ಬೆಂಗಳೂರು: ಮೈಸೂರಿನಿಂದ ಬೆಂಗಳೂರಿಗೆ ವಾಪಸ್ ಆದ ಸಿಎಂ ಬೊಮ್ಮಾಯಿ ಅವರು ಆರ್.ಟಿ.ನಗರ ನಿವಾಸಕ್ಕೆ ಆಗಮಿಸಿದ್ದಾರೆ. ಈಗಾಗಲೇ ಪ್ರಧಾನಿ ಮೋದಿ ಅವರು ಬೊಮ್ಮಾಯಿ ಅವರ ಆಡಳಿತವನ್ನು ಹೊಗಳಿದ್ದಾರೆ. ಆ ಬಗ್ಗೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಮೋದಿಯವರು ಯಾವಾಗಲೂ ಸುಶಾಸನ, ಅಭಿವೃದ್ಧಿ ಪರ ಆಡಳಿತ ಮೆಚ್ಚಿಕೊಂಡವರು ಎಂದಿದ್ದಾರೆ.
ರಾಜ್ಯದಲ್ಲೂ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಮತ್ತು ಜನಪರ ಯೋಜನೆಗಳ ಜಾರಿ ಆಗಿದೆ. ಕೇಂದ್ರವು ದೊಡ್ಡ ಪ್ರಮಾಣದಲ್ಲಿ ಹಣ ನೀಡಿ ಅವರ ಸಹಭಾಗಿತ್ವದಲ್ಲಿ ಹಲವು ಯೋಜನೆಗಳನ್ನು ಜಾರಿ ಮಾಡಿರೋದನ್ನು ಅವರು ನೋಡಿದ್ದಾರೆ. ಮೋದಿಯವರ ಮೆಚ್ಚುಗೆ ನನಗೆ ದೊಡ್ಡ ಶಕ್ತಿ ನೀಡಿದೆ. ನಾನು ಇನ್ನಷ್ಟು ಬದ್ಧತೆಯಿಂದ, ಇನ್ನಷ್ಟು ದಕ್ಷತೆಯಿಂದ ಕೆಲಸ ಮಾಡಲು ಅವರ ಮೆಚ್ಚುಗೆ ಪುಷ್ಟಿ ಕೊಟ್ಟಿದೆ
ಪಿಎಂ ಮೋದಿ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಇವತ್ತೇನಾದರೂ ಕೋವಿಡ್ ಅನ್ನು ಇಡೀ ದೇಶದಲ್ಲಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಅಂದ್ರೆ ಅದು ಮೋದಿಯವರು. ಕರ್ನಾಟಕಕ್ಕೆ ಕೋವಿಡ್ ನಿರ್ಬಹಣೆಗೆ ಸಾವಿರಾರು ಕೋಟಿ ಕೊಟ್ಟಿದ್ದಾರೆ. ಔಷಧಿ, ಲಸಿಕೆ, ಉಪಕರಣಗಳು, ಆಕ್ಸಿಜನ್. ಆಕ್ಸಿಜನ್ ಉತ್ಪಾದಿಸುವ ಯಂತ್ರಗಳನ್ನು, ವೆಂಟಿಲೇಟರ್ ಗಳನ್ನು ಕಳಿಸಿದ್ದಾರೆ. ರಾಜಕೀಯವಾಗಿ ಮಾತಾಡಬೇಕು ಅಂತ ಮಾತಾಡಿದರೆ ಅದಕ್ಕೆ ಅರ್ಥ ಇರಲ್ಲ. ಜನರಿಗೆ ಎಲ್ಲವೂ ನೆನಪು ಇರುತ್ತದೆ. ಮೋದಿಯವರು ರಾಜ್ಯಕ್ಕೆ ಏನ್ ಸಹಾಯ ಮಾಡಿದ್ದಾರೆ ಅಂತ ಜನಕ್ಕೆ ಗೊತ್ತಿದೆ. ಅವರ ಜನಪ್ರಿಯತೆ ನೋಡಿ ಈ ತರ ಮಾತಾಡ್ತಿದ್ದಾರೆ ಎಂದು ಸಿದ್ದರಾಮಯ್ಯ ಗೆ ಸಿಎಂ ತಿರುಗೇಟು ನೀಡಿದ್ದಾರೆ.