ ಕಾನೂನಿಗಿಂತ ದೊಡ್ಡವರಲ್ಲ.
ಒಂದು ಕಾಲದಲ್ಲಿ ಕಾಂಗ್ರೆಸ್ ನಿಂದ ಯಾರನ್ನೆ ನಿಲ್ಲಿಸಿದ್ರು ಗೆಲ್ತಾವೆ ಎಂಬ ವಾತಾವರಣವಿತ್ತು. ಸರ್ವಾಧಿಕಾರಿ, ದುರಹಂಕಾರಿಯಾಗಿದ್ದರು, ಆದರೆ ಇವತ್ತು ಬದುಕಿಲ್ಲ. ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಏರಿದ್ರು ಅಂದು ಜನಸಂಘದವರನ್ನು, ಸಮಾಜವಾದಿಗಳನ್ನು ಸೇರಿದಂತೆ ಕಾಂಗ್ರೆಸ್ ವಿರುದ್ಧ ಯಾರೆಲ್ಲ ಇದ್ದರೂ ಅವರನ್ನು ಬಂಧಿಸಿರಲಿಲ್ಲವಾ. 5-6 ತಿಂಗಳು ಜೈಲಿಗೆ ಹಾಕಿರಲಿಲ್ಲವಾ..?
ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರನ್ನು ಮೋದಿ ಸರ್ಕಾರ ಟಾರ್ಗೆಟ್ ಮಾಡಿಲ್ಲ. ಸುಬ್ರಹ್ಮಣ್ಯ ಸ್ವಾಮಿ ಹಾಕಿದ್ದ ಪಿಎಎಲ್ ವಿಚಾರಣೆಗೆ ಬಂದಿದೆ. ಕೋರ್ಟ್ ಗಿಂತ ಯಾರು ದೊಡ್ಡವರಲ್ಲ. ರಾಹುಲ್ ಗಾಂಧಿ ಏನು ಪ್ರಧಾನಮಂತ್ರಿಗಳಾ. ಮೋದಿ ಅವರು ಸಿಎಂ ಆಗಿದ್ದಾಗ ಹಾಗೂ ಅಮೀತ್ ಶಾ ಅವರನ್ನು ಟಾರ್ಗೆಟ್ ಮಾಡಿರಲಿಲ್ಲವಾ. ಕಾಂಗ್ರೆಸ್ ಆತ್ಮಾವಲೋಕ ಮಾಡಿಕೊಳ್ಳಬೇಕು.
ಅಂದು ಕಾಂಗ್ರೆಸ್ ವಿರುದ್ಧ ಇದ್ದವರನ್ನು ಮುಗಿಸಿದ್ರು. ನಾವು ಸೇಡಿನ ರಾಜಕಾರಣ ಮೋದಿ ಸರ್ಕಾರ ಮಾಡಿಲ್ಲ. ಸುಬ್ರಹ್ಮಣ್ಯ ಸ್ವಾಮಿ ಹಾಕಿದ್ದು, ಕೋರ್ಟ್ ಗೆ ಹೋಗಬೇಕಲ್ಲ. ನಾವು ಕಾಂಗ್ರೆಸ್ ನ ಯಾವುದೇ ನಾಯಕರನ್ನು ಟಾರ್ಗೆಟ್ ಮಾಡಿಲ್ಲ. ಯಾವ ಪುರುಷಾರ್ಥಕ್ಕೆ ಹೋರಾಟ. ಜೈಲಿನಲ್ಲಿ ಇರಬೇಕಾದವರು, ದೆಹಲಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ನಾಚಿಕೆ ಆಗಲ್ಲವಾ ಇವರಿಗೆ. ಈಗಾಗಲೇ ದೇಶದಲ್ಲಿ ಕಾಂಗ್ರೆಸ್ ಅಡ್ರೆಸ್ಗೆ ಇಲ್ಲ. ಇದೆ ರೀತಿ ಜನರಿಗೆ ತೊಂದರೆ ಕೊಡ್ತಾ ,ಹೋರಾಟ ಮಾಡಿದ್ರೆ.
ಮುಳುಗಿದ ಹಡುಗು ಕಾಂಗ್ರೆಸ್. ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ತಪ್ಪು ಮಾಡಿದ್ದಾರೆ. ತಪ್ಪುಮಾಡಿದವರು ಪರವಾಗಿ ನೀವು ಇದ್ದೀರಾ ಎಂದ್ರೆ ದೇಶದ ಜನ ನಿಮಗೆ ಪಾಠ ಕಲಿಸುತ್ತಾರೆ. ಬೆಂಗಳೂರಿನಲ್ಲಿ ಪ್ರೊಟೆಸ್ಟ್ ಮಾಡಿದಾಗ ಕೋವಿಡ್ ಹೆಚ್ಚಾಯಿತು. ಕೋರ್ಟ್ ಹೇಳಿದ್ರು ಮೇಕೆದಾಟು ಪಾದಯಾತ್ರೆ ಮಾಡಿದ್ರು. ನಾವು ನಿಯಮಗಳನ್ನು ಪಾಲನೆ ಮಾಡಿಯೇ ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಕೋವಿಡ್ ಸಂಧರ್ಭದಲ್ಲಿ ನಮ್ಮ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದೇವು. ಕಾಂಗ್ರೆಸ್ ನವರು ಬಹು ಲಕ್ಷ ಕೋಟಿ ಹಗರಣ ಮಾಡಿದ್ದಾರೆ. ಖಳನಾಯಕರಾಗಿದ್ದಾರೆ, ಕಾಂಗ್ರೆಸ್ ನವರ ಭಂಡತನ ದೇಶದ ಜನರಿಗೆ ಗೊತ್ತಾಗಿದೆ ಎಂದು ಕಾಂಗ್ರೆಸ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.