ನವದೆಹಲಿ: ಇಂದು ರಾಜ್ಯದ ಬಹುತೇಕ ನಾಯಕರು ದೆಹಲಿಯಲ್ಲಿ ಬೀಡು ಬಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ತಂದಿರುವ ಅಗ್ನಿಪಥ್ ಯೋಜನೆ ಮತ್ತು ರಾಹುಲ್ ಗಾಂಧಿಯನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿರುವುದು ವಿರೋಧಿ ಈ ಪ್ರತಿಭಟನೆ ನಡೆಯುತ್ತಿದೆ.
ಈ ಸಂಬಂಧ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರ ಜೊತೆ ನಾವಿದ್ದೇವೆ. ಧೈರ್ಯವಾಗಿ ನೀವು ಇರಬೇಕು. ಕಾಂಗ್ರೆಸ್ ಕಚೇರಿಗೆ ಪದಾಧಿಕಾರಿಗಳನ್ನು ಬಿಡುತ್ತಿಲ್ಲ. ಎಂಎಲ್ಎಗಳನ್ನು ಬಿಡುತ್ತಿಲ್ಲ. ಸುಮಾರು 54 ಗಂಟೆಗಳ ಕಾಲ ವಿಚಾರಣೆ ನಡೆಸುವ ಅಗತ್ಯವಿಲ್ಲ. ಕಿರುಕುಳ ಕೊಡುವುದರಲ್ಲಿ ಅವರು ಖುಷಿ ಪಡ್ತಾ ಇದ್ದಾರೆ. ನನಗೂ ಕಿರುಕುಳ ಕೊಟ್ಟು ಖುಷಿ ಪಟ್ಟಿದ್ದರು.
ಈ ಘಟನೆ ರಾಜಕೀಯ ಪ್ರೇರಿತವಾದದ್ದು. ನಿನ್ನೆಯೆಲ್ಲ ಇಡಿಯಲ್ಲಿ ಅಡ್ವಕೇಟ್ ಆಗಿ ಕೆಲಸ ಮಾಡಿದವರ ಬಳಿ ಕೇಳಿ ತಿಳಿದುಕೊಂಡಿದ್ದೇನೆ. ಈ ಮನಿ ಲ್ಯಾಂಡ್ರಿಂಗ್ ಬೇರೆಯವರ ದುಡ್ಡು ಲಪಾಟಿಯಿಸಿದ್ದಾರಾ. ಅದೊಂದು ಟ್ರಸ್ಟಿ. ಬೇಕಂತಲೇ ದೂರು ನೀಡಿದ್ದಾರೆ. ವಿಚಾರಣೆ ನಡೆಸಲಿ ಆದರೆ ಅದಕ್ಕೆ ರೀತಿ ನೀತಿ ಅಂತಿರುತ್ತೆ.
ಈಗ ನೋಡಿ ಸೋನಿಯಾಗಾಂಧಿ ಅವರಿಗೆ ಆರೋಗ್ಯ ಸರಿಯಿಲ್ಲ. ನಾವೆಲ್ಲಾ ಮಾನಸಿಕವಾಗಿ ಧೈರ್ಯ ತುಂಬಲು ಇಲ್ಲಿಗೆ ಬಂದಿದ್ದೇವೆ. ಮತ್ತೆ 23 ಕ್ಕೆ ಅವರನ್ನ ವಿಚಾರಣೆಗೆ ಕರೆದಿದ್ದಾರೆ. ನೋಡೋಣಾ ಮುಂದೆ ಏನಾಗುತ್ತೆ ಎಂದಿದ್ದಾರೆ.