ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಹಲವು ದಿಗ್ಗಜರಿಗೆ ಅವಮಾನವಾಗಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಬಾಲಗಂಗಾಧರನಾಥ ಸ್ವಾಮೀಜಿ ಇತಿಹಾಸ, ಶಿವಕುಮಾರ ಸ್ವಾಮೀಜಿ ಇತಿಹಾಸ, ಶಂಕರಾಚಾರ್ಯರು ಎಲ್ಲರ ಬಗ್ಗೆಯೂ ಪಠ್ಯದಲ್ಲಿ ಅವಮಾನ ಆಗಿದೆ. ಕೆಲವು ಸ್ವಾಮೀಜಿಗಳು ಟ್ವೀಟ್ ಮಾಡಿ ದೂರು ಕೊಡುವ ಕೆಲಸ ಮಾಡಿದ್ದಾರೆ. ಆದರೆ ಇನ್ನಷ್ಟು ಸ್ವಾಮೀಜಿಗಳು ಧ್ವನಿ ಎತ್ತಬೇಕು
ಸ್ವಾಮೀಜಿಗಳು ರಾಜಕಾರಣಕ್ಕೆ ಬೆಂಬಲ ಕೊಡುವುದು ಬೇಡ. ಅವರು ಇರುವುದು ಸಂಸ್ಕೃತಿ ನ್ಯಾಯ ಉಳಿಸಲು ಸ್ವಾಮೀಜಿಗಳು ಇರುವುದು ಪ್ರಯತ್ನ ಮಾಡ್ತಿರುವುದು. ಸರ್ಕಾರಕ್ಕೆ ಹೆದರಿಕೊಂಡು ಸ್ವಾಮೀಜಿಗಳು ಸುಮ್ಮನಿರುವುದು ಬೇಡ. ಅವರೇ ಧ್ವನಿ ಎತ್ತದಿದ್ದರೆ ಯಾರು ಎತ್ತಬೇಕು?
ಒಂದು ಜಾತಿ ಧರ್ಮದ ವಿಚಾರ ಅಲ್ಲ. ಎಲ್ಲರೂ ಕೂಡ ಒಗ್ಗಟ್ಟು ಇರಬೇಕು. ಶಾಂತಿ ಭಂಗ ಮಾಡುವ ಕೆಲಸ ಸರ್ಕಾರ ಮಾಡ್ತಿದೆ. ಅವಮಾನ ಆದಾಗ ಒಕ್ಕಲಿಗರ ಸಂಘ ಯಾಕೆ ಮಾತಾಡ್ತಿಲ್ಲ? ಬೇರೆ ಸಂಘಟನೆಗಳು ಯಾಕೆ ಮಾತಾಡ್ತಿಲ್ಲ?. ರಾಜಕಾರಣಿಗಳು ಕೆಲವರು ಅಡ್ಸಜ್ಟ್ ಮಾಡ್ಕೊಂಡು ರಾಜಕಾರಣ ಮಾಡ್ತಿರಬಹುದು. ಆದರೆ ಇದರಲ್ಲಿ ಹಾಗೆ ಇರಬಾರದು ಎಂದಿದ್ದಾರೆ.